For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ 6 ಸಾವಿರ ಹೊಸ ಸಿಬ್ಬಂದಿಗಳ ನೇಮಕ

ದೇಶದ ಎರಡನೇ ಅತಿದೊಡ್ಡ ಐಟಿ ರಪ್ತು ಸಂಸ್ಥೆ ಇನ್ಫೋಸಿಸ್ ಮುಂದಿನ ಎರಡು ವರ್ಷಗಳವರೆಗೆ ಪ್ರತಿಬಾರಿ 6 ಸಾವಿರದಷ್ಟು ಎಂಜಿನಿಯರುಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದೆ.

|

ದೇಶದ ಎರಡನೇ ಅತಿದೊಡ್ಡ ಐಟಿ ರಪ್ತು ಸಂಸ್ಥೆ ಇನ್ಫೋಸಿಸ್ ಮುಂದಿನ ಎರಡು ವರ್ಷಗಳವರೆಗೆ ಪ್ರತಿಬಾರಿ 6 ಸಾವಿರದಷ್ಟು ಎಂಜಿನಿಯರುಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದೆ.

ಮುಂದಿನ ಎರಡು ವರ್ಷ ಎಂಜಿನಿಯರುಗಳ ನೇಮಕ ಪ್ರಕ್ರಿಯೆ ಹಿಂದಿನಂತೆಯೇ ಮುಂದುವರೆಯಲಿದೆ. ಅಮೆರಿಕಾ ಮತ್ತು ಯೂರೋಪ್ ಮಾರುಕಟ್ಟೆಗಳಲ್ಲಿ ಕೂಡ ತನ್ನ ನೇಮಕಾತಿ ಪ್ರಕ್ರಿಯೆಯನ್ನು ಇನ್ಫೋಸಿಸ್ ಹೆಚ್ಚಿಸಿದೆ.

ಸಿಇಒ ಪ್ರವೀಣ್ ರಾವ್‌ ಹೇಳಿಕೆ

ಸಿಇಒ ಪ್ರವೀಣ್ ರಾವ್‌ ಹೇಳಿಕೆ

ಪ್ರಸ್ತುತ ವರ್ಷ ಈಗಾಗಲೇ ಆರು ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಾಗೆಯೇ ಮುಂದಿನ ಎರಡು ವರ್ಷಗಳವರೆಗೆ ಪ್ರತಿಬಾರಿ ಆರು ಸಾವಿರ ಸಿಬ್ಬಂದಿಗಳ ಹೊಸ ನೇಮಕ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಹಂಗಾಮಿ ಸಿಇಒ ಯು. ಬಿ ಪ್ರವೀಣ್ ರಾವ್ ತಿಳಿಸಿದ್ದಾರೆ.

ಸ್ಥಳೀಯರ ನೇಮಕಕ್ಕೆ ಪ್ರಾಮುಖ್ಯತೆ

ಸ್ಥಳೀಯರ ನೇಮಕಕ್ಕೆ ಪ್ರಾಮುಖ್ಯತೆ

ಪ್ರತಿ ವರ್ಷ ಅತಿಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ಹತ್ತು ಲಕ್ಷದಷ್ಟು ಪಧವಿದರರು ಶಿಕ್ಷಣ ಪೂರ್ಣಗೊಳಿಸುತ್ತಾರೆ. ಅವರಲ್ಲಿ ಶೇ. 20-30ರಷ್ಟು ಪದವಿಧರರು ಮಾತ್ರ ಅರ್ಹ ಪ್ರತಿಭೆಯನ್ನು ಹೊಂದಿರುತ್ತಾರೆ. ಅವಕಾಶಗಳು ಕಡಿಮೆ ಆದರೆ ಉದ್ಯೋಗಾಕಾಂಕ್ಷಿಗಳು ಹೆಚ್ಚಿದ್ದಾರೆ. ಹೀಗಾಗಿ ಸ್ಥಳೀಯರ ನೇಮಕಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಪ್ರವೀಣ್ ರಾವ್ ಹೇಳಿದ್ದಾರೆ.

ಯುಎಸ್ ನಲ್ಲಿ 10 ಸಾವಿರ ನೇಮಕ
 

ಯುಎಸ್ ನಲ್ಲಿ 10 ಸಾವಿರ ನೇಮಕ

ಮುಂದಿನ ಕೆಲ ವರ್ಷಗಳಲ್ಲಿ ಅಮೆರಿಕಾದಲ್ಲಿ ಹತ್ತು ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಲು ಇನ್ಫೋಸಿಸ್ ಗುರಿ ಹೊಂದಿದೆ. 2017 ರ ಜೂನ್ ಅಂತ್ಯದ ವೇಳೆಗೆ ಇನ್ಫೋಸಿಸ್ ಒಟ್ಟು 1,98,553 ನೌಕರರನ್ನು ತನ್ನ ವೇತನದಾರರ ಪಟ್ಟಿಯಲ್ಲಿ ಹೊಂದಿತ್ತು.

ವಿಶಾಲ್ ಸಿಕ್ಕಾ ರಾಜೀನಾಮೆ

ವಿಶಾಲ್ ಸಿಕ್ಕಾ ರಾಜೀನಾಮೆ

ತಜ್ಞರ ಸಲಹೇ ಹಾಗೂ ಹಲವರ ಒತ್ತಾಯದ ಮೇರೆಗೆ ಸಹಸಂಸ್ಥಾಪಕ ಹಾಗು ಮಾಜಿ ಸಿಸಿಒ ಆಗಿದ್ದ ನಂನ್ ನಿಲೇಕಣಿ ಅವರನ್ನು ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ವಿಶಾಲ್ ಸಿಕ್ಕಾ ಅವರ ರಾಜೀನಾಮೆ ನಂತರ ಯು. ಬಿ ಪ್ರವೀಣ್ ರಾವ್ ಅವರು ಹಂಗಾಮಿ ಸಿಇಒ ಮತ್ತು ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary

Infosys to hire 6,000 engineers in the next 1-2 years

Infosys will continue to hire about 6,000 engineers annually over next 1-2 years, same as last financial year, according to a top company official.
Story first published: Monday, September 11, 2017, 12:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X