For Quick Alerts
ALLOW NOTIFICATIONS  
For Daily Alerts

ಭಾರತವನ್ನು ತಲ್ಲಣಗೊಳಿಸಿರುವ ಟಾಪ್ 10 ಹಗರಣಗಳು

By Siddu
|

ಭ್ರಷ್ಟಾಚಾರ, ಅರಾಜಕತೆ, ಅನಕ್ಷರತೆ, ಅದಕ್ಷತೆ, ರಾಜಕೀಯ ಬಿಕ್ಕಟ್ಟು, ಬಡತನ, ಅನಾರೋಗ್ಯ, ಕಳಪೆ ಜೀವನಮಟ್ಟ, ಆರ್ಥಿಕ ಅಸ್ಥಿರತೆ, ದರೋಡೆ, ಲೈಂಗಿಕತೆ ಹೀಗೆ ಹಲವು ಹಗರಣಗಳು ಒಂದು ದೇಶದಲ್ಲಿನ ಅತಿ ಕೆಟ್ಟ ಸಂಗತಿಗಳಾಗಿವೆ.

ಜಗತ್ತಿನ ಟಾಪ್ 10 ಅತಿ ಭ್ರಷ್ಟ ರಾಷ್ಟ್ರಗಳು

ಇವರು ಭಾರತದ ಅತ್ಯಂತ ಭ್ರಷ್ಟ ರಾಜಕಾರಣಿಗಳು

ಅಕ್ರಮ ಸಂಪತ್ತು, ಅವ್ಯವಹಾರ, ನಕಲಿ ದಾಖಲೆ, ಷೇರುಪೇಟೆ ತಪ್ಪು ಮಾಹಿತಿ ಹೀಗೆ ಭಾರತವನ್ನು ಕಾಡಿದ, ಕಾಡುತ್ತಿರುವ ಪ್ರಮುಖ 10 ಹಗರಣ/ಭ್ರಷ್ಟಾಚಾರ ಪ್ರಕರಣಗಳ ವಿವರ ಇಲ್ಲಿದೆ ನೋಡಿ... (ಭ್ರಷ್ಟಾಚಾರ)

1. ಕಲ್ಲಿದ್ದಲು ಹಗರಣ
 

1. ಕಲ್ಲಿದ್ದಲು ಹಗರಣ

ನಡೆದ ವರ್ಷ:2012

ಹಗರಣದ ಮೊತ್ತ: 1,86,000 ಕೋಟಿ

2G ಸ್ಪೇಕ್ಟ್ರಂ ಹಗರಣವೇ ದೇಶದಲ್ಲಿನ ಅತಿದೊಡ್ಡ ಹಗರಣ ಎಂದು ಕೆಲವರು ಭಾವಿಸುತ್ತಾರೆ. ಆದರೆ ಕಲ್ಲಿದ್ದಲು ಹಗರಣದ ಮೊತ್ತ ಕೇಳಿದರೆ ಬೆರಗಾಗುತ್ತಿರಿ! ಈ ಹಗರಣ ಒಟ್ಟು ಮೊತ್ತ 1.86 ಲಕ್ಷ ಕೋಟಿ. ಯುಪಿಎ ಸರ್ಕಾರದ ಅತಿದೊಡ್ಡ ಹಗರಣ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ನಡೆದು 2012ರಲ್ಲಿ ಬೆಳಕಿಗೆ ಬಂತು. ಇದು ಪಿಎಸ್ಯು(PSU) ಮತ್ತು ಖಾಸಗಿ ಕಂಪೆನಿಗಳಿಗೆ ದೇಶದ ಕಲ್ಲಿದ್ದಲು ಠೇವಣಿ ಹಂಚಿಕೆ ಸಂಬಂಧಿಸಿದ UPA ಸರ್ಕಾರ ಹಗರಣ. 155 ಎಕರೆ ಗಣಿಯನ್ನು ಬೇಕಾದ ಕಂಪನಿಗಳಿಗೆ ಹಂಚಿಕೆ ಮಾಡಿದ ಆರೋಪ ಹಾಗೂ ಕಡಿಮೆ ಬೆಲೆಗೆ ಬಿಡ್ಡಿಂಗ್ ಮಾಡಿದ ಆರೋಪ ಯುಪಿಎ ಸರ್ಕಾರದ ಮೇಲಿದೆ.

2. 2G ಸ್ಪೇಕ್ಟ್ರಂ ಹಗರಣ

ನಡೆದ ವರ್ಷ: 2008

ಹಗರಣದ ಮೊತ್ತ: 1,76,000 ಕೋಟಿ

2ಜಿ ಸ್ಪೆಕ್ಟ್ರಂ ಇಡೀ ಜಗತ್ತನ್ನೆ ಬೆಚ್ಚಿಬೀಳಿಸಿದ ಹಗರಣ. 2ನೇ ಜನರೇಷನ್ ತರಂಗಗುಚ್ಛಗಳನ್ನು ಹಂಚಿಕೆ ಮಾಡುವಲ್ಲಿ ನಡೆದ ಅವ್ಯವಹಾರ ಇದಾಗಿದೆ. ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂಪಾಯಿಯಷ್ಟು ಭಾರಿ ನಷ್ಟ ಉಂಟು ಮಾಡಿರುವ ಹಗರಣ ಇದಾಗಿತ್ತು. 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕರುಣಾನಿಧಿ, ಎ. ರಾಜಾ, ಕನಿಮೋಳಿ, ನೀರಾ ರಾಡಿಯಾ ಹೆಸರುಗಳು ಕೇಳಿಬಂದಿದ್ದವು.

3. ವಕ್ಫ್ ಮಂಡಳಿ ಭೂ ಹಗರಣ

ನಡೆದ ವರ್ಷ: 2012

ಹಗರಣದ ಮೊತ್ತ: 1,50,000 ಕೋಟಿ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಣಿಪ್ಡಿ 27,000 ಎಕರೆ ಭೂಮಿ ದುರುಪಯೋಗದ ಬಗ್ಗೆ ನೀಡಿದ ಅಘಾತಕಾರಿ ವರದಿ ನೀಡಿದ್ದರು. ಕರ್ನಾಟಕ ವಕ್ಫ್ ಮಂಡಳಿಯಿಂದ ನಿಯಂತ್ರಿಸಲ್ಪಟ್ಟಿದ್ದ ಭೂಮಿಯನ್ನು ಕಾನೂನುಬಾಹಿರವಾಗಿ ದುರುಪಯೋಗಪಡಿಸಲಾಗಿತ್ತು. ದುರುಪಯೋಗಕ್ಕೆ ಒಳಗಾದ ಭೂಮಿಯ ಮೌಲ್ಯ ಭರ್ತಿ 1.5-2 ಲಕ್ಷ ಕೋಟಿ!

ಮುಸ್ಮೀಂ ಸಮುದಾಯದ ದುರ್ಬಲ ನಿರ್ಗತಿಕ ಮತ್ತು ಬಡ ಜನರಿಗೆ ದಾನವಾಗಿ ನೀಡಲ್ಪಟ್ಟ ಮತ್ತು ವಕ್ಫ್ ಮಂಡಳಿಯಿಂದ ನಿರ್ವಹಿಲ್ಪಟ್ಟ ಭೂಮಿಯಾಗಿದೆ.

4. ಕಾಮನ್ ವೆಲ್ತ್ ಹಗರಣ
 

4. ಕಾಮನ್ ವೆಲ್ತ್ ಹಗರಣ

ನಡೆದ ವರ್ಷ: 2010

ಹಗರಣದ ಮೊತ್ತ: 70,000 ಕೋಟಿ

2010ರ ಕಾಮನ್ ವೆಲ್ತ್ ಹಗರಣ ಆಯೋಜಕ ಸಮಿತಿ ಚೇರ್ಮನ್ ಸುರೇಶ್ ಕಲ್ಮಾಡಿ ತಲೆದಂಡಕ್ಕೆ ಕಾರಣವಾಯಿತು. ಕ್ರೀಡಾಕೂಟದ ಪರಿಕರ ಖರೀದಿ, ಆಯೋಜನೆ ಗುತ್ತಿಗೆ ನೀಡುವಲ್ಲಿ 141 ಕೋಟಿ ಅವ್ಯವಹಾರ ನಡೆದಿರುವ ಆರೋಪವನ್ನು ಕಲ್ಮಾಡಿ ಎದುರಿಸಿದ್ದರು. 2010ರಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ಗಾಗಿ ಟೈಮಿಂಗ್, ಸ್ಟೋರಿಂಗ್ ಮತ್ತು ರಿಸಲ್ಟ್ ವ್ಯವಸ್ಥೆಯನ್ನು ಅಳವಡಿಸಲು ಸ್ವಿಜರ್‌ಲೆಂಡ್‌ನ ಒಮೆಗಾ ಸಂಸ್ಥೆಗೆ ಹೆಚ್ಚುವರಿ ಮೊತ್ತ ತೋರಿಸಿ ಗುತ್ತಿಗೆ ನೀಡಲಾಗಿತ್ತು. ಇದರಿಂದ ಸರ್ಕಾರಕ್ಕೆ 70 ಸಾವಿರ ಕೋಟಿ ನಷ್ಟವುಂಟಾಗಿತ್ತು. ಕಲ್ಮಾಡಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ 1996-2011ರವರೆಗೆ ಕಾರ್ಯನಿರ್ವಹಿಸಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ ನಲ್ಲಿನ ಹಗರಣ ಸಂಬಂಧ 10 ತಿಂಗಳ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

5. ತೆಲಗಿ ಹಗರಣ

ನಡೆದ ವರ್ಷ: 2002

ಹಗರಣದ ಮೊತ್ತ: 20,000 ಕೋಟಿ

ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ. ಸಾಮಾನ್ಯವಾಗಿ ಎಲ್ಲಾ ಹಗರಣಗಳ ಹಿಂದಿನ ಪ್ರಮುಖ ಉದ್ದೇಶವೆಂದರೆ ಸುಲಭವಾಗಿ ಹಣ ಮಾಡುವುದು. ನಕಲಿ ಛಾಪಾ ಕಾಗದಗಳ ಮುದ್ರಣ ಮಾಡಿ ಬ್ಯಾಂಕು ಮತ್ತು ಸಂಸ್ಥೆಗಳಿಗೆ ಮಾರಾಟ ಮಾಡುವಲ್ಲಿ ಅಬ್ದುಲ್ ಕರೀಂ ಲಾಲ್ ತೆಲಗಿ ನಿಸ್ಸೀಮ. ಈ ಮೂಲಕ 20,000 ಕೋಟಿಗೂ ಹೆಚ್ಚು ಹಣ ಮಾಡಿದ್ದ.

6. ಸತ್ಯಂ ಹಗರಣ

ನಡೆದ ವರ್ಷ: 2009

ಹಗರಣದ ಮೊತ್ತ: 14,000 ಕೋಟಿ

ಕಾರ್ಪೋರೇಟ್ ಇತಿಹಾಸದಲ್ಲಿನ ಅತಿ ದೊಡ್ಡ ಹಗರಣ. 2009ರಲ್ಲಿ ಬೆಳಕಿಗೆ ಬಂದ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಹಗರಣ ಭಾರತ ಕಂಡ ಅತಿ ದೊಡ್ಡ ಕಾರ್ಪೊರೇಟ್ ಹಗರಣವಾಗಿದೆ. ಕಂಪನಿಯ ಆರ್ಥಿಕ ದಾಖಲೆಗಳನ್ನು ತಿದ್ದಿದ್ದಲ್ಲದೆ ಸ್ವಜನ ಪಕ್ಷಪಾತ ಮಾಡಿದ ಆರೋಪದ ಮೇಲೆ ಚೇರ್ಮನ್ ರಾಮಲಿಂಗ ರಾಜು ಜೈಲು ಸೇರಬೇಕಾಯಿತು.

7. ಬೊಫೊರ್ಸ್ ಹಗರಣ

ನಡೆದ ವರ್ಷ: 1980-90

ಹಗರಣದ ಮೊತ್ತ: 100-200 ಕೋಟಿ

ಬೋಫೋರ್ಸ್ ಹಗರಣವನ್ನು ಭಾರತೀಯ ಭ್ರಷ್ಟಾಚಾರದ ನುದ್ರೆ(ಹಾಲ್ ಮಾರ್ಕ್) ಎಂದು ಕರೆಯಲಾಗುತ್ತದೆ. 1980-90 ರ ದಶಕದ ಅತಿದೊಡ್ದ ಹಗರಣ ಇದಾಗಿದೆ.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಹಿಂದುಜಾಸ್ ಎನ್ನಾರೈ ಕಟುಂಬ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಹೊರೆಸಲಾಗಿತ್ತು. 155 ಎಂಎಂ ಫಿರಂಗಿ ಗಳನ್ನು ಬೊಫೋರ್ಸ್ ಎಬಿ ಕಂಪನಿಯಿಂದ ಖರೀದಿಸಲು ಕಿಕ್ ಬ್ಯಾಕ್ ಪಡೆದ ಆರೋಪ ಗಾಂಧಿ ಕುಟುಂಬವನ್ನು ಅಲುಗಾಡಿಸಿತ್ತು. ಸ್ವೀಡಿಷ್ ಮೂಲದ ಕಂಪನಿ 640 ಮಿಲಿಯನ್ ರು(12 ಮಿಲಿಯನ್ ಯುಎಸ್ ಡಾಲರ್) ಮೊತ್ತದ ಕಿಕ್ ಬ್ಯಾಕ್ ಅನ್ನು ಹಿರಿಯ ರಾಜಕಾರಣಿಗೆ ನೀಡಿದ ಬಗ್ಗೆ ಮಾಹಿತಿ ಹೊರ ಬಿದ್ದಿತ್ತು. ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ರಕ್ಷಣಾ ಸಚಿವರಾಗಿದ್ದ ಕಾಲದಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು.

8. ಮೇವು ಹಗರಣ

ನಡೆದ ವರ್ಷ: 1990

ಹಗರಣದ ಮೊತ್ತ: 1000 ಕೋಟಿ

ದೇಶ ಕಂಡ ಭ್ರಷ್ಟ ರಾಜಕಾರಣಿಗಳ ಸಾಲಿನಲ್ಲಿ ಲಾಲು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಪ್ರಚಾರ ಮತ್ತು ಅಧಿಕಾರದ ಗೀಳಿನಿಂದ ಲಾಲು ಸಾಕಷ್ಟು ಪ್ರಸಿದ್ದಿ ಪಡೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಲಾಲೂ ಪ್ರಸಾದ್ ಯಾದವ್ ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲುವಾಸಿಯಾಗಿದ್ದರು. ಸುಮಾರು 20 ವರ್ಷಗಳ ಹಿಂದೆ ನಡೆದಿದ್ದ 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್‌ ಯಾದವ್‌ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದವು. ಚೈಬಸಾ ಖಜಾನೆಯಿಂದ 37.7 ಕೋಟಿ ವಂಚಿಸಿರುವ ಆರೋಪವನ್ನು ಲಾಲು ಎದುರಿದ್ದಾರೆ. ಬಿಹಾರದ ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 20 ವರ್ಷಗಳ ಕಾಲ ನಡೆದ ಈ ಲೂಟಿ ತಡವಾಗಿ ಬೆಳಕಿಗೆ ಬಂದಿತ್ತು. ಲಾಲು ದೇಶದ ಅತ್ಯಂತ ಭ್ರಷ್ಟ ರಾಜಕಾರಣಿಯಾಗಿದ್ದು, ಭಾರತ ಸರ್ಕಾರದಿಂದ ಲೆಕ್ಕವಿಲ್ಲದಷ್ಟು ಹಣ ದೋಚಿದ್ದಾರೆ.

9. ಹವಾಲ ಹಗರಣ

ನಡೆದ ವರ್ಷ: 1990-91

ಹಗರಣದ ಮೊತ್ತ: 100 ಕೋಟಿ

1996ರಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು. ಹವಾಲ ದಲ್ಲಾಳಿಗಳ ಮೂಲಕ ದೇಶದ ಪ್ರಮುಖ ರಾಜಕಾರಣಿಗಳು ಲಂಚ ಸ್ವೀಕರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಆಪಾದಿತರ ಪಟ್ಟಿಯಲ್ಲಿ ಪ್ರತಿಭಟನಾ ನಾಯಕರಾಗಿದ್ದ ಲಾಲ್ ಕೃಷ್ಣ ಆಡ್ವಾಣಿ ಕೂಡ ಸೇರಿದ್ದಾರೆ.

10. ಹರ್ಷದ್ ಮೆಹ್ತಾ-ಕೇತನ್ ಫರೆಖ್ ಹಗರಣ

ನಡೆದ ವರ್ಷ: 1992

ಹಗರಣದ ಮೊತ್ತ: 5,000 ಕೋಟಿ

1991-92 ರಲ್ಲಿ ಷೇರುಮಾರುಕಟ್ಟೆ ಸುರಕ್ಷತೆ ಹಗರಣ, ಹರ್ಷದ್ ಮೆಹ್ತಾ ಅವರು ಬ್ಯಾಂಕ್ ಹಾಗೂ ಸ್ಟಾಕ್ ಮಾರುಕಟ್ಟೆಯಲ್ಲಿ ಮೂಡಿಸಿದ ಸಂಚಲನದಿಂದಾಗಿ ಎಸಿಸಿಯಂಥ ಷೇರುಗಳು 500 ರೂ. ಮೌಲ್ಯದಿಂದ 10,000ಕ್ಕೇರಿತ್ತು. ಸುಮಾರು 10,000 ಕೋಟಿ ಮೌಲ್ಯದ ಹಗರಣ ಇದಾಗಿದೆ. ಹಗರಣ ಬೆಳಕಿಗೆ ಬಂದ ಮೇಲೆ ಹರ್ಷದ್ ಮೆಹ್ತಾ ಬಂಧನವಾಯ್ತು, ಷೇರುಪೇಟೆ ವ್ಯವಹಾರ ನಡೆಸದಂತೆ ನಿಷೇಧ ಹೇರಲಾಯಿತು. ಕೇತನ್ ಪಾರೇಖ್ ಹಗರಣ 2001ರಲ್ಲಿ ಹೂಡಿಕೆದಾರರಿಗೆ ಕಳ್ಳ ಮಾರ್ಗ ಹಾಕಿಕೊಟ್ಟು ಅಲಹಾಬಾದ್ ಹಾಗೂ ಕೋಲ್ಕತ್ತಾ ಷೇರು ಪೇಟೆಯನ್ನು ಅಲ್ಲಾಡಿಸಿದ ಕೇತನ್ ಪಾರೇಖ್ k-10 ಸೂಚ್ಯಂಕ ಎಂದು ತನ್ನದೇ ಬದಲಿ ವ್ಯವಸ್ಥೆ ಸ್ಥಾಪಿಸಿ ಸುಮಾರು 1 ಲಕ್ಷ ಕೋಟಿ ರೂ. ದೋಚಿದ್ದ ಎಂದು ಆರೋಪಿಸಲಾಗಿದೆ.

English summary

Top 10 Corruption Scandals in India

While many think that 2G scam remains the biggest one in size in India. But this coal allocation scam dwarfs it by the amount involved. This scam is in regards to Indian Government’s allocation of nation’s coal deposit to PSU’s and private companies.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more