For Quick Alerts
ALLOW NOTIFICATIONS  
For Daily Alerts

ಭಾರತದ ಐಟಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು ಕಡಿಮೆ

ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಹೊಸ ಉದ್ಯೋಗ ಅವಕಾಶಗಳು ಕಡಿಮೆ ಇರಲಿವೆ ಎಂದು ಸಮೀಕ್ಷೆ ವರದಿ ಮಾಡಿದೆ.

By Siddu
|

ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಹೊಸ ಉದ್ಯೋಗ ಅವಕಾಶಗಳು ಕಡಿಮೆ ಇರಲಿವೆ ಎಂದು ಸಮೀಕ್ಷೆ ವರದಿ ಮಾಡಿದೆ.

ಮುಂದಿನ ಎರಡು ತ್ರೈಮಾಸಿಕಗಳಲ್ಲಿ (ಆರು ತಿಂಗಳು) ಸ್ವಯಂಚಾಲನಾ ವ್ಯವಸ್ಥೆ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ಕಾರಣದಿಂದ ಸಾಂಪ್ರದಾಯಿಕ ಕೆಲಸದ ಉದ್ಯೋಗ ಅವಕಾಶಗಳು ಕಡಿಮೆಯಾಗಲಿವೆ ಎಂದು ಎಕ್ಸ್ಪೆರಿಸ್ ಐಟಿ ಮ್ಯಾನ್ ಪವರ್ ಗ್ರೂಪ್ ಇಂಡಿಯಾ ಕೈಗೊಂಡ ಸಮೀಕ್ಷೆಯಲ್ಲಿ ವರದಿ ಮಾಡಿದೆ.

ಹಿರಿಯ ಅಧಿಕಾರಿಗಳ ಹುದ್ದೆ ರದ್ದು!

ಹಿರಿಯ ಅಧಿಕಾರಿಗಳ ಹುದ್ದೆ ರದ್ದು!

ಅಕ್ಟೋಬರ್‌-2017 ರಿಂದ ಮಾರ್ಚ್‌-2018ರ ವರೆಗೆ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಹೊಸ ನೇಮಕಾತಿ ಉದ್ದೇಶ ಇನ್ನಷ್ಟು ಕಡಿಮೆ ಇರಲಿದೆ. ಐಟಿ ಕಂಪನಿಗಳು ಕೆಳ ಮತ್ತು ಮಧ್ಯಮ ಹಂತದಲ್ಲಿ ನೇಮಕಾತಿಗೆ ಆದ್ಯತೆ ನೀಡುತ್ತಿವೆ. ಜತೆಗೆ ಹಿರಿಯ ಅಧಿಕಾರಿಗಳ ಹುದ್ದೆಗಳನ್ನು ರದ್ದುಪಡಿಸಲು ಚಿಂತಿಸುತ್ತಿವೆ.

ಸ್ಪರ್ಧಾತ್ಮಕ ಮಾನದಂಡ

ಸ್ಪರ್ಧಾತ್ಮಕ ಮಾನದಂಡ

ಪ್ರಸ್ತುತ ಸ್ಪರ್ಧಾತ್ಮಕ ಸಂದರ್ಭದಲ್ಲಿ ಸೇವೆಯಾಧಾರಿತ ಸಾಫ್ಟ್ವೇರ್(software as a service) ಕೊಡುಗೆಗಳು, ಕ್ಲೌಡ್-ಆಧಾರಿತ ಎಂಟರ್ಪ್ರೈಸ್ ರಿಸೋರ್ಸ್ ಪ್ಲಾನಿಂಗ್(ಇಆರ್ಪಿ)ಸಾಫ್ಟ್ವೇರ್, ಕೃತಕ ಬುದ್ಧಿವಂತಿಕೆಯ ಅಭೂತಪೂರ್ವ ವೇಗ, ನಿಖರತೆ ಮತ್ತು ವೆಚ್ಚ ಸಾಮರ್ಥ್ಯ ಇವುಗಳು ಮಹತ್ವ ಸಾದನಗಳಾಗಿದ್ದು, ವ್ಯವಹಾರಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಮ್ಯಾನ್ ಪವರ್ ಗ್ರೂಪ್ ಇಂಡಿಯಾ ಅಧ್ಯಕ್ಷ ಮನ್ಮೀತ್ ಸಿಂಗ್ ಹೇಳಿದ್ದಾರೆ.

ವೃತ್ತಿಪರರಿಗೆ ಬೇಡಿಕೆ
 

ವೃತ್ತಿಪರರಿಗೆ ಬೇಡಿಕೆ

ಹಲವಾರು ತಾಂತ್ರಿಕ ಬದಲಾವಣೆಗಳ ಫಲವಾಗಿ ಭಾರತೀಯ ತಂತ್ರಜ್ಞಾನ ಉದ್ಯಮದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಯುವ ವೃತ್ತಿಪರರಿಗೆ ಬೇಡಿಕೆ ಹೆಚ್ಚಲಿದೆ ಎಂದು ವರದಿ ಹೇಳಿದೆ.

English summary

Indian IT companies expect layoffs

Indian IT professionals are likely to see reduced job opportunities in the next six months as traditional roles are increasingly getting disrupted in the wake of automation and digitisation according to a survey.
Story first published: Wednesday, October 11, 2017, 12:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X