For Quick Alerts
ALLOW NOTIFICATIONS  
For Daily Alerts

ಸ್ಟಾರ್ಟ್ಅಪ್ ಹೊಸ ನೀತಿ: ಕರ್ನಾಟಕದ ಸ್ಟಾರ್ಟ್ಅಪ್ ಗಳಿಗೆ ಮುಕ್ತ ಅವಕಾಶ

ಕರ್ನಾಟಕ ಸರ್ಕಾರದ ಹೊಸ ಸ್ಟಾರ್ಟ್ಅಪ್ ನೀತಿಯ ಪ್ರಕಾರ ಸರ್ಕಾರದ ಯೋಜನೆಗಳಲ್ಲಿ ಸ್ಟಾರ್ಟ್ಅಪ್ ಗಳಿಗೆ ಭಾಗವಹಿಸುವ ಅವಕಾಶವನ್ನು ಒದಗಿಸಲಾಗುವುದು ಎಂದು ಐಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

By Siddu
|

ಕರ್ನಾಟಕ ಸರ್ಕಾರದ ಹೊಸ ಸ್ಟಾರ್ಟ್ಅಪ್ ನೀತಿಯ ಪ್ರಕಾರ ಸರ್ಕಾರದ ಯೋಜನೆಗಳಲ್ಲಿ ಸ್ಟಾರ್ಟ್ಅಪ್ ಗಳಿಗೆ ಭಾಗವಹಿಸುವ ಅವಕಾಶವನ್ನು ಒದಗಿಸಲಾಗುವುದು ಎಂದು ಐಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ತಂತ್ರಜ್ಞಾನದಲ್ಲಿ ನಾವು ಹಿಂದುಳಿದಿರುವುದರಿಂದ ಹಲವು ಸರ್ಕಾರಿ ಇಲಾಖೆಗಳ ಕಾರ್ಯಗಳು ತುಂಬಾ ಹಿಂದುಳಿದಿದ್ದು, ತಾಂತ್ರಿಕವಾಗಿ ಹಳೆಯದಾಗಿವೆ. ಸರ್ಕಾರದ ಉತ್ತಮ ಕಾರ್ಯಾಚರಣೆಗಾಗಿ ಸ್ಟಾರ್ಟ್ಅಪ್ ಗಳಿಂದ ಸೇವೆಗಳನ್ನು ಪಡೆಯಲಾಗುವುದು ಎಂದರು.

ಎಲಿವೇಟ್ 100 ಪ್ರೋಗ್ರಾಮ್

ಎಲಿವೇಟ್ 100 ಪ್ರೋಗ್ರಾಮ್

ಮುಂದೆ ನಡೆಯಲಿರುವ ಎಲಿವೇಟ್ 100 ಪ್ರೋಗ್ರಾಮ್ (Elevate 100 program) ಕರ್ನಾಟಕ ರಾಜ್ಯದ ಗ್ರಾಮೀಣ ಭಾಗಗಳಿಂದ 400 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ ಟಾಪ್ 100 ಸ್ಟಾರ್ಟ್ಅಪ್ ಗಳನ್ನು ಆಯ್ಕೆ ಮಾಡಲಾಗುವುದು.

ಮುಕ್ತ ವೇದಿಕೆ

ಮುಕ್ತ ವೇದಿಕೆ

ಇಲ್ಲಿಯವರೆಗೆ ಎಲ್ & ಟಿ ಮತ್ತು ಇತರ ಸಂಸ್ಥೆಗಳು ಮಾತ್ರ ಸರ್ಕಾರದೊಂದಿಗೆ ಕೆಲಸ ಮಾಡಿವೆ. ಪ್ರತಿಯೊಂದು ಹಂತ ಹಾಗು ಎಲ್ಲಾ ಕ್ಷೇತ್ರಗಳಲ್ಲೂ ಉತ್ತೇಜಿಸಲು ನವೋದ್ಯಮಗಳಿಗೆ ಮುಕ್ತ ವೇದಿಕೆಯನ್ನು ಕಲ್ಪಿಸಲಾಗುವುದು ಎಂದು ಖರ್ಗೆ ಹೇಳಿದರು.

ಆಪ್ತಸಲಹಾ ಕಾರ್ಯಕ್ರಮ

ಆಪ್ತಸಲಹಾ ಕಾರ್ಯಕ್ರಮ

ಹೊಸ ನೀತಿ ಸ್ಟಾರ್ಟ್ಅಪ್ ಗಳಿಗಾಗಿ ಆಪ್ತ ಸಲಹೆಗಳನ್ನು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಆಪ್ತಸಲಹಾ ಕಾರ್ಯಕ್ರಮಗಳನ್ನು ಪಟ್ಟಣ ಹಾಗೂ ಬೆಂಗಳೂರಿನಿಂದ ದೂರ ಇರುವ ನಗರಗಳಿಗೆ ವಿಸ್ತರಿಸಲು ಸರ್ಕಾರ ಬಯಸಿದೆ. ಹುಬ್ಬಳ್ಳಿ, ಬಳ್ಳಾರಿ, ಕಲಬುರ್ಗಿ ನಂತಹ ಅನೇಕ ಸಣ್ಣ ಪಟ್ಟಣಗಳಲ್ಲಿ ಹಲವು ಸ್ಟಾರ್ಟ್ಅಪ್ ಗಳಿವೆ ಎಂದರು.

English summary

Karnataka Govt to allow startups to bid for govt projects in new policy

The new startup policy from the Karnataka Government will include provisions to allow startups to bid for government projects, which have traditionally been a turf for the large corporations.
Story first published: Thursday, August 31, 2017, 16:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X