For Quick Alerts
ALLOW NOTIFICATIONS  
For Daily Alerts

ನಕಲಿ ನೋಟು ಹಾವಳಿ..! 2016-17ರಲ್ಲಿ 20% ಹೆಚ್ಚಳ!

ದೇಶದಲ್ಲಿ ನಕಲಿ ನೋಟುಗಳ ಹಾವಳಿ ಜಾಸ್ತಿಯಾಗಿದೆ. ನೋಟು ರದ್ದತಿ ನಂತರ ಕೂಡ ಇಷ್ಟೊಂದು ನಕಲಿ ನೋಟುಗಳ ಹಾವಳಿಯೇ ಎಂಬ ಪ್ರಶ್ನೆ ಮೂಡಬಹುದು. ಆರ್ಬಿಐ ಗೆ ಸಿಕ್ಕ ನಕಲಿ ನೋಟು ವಿವರ ಇಲ್ಲಿದೆ ನೋಡಿ..

By Siddu
|

2016-17ರ ಹಣಕಾಸು ವರ್ಷದಲ್ಲಿ ನಕಲಿ ನೋಟುಗಳ ಸಂಖ್ಯೆಯಲ್ಲಿ ಶೇ. 20.4ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ದೇಶದಲ್ಲಿ ನಕಲಿ ನೋಟುಗಳ (fake notes) ಹಾವಳಿ ಜಾಸ್ತಿಯಾಗಿದೆ. ನೋಟು ರದ್ದತಿ ನಂತರ ಕೂಡ ಇಷ್ಟೊಂದು ನಕಲಿ ನೋಟುಗಳ ಹಾವಳಿಯೇ ಎಂಬ ಪ್ರಶ್ನೆ ಮೂಡಬಹುದು. ಆರ್ಬಿಐ ಗೆ ಸಿಕ್ಕ ನಕಲಿ ನೋಟು ವಿವರ ಇಲ್ಲಿದೆ ನೋಡಿ..

ಈ ನಕಲಿ ನೋಟುಗಳ ಹಾವಳಿ ಜಾಸ್ತಿ!

ಈ ನಕಲಿ ನೋಟುಗಳ ಹಾವಳಿ ಜಾಸ್ತಿ!

ರೂ. 1000 ರೂಪಾಯಿಯ ನಕಲಿ ನೋಟುಗಳೇ ಹೆಚ್ಚೆಚ್ಚು ಚಲಾವಣೆಯಾಗಿದ್ದವು. ಜತೆಗೆ ಹೊಸ ಮುಖಬೆಲೆಯ ರೂ. 2000 ಹಾಗೂ 500 ನಕಲಿ ನೋಟುಗಳು ಕೂಡ ಬ್ಯಾಂಕುಗಳಲ್ಲಿ ಲಭಿಸಿವೆ! ಜತೆಗೆ 2016-17ರ ಅವಧಿಯಲ್ಲಿ ರೂ. 100 ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಹೆಚ್ಚಿದೆ ಎಂದು ಆರ್ಬಿಐ ಹೇಳಿದೆ.

ಪತ್ತೆಯಾದ ನಕಲಿ ನೋಟುಗಳೇಷ್ಟು?

ಪತ್ತೆಯಾದ ನಕಲಿ ನೋಟುಗಳೇಷ್ಟು?

ಕಳೆದ 2016-17ರ ಹಣಕಾಸು ಸಾಲಿನಲ್ಲಿ ರೂ. 7.62 ಲಕ್ಷ ನಕಲಿ ನೋಟುಗಳು ಆರ್ಬಿಐ ಗೆ ಲಭಿಸಿವೆ. 2015-16 ರ ಹಣಕಾಸು ವರ್ಷದಲ್ಲಿ 6.31 ಲಕ್ಷ ನೋಟುಗಳು ಸಿಕ್ಕಿವೆ.

ನಕಲಿ ನೋಟು, ಕಪ್ಪುಹಣ ತಡೆಗೆ ನೋಟು ರದ್ದತಿ!

ನಕಲಿ ನೋಟು, ಕಪ್ಪುಹಣ ತಡೆಗೆ ನೋಟು ರದ್ದತಿ!

ನಕಲಿ ನೋಟು, ಕಪ್ಪುಹಣ ನಿಯಂತ್ರಣಕ್ಕಾಗಿ ಕಳೆದ ಸಾಲಿನ ನವೆಂಬರ್ 8ರಂದು ರೂ. 1000 ಮತ್ತು 500 ಮುಖಬೆಲೆಯ ನೋಟುಗಳ ನಿಷೇಧ ಮಾಡಲಾಗಿತ್ತು. ಅಲ್ಲದೇ ನಕಲಿ ನೋಠುಗಳ ಪತ್ತೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಆರ್ಬಿಐ ಗೆ ಸಿಕ್ಕ ನಕಲಿ ನೋಟು ವಿವರ

ಆರ್ಬಿಐ ಗೆ ಸಿಕ್ಕ ನಕಲಿ ನೋಟು ವಿವರ

1. ರೂ. 2000 ಮುಖಬೆಲೆಯ 638 ನೋಟುಗಳು ಪತ್ತೆ
2. ಹೊಸ ರೂ. 500 ಮುಖಬೆಲೆಯ 199 ನೋಟುಗಳು
3. ಹಳೆ ರೂ. 500 ಮುಖಬೆಲೆಯ 3,17,567 ನಕಲಿ ನೋಟುಗಳ ಪತ್ತೆ (15.87 ಕೋಟಿ)
4. 2015-16ರಲ್ಲಿ ರೂ. 500 ಮುಖಬೆಲೆಯ 2,61,695 ನೋಟುಗಳು ಹಾಗು 100 ಮುಖಬೆಲೆಯ 2,21,447 ನಕಲಿ ನೋಟುಗಳು ಆರ್ಬಿಐ ಗೆ ಲಭಿಸಿದ್ದವು.

ಅನಾಣ್ಯೀಕರಣ ಪ್ರಯೋಗ ಏನಾಯಿತು?

ಅನಾಣ್ಯೀಕರಣ ಪ್ರಯೋಗ ಏನಾಯಿತು?

ಹಳೆ ರೂ. 1000 ಮತ್ತು 500 ಮುಖಬೆಲೆಯ ನೋಟುಗಳ ನಿಷೇಧ ಮಾಡಿದ್ದರೂ ನಕಲಿ ನೋಟುಗಳ ಹಾವಳಿ ಮಾತ್ರ ಯತಾಸ್ಥಿತಿಯಲ್ಲಿ ನಡೆಯುತ್ತಿರುವುದು ತಲೆನೋವಿನ ಸಂಗತಿಯಾಗಿದೆ. ಹಾಗಿದ್ದರೆ ಅನಾಣ್ಯೀಕರಣ ಪ್ರಯೋಗ ಖೋಟಾನೋಟು/ನಕಲಿಕೋರರ ಮೇಲೆ ಪರಿಣಾಮ ಬೀರಿಲ್ಲವೆ ಎಂಬ ಪ್ರಶ್ನೆ ಜನಸಾಮಾನ್ಯನಿಗೆ ಕಾಡದೆ ಇರದು.

English summary

RBI records 20% rise in fake notes in 2016-17

The number of fake notes in the banking system jumped by 20.4 per cent to 7,62,072 during 2016-17 compared to the previous financial year , the Reserve Bank of India said on Wednesday.
Story first published: Friday, September 1, 2017, 16:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X