For Quick Alerts
ALLOW NOTIFICATIONS  
For Daily Alerts

3 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಜಿಡಿಪಿ ಕುಸಿತ, ಕಾರಣಗಳೇನು?

2017-18ರ ಹಣಕಾಸು ವರ್ಷದ ಮೊದ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ದೇಶದ ದೇಶಿಯ ಆರ್ಥಿಕ ಅಭಿವೃದ್ಧಿ ದರ (ಜಿಡಿಪಿ) ಶೇ. 5.7ಕ್ಕೆ ಕುಸಿತ ಕಂಡಿದೆ.

By Siddu
|

2017-18ರ ಹಣಕಾಸು ವರ್ಷದ ಮೊದ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ದೇಶದ ದೇಶಿಯ ಆರ್ಥಿಕ ಅಭಿವೃದ್ಧಿ ದರ (ಜಿಡಿಪಿ) ಶೇ. 5.7ಕ್ಕೆ ಕುಸಿತ ಕಂಡಿದೆ.

ಕಳೆದ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಒಟ್ಟು ದೇಶಿಯ ಉತ್ಪನ್ನದ ಬೆಳವಣಿಗೆ ದರ ಶೇ. 6.1ರಷ್ಟಿತ್ತು. ಕಳೆದ 2016-17ರ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ. 7.9ರಷ್ಟಿತ್ತು.

ಜಿಡಿಪಿ ಕುಸಿತಕ್ಕೆ ಕಾರಣ

ಜಿಡಿಪಿ ಕುಸಿತಕ್ಕೆ ಕಾರಣ

ಹೆಚ್ಚು ಮುಖಬೆಲೆಯ ನೋಟುಗಳ ರದ್ದತಿ ಹಾಗು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಹಿನ್ನಲೆಯಲ್ಲಿ ಉಂಟಾದ ಗೊಂದಲದ ವಾತಾವರಣದ ಫಲವಾಗಿ ತಯಾರಿಕಾ ಚಟುವಟಿಕೆಗಳು ಮತ್ತು ಉದ್ಯೋಗ ಸೃಷ್ಠಿ ಕುಂಠಿತಗೊಂಡಿರುವುದು ಜಿಡಿಪಿ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂಬುದು ತಜ್ಞರ ಅಭಿಪ್ರಾಯ. ಕಳೆದ ಮೂರು ವರ್ಷಗಳಲ್ಲಿನ ಅತಿ ಕಡಿಮೆ ಮಟ್ಟದ ಜಿಡಿಪಿ ದರ ಇದಾಗಿದೆ.

ಚೀನಾಕ್ಕಿಂತ ಕಡಿಮೆ ಜಿಡಿಪಿ

ಚೀನಾಕ್ಕಿಂತ ಕಡಿಮೆ ಜಿಡಿಪಿ

ಕಳೆದ ಎರಡು ತ್ರೈಮಾಸಿಕಗಳಿಗೆ ಹೋಲಿಸಿದರೆ ಭಾರತದ ಜಿಡಿಪಿ ಚೀನಾಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಮಾರ್ಚ್-ಏಪ್ರಿಲ್ ತ್ರೈಮಾಸಿಕದಲ್ಲಿ ಚೀನಾದ ದೇಶಿ ಅಭಿವೃದ್ಧಿ ದರ ಶೇ. 6.9ರಷ್ಟಿತ್ತು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಏಪ್ರಿಲ್- ಜೂನ್‌ ತ್ರೈಮಾಸಿಕದ ಜಿಡಿಪಿ ದರ ಕಡಿಮೆಯಾಗಲಿದೆ ಎಂದು ಮೊದಲೇ ಅಂದಾಜಿಸಲಾಗಿತು.

ವಾಣಿಜ್ಯ ವಲಯದ ಪ್ರತಿಕ್ರಿಯೆ

ವಾಣಿಜ್ಯ ವಲಯದ ಪ್ರತಿಕ್ರಿಯೆ

ಜಿಡಿಪಿ ದರ ಗಮನಾರ್ಹ ಪ್ರಮಾಣದಲ್ಲಿ ಕುಸಿತ ಕಂಡಿರುವುದಕ್ಕೆ ಉದ್ಯಮ ವಲಯ ನಿರಾಶೆ ವ್ಯಕ್ತಪಡಿಸಿದೆ. ಉದ್ಯಮ ಸಂಸ್ಥೆಗಳ ವಹಿವಾಟುಗಳನ್ನು ಸುಗಮವಾಗಿ ಆರಂಭಿಸಲು ಪೂರಕವಾದ ವಾತಾವರಣ ಕಲ್ಪಿಸಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅಸೋಚಾಂ ಹೇಳಿದೆ.

ಅರುಣ್ ಜೇಟ್ಲಿ ಏನಂತಾರೆ?

ಅರುಣ್ ಜೇಟ್ಲಿ ಏನಂತಾರೆ?

ದೇಶಿಯ ಆರ್ಥಿಕ ಅಭಿವೃದ್ಧಿ ದರ (ಜಿಡಿಪಿ) ಕುಸಿತ ಕಂಡಿರುವುದು ನಿಜವಾಗಿಯೂ ನಮ್ಮ ಚಿಂತೆಗೆ ಕಾರಣವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

English summary

India’s Q1 GDP growth falls to 5.7%, hits 3-year low

India's GDP or gross domestic product grew 5.7 per cent on a year-on-year basis during the April-June period (Q1), government data showed on Thursday. During the previous quarter (January- March) the GDP had grown by 6.1 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X