For Quick Alerts
ALLOW NOTIFICATIONS  
For Daily Alerts

ನವೀನ ಕಲ್ಪನೆಯ ಟಾಪ್ 5 ಆನ್ಲೈನ್ ಬಿಸಿನೆಸ್ ಐಡಿಯಾ

ಹೆಚ್ಚು ಹಣ ಸಂಪಾದಿಸಲು ಅರೆಕಾಲಿಕ ವ್ಯವಹಾರವನ್ನು ಆರಂಭಿಸಬೇಕೆಂದಿರುವಿರಾ? ಹಾಗಿದ್ದರೆ ಆನ್ಲೈನ್ ವ್ಯವಹಾರ ನಿಮಗೊಂದು ಉತ್ತಮ ಆಯ್ಕೆ. ಆನ್ಲೈನ್ ವ್ಯವಹಾರವನ್ನು ಪ್ರಾರಂಭಿಸುವುದು ತುಂಬಾ ಸುಲಭ. ಇದಕ್ಕೆ ಕಡಿಮೆ ಸಮಯ ಸಾಕು ಮತ್ತು ಹೆಚ್ಚು ಹಣದ ಅವ

By Siddu
|

ಹೆಚ್ಚು ಹಣ ಸಂಪಾದಿಸಲು ಅರೆಕಾಲಿಕ ವ್ಯವಹಾರವನ್ನು ಆರಂಭಿಸಬೇಕೆಂದಿರುವಿರಾ? ಹಾಗಿದ್ದರೆ ಆನ್ಲೈನ್ ವ್ಯವಹಾರ ನಿಮಗೊಂದು ಉತ್ತಮ ಆಯ್ಕೆ. ಆನ್ಲೈನ್ ವ್ಯವಹಾರವನ್ನು ಪ್ರಾರಂಭಿಸುವುದು ತುಂಬಾ ಸುಲಭ. ಇದಕ್ಕೆ ಕಡಿಮೆ ಸಮಯ ಸಾಕು ಮತ್ತು ಹೆಚ್ಚು ಹಣದ ಅವಶ್ಯಕತೆಯೂ ಇಲ್ಲ. ನಿಮಗೆ ಆನ್ಲೈನ್ ವ್ಯವಹಾರ ಪ್ರಾರಂಭಿಸಲು ಸ್ವಲ್ಪ ತಾಂತ್ರಿಕ ಪರಿಣಿತಿ ಮತ್ತು ಇಚ್ಛಾಶಕ್ತಿ ಇರಬೇಕು.
ನವೀನ ಕಲ್ಪನೆಯ 5 ಆನ್ಲೈನ್ ವ್ಯವಹಾರಗಳು ಇಲ್ಲಿವೆ ನೋಡಿ.. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ ಟಾಪ್ 10 ಬಿಸಿನೆಸ್ ಐಡಿಯಾ

1. ಆನ್ಲೈನ್ ಆಹಾರ ಉದ್ಯಮ

1. ಆನ್ಲೈನ್ ಆಹಾರ ಉದ್ಯಮ

ಆನ್ಲೈನ್ ಆಹಾರ ವ್ಯವಹಾರ ಪ್ರಾರಂಭ ಒಂದು ಉತ್ತಮ ವ್ಯಾಪಾರದ ಕಲ್ಪನೆ. ಈ ಉದ್ಯಮದ ಪರಿಕಲ್ಪನೆ ತುಂಬಾ ಸರಳ ಹಾಗೂ ಇದು ಪಿಜ್ಜಾ ಹಟ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡಿ ಮತ್ತು ಅದನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಿ. ಈ ವ್ಯವಹಾರಕ್ಕೆ ಕನಿಷ್ಟ ಬಂಡವಾಳ ಸಾಕು.
ಆನ್ಲೈನ್ ಆಹಾರ ಉದ್ಯಮದ ಒಂದು ಉದಾಹರಣೆಯೆಂದರೆ Delfoo.com. ಹಸಿದವರು ಆನ್ಲೈನ್ ನಲ್ಲಿ ಗುಂಡಿ ಒತ್ತಿ ಅಥವಾ ಫೋನ್ ಮೂಲಕ ಆಹಾರ ಆರ್ಡರ್ ಮಾಡಿ ತಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಹಣವನ್ನು ನೇರವಾಗಿ ಅಥವಾ ಆನ್ಲೈನ್ ಮೂಲಕ ಪಾವತಿಸಬಹುದು. ಇದರ ಸೇವೆ ವಡೋದರ ಮತ್ತು ಸೂರತ್ ನಗರಗಳಲ್ಲಿ ಲಭ್ಯವಿದೆ.
ನಿಮ್ಮ ಗಳಿಕೆಯು ಕಮಿಷನ್ ಅಥವಾ ನಿಗದಿತ ಪಾಲಿನ ಆಧಾರದಲ್ಲಿ ಇರಬಹುದು. ಇದೊಂದು ಹಸಿದವರಿಗೆ ಸಂತೋಷ ನೀಡಿ ಹಣ ಗಳಿಸುವ ಪರಿಕಲ್ಪನೆ. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

2. ಆನ್ಲೈನ್ ಟ್ಯಾಕ್ಸಿ ಬುಕಿಂಗ್

2. ಆನ್ಲೈನ್ ಟ್ಯಾಕ್ಸಿ ಬುಕಿಂಗ್

ಆನ್ಲೈನ್ ನಲ್ಲಿ ಬಾಡಿಗೆ ವಾಹನ ಕಾದಿರಿಸುವ ಸೇವೆ ಪ್ರಾರಂಭಿಸುವುದು ಮತ್ತೊಂದು ನವೀನ ಆನ್ಲೈನ್ ವ್ಯವಹಾರ. ಈ ವ್ಯವಹಾರದ ಮಾದರಿಯೆಂದರೆ ಟ್ಯಾಕ್ಸಿ/ ಕಾರನ್ನು ಸರಿಯಾದ ಸಮಯಕ್ಕೆ ಅಗತ್ಯವಿರುವ ಸ್ಥಳಕ್ಕೆ ಕಳುಹಿಸುವುದು. ಈ ವ್ಯವಹಾರದಲ್ಲಿ ಸಮಯ ಪರಿಪಾಲನೆ ಹಾಗೂ ಕಾರ್ ಅಥವಾ ಟ್ರಾವೆಲ್ ಏಜೆನ್ಸಿಗಳೊಂದಿಗಿನ ಉತ್ತಮ ಸಂಪರ್ಕ ಜಾಲ ಪ್ರಮುಖ ಪಾತ್ರ ವಹಿಸುತ್ತದೆ.
ಆನ್ಲೈನ್ ಟ್ಯಾಕ್ಸಿ ಬುಕಿಂಗ್ ಸೇವೆಯ ಉದಾಹರಣೆಯೆಂದರೆ Taxiforsure.com. ಇದು ನಿಮ್ಮ ಪ್ರಯಾಣದ ಸಮಯ, ಪ್ರಯಾಣದ ಆರಂಭ ಹಾಗೂ ತಲುಪಬೇಕಾದದ ಸ್ಥಳವನ್ನು ತಿಳಿಸಿದರೆ ಸಾಕು. ನಿಮಗೆ ಬೇಕಾದ ಸಮಯದಲ್ಲಿ ಇದರ ಸೇವೆ ಉಪಲಬ್ದವಾಗುತ್ತದೆ. ಇದಲ್ಲದೆ ಇವರ ಸೇವೆ ವಿಮಾನ ನಿಲ್ದಾಣ ವರ್ಗಾವಣೆ, ತಡರಾತ್ರಿ ಕಾರ್ ಬಾಡಿಗೆ, ರಸ್ತೆ ಪ್ರವಾಸ ಗಳಂತಹ ನಿಮ್ಮ ನಿರ್ದಿಷ್ಟ ಅವಶ್ಯಕತೆಗಳಿಗಲ್ಲದೇ, ವಾರ್ಷಿಕೋತ್ಸವ, ಹುಟ್ಟು ಹಬ್ಬ, ವಿವಾಹ ಮಹೋತ್ಸವ ಗಳಂತಹ ವಿಶೇಷ ಸಂಧರ್ಭಗಳಿಗೂ ಲಭ್ಯವಿದೆ. ಇವರ ಸೇವೆ ಭಾರತದ ಬಹುಪಾಲು ಮುಖ್ಯ ಸ್ಥಳಗಳಲ್ಲಿ ಲಭ್ಯ.

3. ಆನ್ಲೈನ್ ಗ್ರಂಥಾಲಯ

3. ಆನ್ಲೈನ್ ಗ್ರಂಥಾಲಯ

ನಿಮಗೆ ಪುಸ್ತಕಗಳೆಂದರೆ ಅಕ್ಕರೆಯೇ? ಹಾಗಾದರೆ ಇದು ನಿಮಗಾಗಿ ಹೇಳಿ ಮಾಡಿಸಿರುವಂತಹ ವ್ಯವಹಾರ. ನೀವು ಆನ್ಲೈನ್ ಪುಸ್ತಕ ಗ್ರಂಥಾಲಯ ಪ್ರಾರಂಭಿಸಬಹುದು. ಇದು ತುಂಬಾ ಸರಳವಾದ ಪರಿಕಲ್ಪನೆ. ಇದಕ್ಕಾಗಿ ನೀವು ಕೆಲವು ಪುಸ್ತಕಗಳನ್ನು ಖರೀದಿಸಬೇಕು ಹಾಗೂ ವೆಬ್ ಸೈಟ್ ವೊಂದರ ಮುಖಾಂತರ ಪ್ರದರ್ಶಿಸಬೇಕು. ಚಂದಾದಾರಿಕೆಯ ಯೋಜನೆಯನ್ನು ಮಾಡಿ ಮತ್ತು ನಿಮ್ಮ ಪುಸ್ತಕ ಭಂಡಾರಕ್ಕೆ ಸದಸ್ಯರಾಗಲು ಜನರನ್ನು ಆಹ್ವಾನಿಸಿ. ಅಗತ್ಯವಿದ್ದರೆ ಪುಸ್ತಕಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಬಹುದು.
ಆನ್ಲೈನ್ ಪುಸ್ತಕ ಗ್ರಂಥಾಲಯದ ಉದಾಹರಣೆಯೆಂದರೆ Indiareads.com. Indiareads.com ನಲ್ಲಿ ನೀವು ಚಂದಾದಾರರಾಗಬಹುದು ಹಾಗೂ ನಿಮ್ಮ ಮನೆ ಬಾಗಿಲಿಗೆ ಪುಸ್ತಕಗಳ ವಿತರಣೆ ಪಡೆಯಬಹುದು.

4. ಆನ್ಲೈನ್ ಬಾಡಿಗೆ ಆಟಿಕೆಗಳು

4. ಆನ್ಲೈನ್ ಬಾಡಿಗೆ ಆಟಿಕೆಗಳು

ಇನ್ನೊಂದು ನವೀನ ಕಲ್ಪನೆಯ ಆನ್ಲೈನ್ ವ್ಯವಹಾರವೆಂದರೆ ಆಟಿಕೆಗಳನ್ನು ಬಾಡಿಗೆಗೆ ನೀಡುವುದು. ಆಟಿಕೆಗಳೊಂದಿಗೆ ಆಡಲು ಇಷ್ಟ ಪಡುವವರಿಗಾಗಿ ಇದೊಂದು ಉತ್ತಮ ಕಲ್ಪನೆ. ನೀವು ಆನ್ಲೈನ್ ಆಟಿಕೆ ಬಾಡಿಗೆ ನೀಡುವ ಅಂತರ್ಜಾಲ ಪೋರ್ಟಲ್ ಪ್ರಾರಂಭಿಸಬಹುದು. ಈ ವ್ಯವಹಾರದ ಪರಿಕಲ್ಪನೆಯೂ ಸರಳವಾಗಿದೆ. ನೀವು ದೊಡ್ಡ ಪ್ರಮಾಣದಲ್ಲಿ ಆಟಿಕೆಗಳನ್ನು ಖರೀದಿಸಬೇಕು ಹಾಗೂ ನಿಮ್ಮ ಆನ್ಲೈನ್ ವೆಬ್ ಪುಟದಲ್ಲಿ ಅದನ್ನು ಬಾಡಿಗೆಗೆ ದೊರೆಯುವಂತೆ ಮಾಡಬೇಕು. ಇದಕ್ಕಾಗಿ ನೀವು ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಚಂದಾ ಯೋಜನೆಯನ್ನು ರೂಪಿಸಬಹುದು. ವಯಸ್ಸಿಗನುಗುಣವಾಗಿ ಬಾಡಿಗೆ ಆಟಿಕೆಗಳನ್ನು ವಿತರಿಸಿ ಹಣ ಸಂಪಾದಿಸಿ.
ಆನ್ಲೈನ್ ಬಾಡಿಗೆ ಆಟಿಕೆ ಜಾಲತಾಣಕ್ಕೆ ಉದಾಹರಣೆಯೆಂದರೆ rentoys.in. ಇಲ್ಲಿಗೆ ನೀವು ಸದಸ್ಯರಾಗುವುದರಿಂದ ನೀವು ಬಾಡಿಗೆ ಆಟಿಕೆಗಳನ್ನು ಪಡೆಯುವ ಅನುಕೂಲವನ್ನು ಹೊಂದಬಹುದು. ಈ ಸೇವೆ ಪ್ರಸ್ತುತ ಮುಂಬೈ, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆ ನಗರಗಳಲ್ಲಿ ಲಭ್ಯವಿದೆ.

5. ಆನ್ಲೈನ್ ಬಸ್ ಟಿಕೆಟ್ ಬುಕಿಂಗ್

5. ಆನ್ಲೈನ್ ಬಸ್ ಟಿಕೆಟ್ ಬುಕಿಂಗ್

ಕಡೆಯ ಆದರೆ ಕನಿಷ್ಟವಲ್ಲದ ಯಶಸ್ವಿ ಆನ್ಲೈನ್ ವ್ಯವಹಾರವೆಂದರೆ ಆನ್ಲೈನ್ ಬಸ್ ಟಿಕೆಟ್ ಕಾದಿರಿಸುವುದು. ನೀವು ಟ್ರಾವೆಲ್ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಆನ್ಲೈನ್ ನಲ್ಲಿ ಬಸ್ ಟಿಕೇಟ್ ಬುಕ್ ಮಾಡುವುದನ್ನು ಪ್ರಾರಂಭಿಸಬೇಕು.
ಆನ್ಲೈನ್ ಬಸ್ ಟಿಕೇಟ್ ಕಾಯ್ದಿರಿಸುವ ಜಾಲತಾಣದ ಉದಾಹರಣೆಯೆಂದರೆ Redbus.in. ಇಲ್ಲಿ ನೀವು ನಿಮಗೆ ಬೇಕಾದ ಆಸನವನ್ನು ಜಾಲತಾಣದಲ್ಲಿ ನೀಡಿರುವ ಬಸ್ ಆಸನದ ನಕ್ಷೆಯ ಸಹಾಯದಿಂದ ಆರಿಸಿಕೊಂಡು ಕಾಯ್ದಿರಿಸಬಹುದು. ಇವರ ಸೇವೆಯು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಲಭ್ಯವಿದೆ. ಇತ್ತಿಚಿಗೆ ಇವರು ಟಿಕೆಟ್ ಬುಕಿಂಗ್ ಆಪ್ ಕೂಡಾ ಪ್ರಾರಂಭಿಸಿದ್ದಾರೆ.

ಇನ್ನು ತಡ ಮಾಡುವುದ್ಯಾಕೆ? ಮೇಲಿನ ಯಾವುದರರೂ ಹೊಸ ಪರಿಕಲ್ಪನೆಯಂತಹ ವ್ಯವಹಾರ ಆರಂಭಿಸುವ ಬಗ್ಗೆ ಆಲೋಚಿಸಿ ಮತ್ತು ಹಣ ಗಳಿಸಲು ಪ್ರಾರಂಭಿಸಿ.

 

English summary

5 Innovative online business ideas

Want to start a part time business for earning more money? Online Business could be for you. Online business is very easy to start, require less time and money.
Story first published: Thursday, March 29, 2018, 16:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X