For Quick Alerts
ALLOW NOTIFICATIONS  
For Daily Alerts

ಭಾರತದ ಅತಿಹೆಚ್ಚು ಲಾಭದಾಯಕ ಕಂಪನಿಗಳು ಯಾವುವು?

ಇಂಡಿಯನ್ ಆಯಿಲ್ ಕಾರ್ಪೊರೇಷನ್(IOC) ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್(ONGC) ಸಂಸ್ಥೆಯನ್ನು ಹಿಂದಿಕ್ಕಿ, ಭಾರತದ ಸರ್ಕಾರಿ ಸ್ವಾಮ್ಯದ ಅತ್ಯಂತ ಲಾಭದಾಯಕ ಕಂಪೆನಿ ಎನಿಸಿದೆ.

By Siddu
|

ಇಂಡಿಯನ್ ಆಯಿಲ್ ಕಾರ್ಪೊರೇಷನ್(IOC) ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್(ONGC) ಸಂಸ್ಥೆಯನ್ನು ಹಿಂದಿಕ್ಕಿ, ಭಾರತದ ಸರ್ಕಾರಿ ಸ್ವಾಮ್ಯದ ಅತ್ಯಂತ ಲಾಭದಾಯಕ ಕಂಪೆನಿ ಎನಿಸಿದೆ.

ದಶಕಗಳವರೆಗೆ ವಹಿವಾಟು ನಡೆಸಿದ ಭಾರತದ ಅತಿದೊಡ್ಡ ಕಂಪೆನಿಯಾಗಿರುವ ಐಒಸಿ ನಿವ್ವಳ ಲಾಭದಲ್ಲಿ ಶೇ. 70ರಷ್ಟು ಏರಿಕೆ ಕಂಡಿದ್ದು, ಮಾರ್ಚ್ 31, 2017 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ರೂ. 19,106.40 ಕೋಟಿ ನಿವ್ವಳ ಲಾಭ ಕಂಡಿದೆ. ಖಾಸಗಿ ವಲಯದ ರಿಲಯನ್ಸ್, ಟಿಸಿಎಸ್ ಇವು ಪ್ರಮುಖ ಲಾಭದಾಯಕ ಕಂಪನಿಗಳಾಗಿವೆ.

ರಿಲಯನ್ಸ್ ಇಂಡಸ್ಟ್ರಿಸ್

ರಿಲಯನ್ಸ್ ಇಂಡಸ್ಟ್ರಿಸ್

ದೇಶದ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆ ಸತತ ಮೂರನೇ ವರ್ಷ ಭಾರತದ ಅತ್ಯಂತ ಲಾಭದಾಯಕ ಕಂಪನಿ ಎಂಬ ಕಿರೀಟ ತನ್ನ ಮುಡಿಗೆರಿಸಿದೆ. 2016-17ರ ಹಣಕಾಸು ವರ್ಷದಲ್ಲಿ ರೂ. 29,901 ಕೋಟಿ ನಿವ್ವಳ ಲಾಭ ಪಡೆದಿದೆ.

ಟಿಸಿಎಸ್

ಟಿಸಿಎಸ್

ದೇಶದ ಅತಿದೊಡ್ಡ ಸಾಪ್ಟವೇರ್ ರಪ್ತು ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್(TCS) ದೇಶದ ಎರಡನೇ ಅತ್ಯಂತ ಲಾಭದಾಯಕ ಕಂಪನಿ ಎನಿಸಿದೆ. ಇದು ರೂ. 26,357 ಕೋಟಿ ನಿವ್ವಳ ಲಾಭ ಗಳಿಸಿದೆ.

ಅತ್ಯಂತ ಲಾಭದಾಯಕ ಕಂಪನಿ

ಅತ್ಯಂತ ಲಾಭದಾಯಕ ಕಂಪನಿ

ಸಾರ್ವಜನಿಕ ವಲಯದ ಒಎನ್ಜಿಸಿ ದೀರ್ಘಕಾಲದಿಂದ ದೇಶದ ಅತ್ಯಂತ ಲಾಭದಾಯಕ ಕಂಪನಿ ಎಂಬ ಕಿರೀಟ ಹೊಂದಿತ್ತು. ಆದರೆ ಕಳೆದೆರಡು ವರ್ಷಗಳಿಂದ ಖಾಸಗಿ ವಲಯದ ರಿಲಯನ್ಸ್ ಇಂಡಸ್ಟ್ರಿಸ್ ಮತ್ತು ಟಿಸಿಎಸ್ ನಿಂದಾಗಿ ಅತ್ಯಂತ ಲಾಭದಾಯಕ ಕಂಪನಿ ಎಂಬ ಕಿರೀಟ ಕಳೆದುಕೊಳ್ಳಬೇಕಾಯಿತು. ಇಂಡಿಯನ್ ಆಯಿಲ್ ಕಾರ್ಪೊರೇಷನ್(IOC) ಸಾರ್ವಜನಿಕ ವಲಯದ ಲಾಭದಾಯಕ ಕಂಪನಿ ಎನಿಸಿದೆ.

ಒಎನ್ಜಿಸಿ(ONGC)

ಒಎನ್ಜಿಸಿ(ONGC)

ಹಿಂದಿನ (2015-16 )ಹಣಕಾಸು ವರ್ಷಕ್ಕೆ ಹೋಲಿಸಿದರೆ ಒಎನ್ಜಿಸಿ ರೂ. 16,140 ಕೋಟಿ ಹಾಗೂ ಐಒಸಿ ರೂ. 11,242.23 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ.
ಸರ್ಕಾರದ ನೈಸರ್ಗಿಕ ಅನಿಲ ಬೆಲೆ ನೀತಿ ಕಾರಣದಿಂದ ರೂ. 3,000 ಕೋಟಿ ನಿವ್ವಳ ಲಾಭ ನಷ್ಟ ಅನುಭವಿಸಿದೆ ಎಂದು ಒಎನ್ಜಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕೆ ಸರ್ರಾಫ್ ಹೇಳಿದ್ದಾರೆ. ಒಎನ್ಜಿಸಿ ದೇಶದ ಅತಿದೊಡ್ಡ ಅನಿಲ ಉತ್ಪಾದಕ ಸಂಸ್ಥೆಯಾಗಿದೆ.

English summary

Which Is India's Most Profitable Company?

Indian Oil Corp (IOC) has overtaken Oil and Natural Gas Corp (ONGC) to become India's most profitable state-owned company. IOC, which has for decades been India's biggest company by turnover, posted a 70 per cent jump in net profit to Rs. 19,106.40 crore in the financial year ended March 31, 2017.
Story first published: Tuesday, May 30, 2017, 13:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X