For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2018: ಗ್ರಾಮೀಣ ವಲಯಕ್ಕೆ ಹೆಚ್ಚಿನ ಅನುದಾನಕ್ಕಾಗಿ ಒತ್ತಾಯ

ಮುಂಬರುವ ಕೇಂದ್ರ ಬಜೆಟ್ ನಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಅನುದಾನ ನೀಡಬೇಕೆಂದು ವೇಗವಾಗಿ ಚಲಿಸುವ ಗ್ರಾಹಕ ಸರಕು ಕಂಪನಿಗಳು (Fast Moving Consumer Goods Company –FMCG) ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿವೆ.

By Siddu
|

ಮುಂಬರುವ ಕೇಂದ್ರ ಬಜೆಟ್ ನಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಅನುದಾನ ನೀಡಬೇಕೆಂದು ವೇಗವಾಗಿ ಚಲಿಸುವ ಗ್ರಾಹಕ ಸರಕು ಕಂಪನಿಗಳು (Fast Moving Consumer Goods Company -FMCG) ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿವೆ.

 

ಗ್ರಾಮೀಣ ಜನರ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಮನ್ನಾ, ಕೂಲಿಯಲ್ಲಿ ಹೆಚ್ಚಳ, ಕಡಿದಾದ ಪ್ರದೇಶಗಳಿಗೆ ಸರಕುಗಳನ್ನು ಸಾಗಿಸಲು ಮೂಲಸೌಕರ್ಯ ಒದಗಿಸುವಂತೆ ಎಫ್ಎಂಸಿಜಿ ಕಂಪನಿಗಳು ಕೋರಿವೆ.

 

ಜಿಎಸ್ಟಿ ಜಾರಿಯ ಬಳಿಕ ಎಫ್ಎಂಸಿಜಿ ಸಂಸ್ಥೆಗಳ ಮಾರಾಟದಲ್ಲಿ ಹೆಚ್ಚಳವಾಗಿರುವುದರಿಂದ ಅವು ಹೆಚ್ಚು ತೃಪ್ತಿ ಹೊಂದಿವೆ. ಎಫ್ಎಂಸಿಜಿ ಕಂಪನಿಗಳ ಮಾರಾಟ ಸುಧಾರಣೆಯಾಗಿರುವ ಹಿನ್ನೆಲೆಯಲ್ಲಿ ಹಲವು ಬೇಡಿಕೆಗಳನ್ನು ಇಟ್ಟಿವೆ. ಕೃಷಿ ಸಬ್ಸಿಡಿಗಳನ್ನು ಹೆಚ್ಚಿಸಬೇಕು, ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ನೀಡುವ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಬೇಕು ಹಾಗು ಕೃಷಿ ಉತ್ಪಾದಕತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿವೆ. ಬಜೆಟ್ ನಲ್ಲಿ ನರೇಂದ್ರ ಮೋದಿ ಸರ್ಕಾರ ಜನತೆಗೆ ನೀಡಲಿರುವ 5 ಪ್ರಮುಖ ಕೊಡುಗೆಗಳು!

ಜನರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಆಹಾರ ಉತ್ಪನ್ನಗಳ ಮೇಲಿನ ತೆರಿಗೆ ಬೇಡವೆಂದು ಎಫ್ಎಂಸಿಜಿ ಸಂಸ್ಥೆಗಳ ಇನ್ನೊಂದು ಬೇಡಿಕೆಯಾಗಿದೆ. ಅನ್ವೇಷಣೆ ಮತ್ತು ಸಂಶೋಧನೆಗಾಗಿ ಖರ್ಚು ಮಾಡುವುದರ ಮೇಲೆ ತೆರಿಗೆ ವಿನಾಯತಿ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಆಹಾರ ಸಂಸ್ಕರಣಾ ಕಂಪನಿಗಳಿಗೆ ರಿಯಾಯಿತಿ ನೀಡಬೇಕು ಎಂದು ಹೇಳಿವೆ. ಆರಾಮ್ ಸೇ ಹಣಗಳಿಕೆಯ ಮಾರ್ಗಗಳು ಇಲ್ಲಿವೆ ನೋಡಿ..

English summary

Budget 2018: FMCG firms urge Modi govt to spend more on rural sector

Fast-moving consumer goods (FMCG) companies have urged the Modi government to spend more on rural areas in the upcoming Budget 2018.
Story first published: Tuesday, January 30, 2018, 15:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X