For Quick Alerts
ALLOW NOTIFICATIONS  
For Daily Alerts

ಬಿಟ್ ಕಾಯಿನ್ ಮೌಲ್ಯ ಭಾರೀ ಕುಸಿತ

ಇಂಗ್ಲೆಂಡ್ ಮತ್ತು ಯುಎಸ್ ಬ್ಯಾಂಕುಗಳಿಂದ ಬಿಟ್ ಕಾಯಿನ್ ಖರೀದಿಸಲು ಕ್ರೇಡಿಟ್ ಕಾರ್ಡುಗಳನ್ನು ಬಳಕೆ ಮಾಡುವುದಕ್ಕೆ ನಿಷೇಧ ತರಲು ನಡೆಯುತ್ತಿರುವ ಜಾಗತಿಕ ಪ್ರಯತ್ನ ಬಿಟ್ ಕಾಯಿನ್ ಮೌಲ್ಯ ಕುಸಿಯಲು ಮುಖ್ಯ ಕಾರಣವಾಗಿದೆ.

By Siddu
|

ಕಳೆದ ಮೂರು ತಿಂಗಳಲ್ಲಿ ಡಿಜಿಟಲ್ ಕರೆನ್ಸಿ ಬಿಟ್ ಕಾಯಿನ್ ಶೇ. 15ಕ್ಕಿಂತ ಹೆಚ್ಚು ಕುಸಿದಿದ್ದು, 7,000 ಯುಎಸ್ ಡಾಲರ್ ನಷ್ಟು ಪತನಗೊಂಡಿದೆ. ಇಂಗ್ಲೆಂಡ್ ಮತ್ತು ಯುಎಸ್ ಬ್ಯಾಂಕುಗಳಿಂದ ಬಿಟ್ ಕಾಯಿನ್ ಖರೀದಿಸಲು ಕ್ರೇಡಿಟ್ ಕಾರ್ಡುಗಳನ್ನು ಬಳಕೆ ಮಾಡುವುದಕ್ಕೆ ನಿಷೇಧ ತರಲು ನಡೆಯುತ್ತಿರುವ ಜಾಗತಿಕ ಪ್ರಯತ್ನ ಬಿಟ್ ಕಾಯಿನ್ ಮೌಲ್ಯ ಕುಸಿಯಲು ಮುಖ್ಯ ಕಾರಣವಾಗಿದೆ.

ಬಿಟ್ ಕಾಯಿನ್ ಮೌಲ್ಯ ಭಾರೀ ಕುಸಿತ

ನಿನ್ನೆ ಅಪರಾಹ್ನ ನ್ಯೂಯಾರ್ಕ್ ನಲ್ಲಿ ಲಕ್ಸೆಂಬರ್ಗ್ ಮೂಲದ ಬಿಟ್ ಸ್ಟಾಂಪ್ ವಿನಿಮಯ ಕೇಂದ್ರದಲ್ಲಿ ಬಿಟ್ ಕಾಯಿನ್ ಬೆಲೆ 6,853.53 ಡಾಲರ್ ಗೆ ಕುಸಿಯಿತು. ಕಳೆದ ಡಿಸೆಂಬರ್ ನಲ್ಲಿ 20,000 ಡಾಲರ್ ಇದ್ದ ಬಿಟ್ ಕಾಯಿನ್ ಮೌಲ್ಯ ಅರ್ಧಕ್ಕಿಂತಲೂ ಹೆಚ್ಚು ಕುಸಿಯಿತು.
ನ್ಯೂಯಾರ್ಕ್ ನ ಲಕ್ಸೆಂಬರ್ಗ್ ಮೂಲದ ಬಿಟ್ ಸ್ಟ್ಯಾಂಪ್ ವಿನಿಮಯ ಕೇಂದ್ರದಲ್ಲಿ ಮಧ್ಯಾಹ್ನದ ವ್ಯಾಪಾರದಲ್ಲಿ ಬಿಟ್ ಕಾಯಿನ್ ಬೆಲೆ 6,853.53 ಡಾಲರ್ ಕಡಿಮೆಯಾಗಿದೆ. 2017ರ ಡಿಸೆಂಬರ್ ನಲ್ಲಿ ಸುಮಾರು 20,000 ಡಾಲರ್ ಇದ್ದ ಬಿಟ್ ಕಾಯಿನ್ ಬೆಲೆ ಅರ್ಧಕ್ಕಿಂತ ಹೆಚ್ಚಿನ ಪತನವನ್ನು ಕಂಡಿದೆ. ಬಿಟ್ ಕಾಯಿನ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿ

ಕಳೆದ ವರ್ಷ 1,300 ರಷ್ಟು ಹೆಚ್ಚಳಗೊಂಡ ಕರೆನ್ಸಿ ಮೌಲ್ಯ ಈ ವರ್ಷ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಏಕೆಂದರೆ ಹೆಚ್ಚಿನ ಸರ್ಕಾರಗಳು ಮತ್ತು ಬ್ಯಾಂಕ್ ಗಳು ಬಿಟ್ ಕಾಯಿನ್ ವಹಿವಾಟಿಗೆ ​​ನಿಯಂತ್ರಕ ಶಿಸ್ತುಕ್ರಮಕ್ಕೆ ಮುಂದಾಗಿರುವುದು ಕಾರಣವಾಗಿದೆ. 2013ರ ನಂತರ ಇದೀಗ ಬಿಟ್ ಕಾಯಿನ್ ವಹಿವಾಟು ತೀವ್ರ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿಯೂ ಈ ಕುಸಿತ ಮುಂದುವರೆಯುವ ಸಾಧ್ಯತೆ ಇದೆಯೆಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ. ಬಿಟ್ ಕಾಯಿನ್ ಏನಿದು?

ಬಿಟ್ ಕಾಯಿನ್ (Bitcoin) ಬಗ್ಗೆ ಎಲ್ಲರೂ ಕೇಳುವ 10 ಪ್ರಶ್ನೆಗಳೇನು ಗೊತ್ತೆ?ಬಿಟ್ ಕಾಯಿನ್ (Bitcoin) ಬಗ್ಗೆ ಎಲ್ಲರೂ ಕೇಳುವ 10 ಪ್ರಶ್ನೆಗಳೇನು ಗೊತ್ತೆ?

English summary

Bitcoin Extends Slide

The currency, which surged more than 1,300 percent last year, has lost about half its value so far in 2018, as more governments and banks signal their intention for a regulatory crackdown.
Story first published: Tuesday, February 6, 2018, 16:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X