For Quick Alerts
ALLOW NOTIFICATIONS  
For Daily Alerts

ಏರ್ಟೆಲ್ ಧಮಾಕಾ! ಹೊಸ ರೀಚಾರ್ಜ್ ಪ್ಲಾನ್ ಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಏರ್ಟೆಲ್ ತನ್ನ ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ.ಏರ್ಟೆಲ್ ಪರಿಷ್ಕರಿಸಲ್ಪಟ್ಟ ಯೋಜನೆಗಳಲ್ಲಿ ವ್ಯಾಲಿಡಿಟಿ ಅವಧಿ ಮತ್ತು ಡೇಟಾ ಸೌಲಭ್ಯ ಹೆಚ್ಚಿಸಿದೆ.

By Siddu
|

ಜಿಯೋ ಪ್ರವೇಶಾತಿ ದೂರಸಂಪರ್ಕ ವಲಯದ ಲೆಕ್ಕಾಚಾರವನ್ನೆ ಬುಡಮೇಲು ಮಾಡಿದೆ. ಜಿಯೋ ತನ್ನ ಉಚಿತ ಹಾಗು ಅತಿ ಕಡಿಮೆ ಕೊಡುಗೆಗಳ ಮೂಲಕ ಹೊಸ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಜತೆಗೆ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಿಗೆ ಭಾರೀ ಹೊಡೆತವನ್ನೇ ನೀಡಿತು.

 

ಅಲ್ಲಿಂದ ಶುರುವಾಗಿರುವ ದರಸಮರದ ಪೈಪೋಟಿ ಗ್ರಾಹಕರಿಗಂತು ಬಿಸಿಬಿಸಿ ಕಜ್ಜಾಯವಾಯಿತು. ಎಲ್ಲಾ ಕಂಪನಿಗಳು ತಮ್ಮ ತಮ್ಮ ಗ್ರಾಹಕರನ್ನು ಉಳಿಸುವ ಮತ್ತು ಸೆಳೆಯುವ ನಿಟ್ಟಿನಲ್ಲಿ ತೊಡಗಿವೆ. ಗ್ರಾಹಕರನ್ನು ಆಕರ್ಷಿಸಲು ಕಂಪನಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಾ, ಜಿಯೋಗೆ ಸವಾಲು ಹಾಕುತ್ತಿವೆ.

ಇದೀಗ ಏರ್ಟೆಲ್ ತನ್ನ ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ. ಅದರ ವಿವರ ಇಲ್ಲಿದೆ ನೋಡೋಣ ಬನ್ನಿ...

ರೂ. 399 ಪ್ಲಾನ್

ರೂ. 399 ಪ್ಲಾನ್

ತನ್ನ ಹಿಂದಿನ ರೂ. 399 ಪ್ಲಾನ್ ನಲ್ಲಿಯೂ ಏರ್ಟೆಲ್ ಬದಲಾವಣೆ ಮಾಡಿದೆ.
ವ್ಯಾಲಿಡಿಟಿ: 70 ದಿನಗಳಿಂದ 84 ದಿನಗಳಿಗೆ ಹೆಚ್ಚಿಸಿದೆ.
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
3G/4G ಡೇಟಾ: ಪ್ರತಿದಿನ 1GB
ಎಸ್ಎಂಎಸ್: ಪ್ರತಿದಿನ 100  ಜಿಯೋ ಘೋಷಿಸಿದೆ ಕಡಿಮೆ ಮೊತ್ತದ ರೀಚಾರ್ಜ್ ಪ್ಲಾನ್

ರೂ. 349 ಪ್ಲಾನ್

ರೂ. 349 ಪ್ಲಾನ್

ತಿಂಗಳ ಅವಧಿಗೆ ಹೆಚ್ಚು ಡೇಟಾ ಸೌಲಭ್ಯ ಬಯಸುವ ಗ್ರಾಹಕರು ಇದನ್ನು ಆಯ್ಕೆ ಮಾಡಬಹುದು.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: 100
3G/4G ಡೇಟಾ: 2GB/ಪ್ರತಿದಿನ

ರೂ. 149 ಪ್ಲಾನ್
 

ರೂ. 149 ಪ್ಲಾನ್

ಏರ್ಟೆಲ್ ಹಾಗೂ ಜಿಯೋ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಏರ್ಟೆಲ್ ತನ್ನ ರೂ. 149 ಯೋಜನೆಯನ್ನು ನವೀಕರಿಸಿದೆ.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
3G/4G ಡೇಟಾ: 1GB
ಎಸ್ಎಂಎಸ್: ಪ್ರತಿದಿನ 100
ಸೌಲಭ್ಯ ಲಭ್ಯ: ತೆಲಂಗಾಣ ಹಾಗೂ ಆಂಧ್ರಪ್ರದೇಶ
ಈ ಹಿಂದೆ ಏರ್ಟೆಲ್ ನಿಂದ ಏರ್ಟೆಲ್ ಗೆ ಮಾತ್ರ ಅನಿಯಮಿತ ಕರೆ ಸೌಲಭ್ಯ ನೀಡಲಾಗಿತ್ತು. ಆದರೆ ಈಗ ಎಲ್ಲ ನೆಟ್ವರ್ಕ್ ಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.

ರೂ. 448 ಪ್ಲಾನ್

ರೂ. 448 ಪ್ಲಾನ್

ದೀರ್ಘ ಅವಧಿಗೆ ಸರಾಸರಿ ಡೇಟಾ ಮತ್ತು ಕರೆ ಸೌಲಭ್ಯ ಬಯಸುವ ಪ್ರಿಪೇಡ್ ಗ್ರಾಹಕರಿಗಾಗಿ ಏರ್ಟೆಲ್ ಈ ಯೋಜನೆಯನ್ನು ಘೋಷಿಸಿದೆ. ಹೆಚ್ಚಿನ ಗ್ರಾಹಕರು ಇಷ್ಟಪಡುವ ಯೋಜನೆ ಇದಾಗಿದೆ. ವ್ಯಾಲಿಡಿಟಿ: 82 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: 100
3G/4G ಡೇಟಾ: 1GB/ಪ್ರತಿದಿನ

ರೂ. 199 ಪ್ಲಾನ್

ರೂ. 199 ಪ್ಲಾನ್

ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: ಅನಿಯಮಿತ
3G/4G ಡೇಟಾ: 1GB/ಪ್ರತಿದಿನ

ರೂ. 509 ಪ್ಲಾನ್

ರೂ. 509 ಪ್ಲಾನ್

ವ್ಯಾಲಿಡಿಟಿ: 91 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: 100
3G/4G ಡೇಟಾ: 1GB/ಪ್ರತಿದಿನ

ರೂ. 549 ಪ್ಲಾನ್

ರೂ. 549 ಪ್ಲಾನ್

ಒಂದು ತಿಂಗಳ ಅವಧಿಗೆ ಹೆಚ್ಚು ಡೇಟಾ ಸೌಲಭ್ಯ ಬಯಸುವ ಗ್ರಾಹಕರು ಇದನ್ನು ಯೋಜನೆ ಆಯ್ಕೆ ಮಾಡಬಹುದು.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: 100
3G/4G ಡೇಟಾ: 3GB/ಪ್ರತಿದಿನ

ರೂ. 90 ಪ್ಲಾನ್ ಹಾಗು ರೂ. 49 ಪ್ಲಾನ್

ರೂ. 90 ಪ್ಲಾನ್ ಹಾಗು ರೂ. 49 ಪ್ಲಾನ್

ಟಾಕ್ ಟೈಮ್ : ರೂ. 80
ವ್ಯಾಲಿಡಿಟಿ: ಅನಿಯಮಿತ
ರೂ. 49 ಯೋಜನೆಯಡಿ ಕೇವಲ ಡೇಟಾ ಸೌಲಭ್ಯ ಒದಗಿಸಲಿದ್ದು, ಯಾವುದೇ ಉಚಿತ ಕರೆಗಳು ಇರುವುದಿಲ್ಲ. ಈ ಯೋಜನೆಯ ಅವಧಿ ಏಳು ದಿನಗಳು ಮಾತ್ರ. ಈ ಸೌಲಭ್ಯ ಆಯ್ದ ಗ್ರಾಹಕರಿಗೆ ಮಾತ್ರ ಸಿಗಲಿದ್ದು, ಮೈ ಏರ್ಟೆಲ್ ಆಪ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ವ್ಯಾಲಿಡಿಟಿ ಅವಧಿಯಲ್ಲಿ ಹೆಚ್ಚಳ

ವ್ಯಾಲಿಡಿಟಿ ಅವಧಿಯಲ್ಲಿ ಹೆಚ್ಚಳ

ಹೊಸ ವರ್ಷದ ಪೂರ್ವದಲ್ಲಿ ಟೆಲಿಕಾಂ ಕಂಪನಿಗಳು ಹೊಸ ಆಫರ್ ಗಳನ್ನು ಘೋಷಿಸುವುದರ ಜತೆಗೆ ಆ ಯೋಜನೆಗಳ ವ್ಯಾಲಿಡಿಟಿಯನ್ನು ಕಡಿಮೆ ಮಾಡಿದ್ದವು. ಈ ಹಿಂದೆ 70 ದಿನ ಅಥವಾ 90 ದಿನಗಳವರೆಗೆ ಇದ್ದ ವ್ಯಾಲಿಡಿಟಿ ಅವಧಿಯನ್ನು ಕಡಿಮೆಯಾಗಿತ್ತು. ಅಂದರೆ ಹೆಚ್ಚು ಡೇಟಾ ಅಥವಾ ಅನಿಯಮಿತ ಕರೆ ಸೌಲಭ್ಯ ನೀಡಿದರೂ ಅವಧಿ ಮಾತ್ರ ಕಡಿಮೆ ಮಾಡಿದ್ದವು. ಇದೀಗ ಪರಿಷ್ಕರಿಸಲ್ಪಟ್ಟ ಯೋಜನೆಗಳಲ್ಲಿ ವ್ಯಾಲಿಡಿಟಿ ಅವಧಿ ಮತ್ತು ಡೇಟಾ ಸೌಲಭ್ಯ ಹೆಚ್ಚಿಸಿವೆ.

English summary

Airtel's New Prepaid Plans: Here's a complete explanation of the new recharge plan

Currently, Airtel has a long list of prepaid recharge plans that comes with different data limits and validity periods.
Story first published: Tuesday, January 23, 2018, 12:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X