For Quick Alerts
ALLOW NOTIFICATIONS  
For Daily Alerts

  ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ ಟಾಪ್ 10 ಬಿಸಿನೆಸ್ ಐಡಿಯಾ

  By Siddu
  |

  ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಜನರು ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಹೊಸ ಹೊಸ ಐಡಿಯಾ, ಚಿಂತನೆಗಳೊಂದಿಗೆ ಕಡಿಮೆ ಬಂಡವಾಳದಲ್ಲಿ ಉತ್ಪಾದನ ಉದ್ಯಮಗಳನ್ನು ಆರಂಭಿಸುವುದು ಹಲವರ ಚಿಂತನೆ. ನಿಮಗೂ ಕೂಡ ಇಂತಹ ಸಾಹಸ ಮಾಡುವ ಇಚ್ಛೆಯಿದ್ದಲ್ಲಿ ಹಿಂದೇಟು ಹಾಕುವ ಅಗತ್ಯವಿಲ್ಲ. ಸರಿಯಾದ ಯೋಜನೆ, ತಯಾರಿಯೊಂದಿಗೆ ಮುನ್ನಡೆಯಿರಿ.

  ಇಲ್ಲಿ ಕಡಿಮೆ ಬಂಡವಾಳದಲ್ಲಿ ಉದ್ಯಮ ನಡೆಸಬಹುದಾದ ಕೆಲ ಪ್ರಮುಖ ಐಡಿಯಾಗಳನ್ನು ನಿಡೀದ್ದೇವೆ. ನೋಡೋಣ ಬನ್ನಿ.. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

  1. ಸ್ಮಾರ್ಟ್ ಫೋನ್ ಬಿಡಿಭಾಗಗಳ ತಯಾರಿಕೆ

  ಮೊಬೈಲ್ ಫೋನ್ ಬಿಡಿಭಾಗಗಳಾದ ಇಯರ್ ಫೋನ್ಸ್, ಬ್ಲೂಟೂತ್ ಸಾಧನ, ಕೇಸಿಂಗ್, ಬ್ಯಾಟರಿ, ಬ್ಯಾಟರಿ ಚಾರ್ಜರ್ ಗಳು ಮತ್ತು ಪವರ್ ಬ್ಯಾಂಕುಗಳಿಗೆ ದೊಡ್ಡ ಮಾರುಕಟ್ಟೆ ಇದೆ. ನೀವು ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಉತ್ಪಾದಿಸಬಹುದಾದರೆ ಅದನ್ನು ರಫ್ತು ಕೂಡ ಮಾಡಬಹುದು. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

  2. ವಾಹನಗಳ ಬಿಡಿಭಾಗ ತಯಾರಿಕೆ

  ವಾಹನಗಳ ಬಿಡಿಭಾಗ ತಯಾರಿಕೆಯು ಮತ್ತೊಂದು ದೊಡ್ಡ ತಯಾರಿಕಾ ಉದ್ಯಮವಾಗಿದೆ. ಈ ಉದ್ಯಮಕ್ಕೆ ಕೌಶಲ, ಜ್ಞಾನ, ಕಾರ್ಖಾನೆ ಮತ್ತು ಯಂತ್ರಗಳಿಗೆ ಹೂಡಿಕೆ ಬೇಕಾಗುತ್ತದೆ. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

  3. ಸೆರಾಮಿಕ್ ಟೈಲ್ಸ್ ತಯಾರಕ

  ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿನ ಉಬ್ಬರವು ಸೆರಾಮಿಕ್ ಟೈಲ್ಸ್ ನಂತಹ ಇತರ ನಿರ್ಮಾಣ ಸಂಬಂಧಿತ ವಸ್ತುಗಳಿಗೆ ಯಾವಾಗಲೂ ಸಹಾಯ ಮಾಡುತ್ತದೆ. ಈ ಉದ್ಯಮಕ್ಕೆ ಗಣನೀಯ ಪ್ರಮಾಣದ ಬಂಡವಾಳ ಬೇಕಾಗುತ್ತದೆ.

  4. ಉಪಕರಣ ತಯಾರಿಕೆ

  ನೀವು ತಾಂತ್ರಿಕವಾಗಿ ಸಮರ್ಥವಾಗಿದ್ದರೆ ಕೈ ಸಲಕರಣೆಗಳನ್ನು ತಯಾರಿಸಬಹುದು. ಇದು ಸುತ್ತಿಗೆ, ಕಟ್ಟರ್, ತಿರುಪು, ಶೇಪಿಂಗ್ ಸಲಕರಣೆಗಳು, ಕತ್ತರಿಗಳು ಮುಂತಾದವುಗಳ ತಯಾರಿಕೆಯನ್ನು ಒಳಗೊಂಡಿರುತ್ತದೆ.

  5. ಪ್ಲಾಸ್ಟಿಕ್ ಚೀಲ ತಯಾರಿಕೆ

  ಕೈ ಚೀಲಗಳು ವಿವಿಧ ಗಾತ್ರ,ಆಕಾರ ಮತ್ತು ಬಣ್ಣಗಳಲ್ಲಿ ದೊರಕುತ್ತವೆ.ಇದರ ಜೊತೆಗೆ ಚೀಲಗಳನ್ನು ಗ್ರಾಹಕೀಯಗೊಳಿಸಬಹುದು.ಚೀಲ ತಯಾರಿಕೆಯ ವ್ಯಾಪಾರವನ್ನು ಕಡಿಮೆ ವೆಚ್ಚದೊಂದಿಗೆ ಪ್ರಾರಂಭಿಸಬಹುದು.ಈ ವ್ಯಾಪಾರಕ್ಕೆ ಕಡಿಮೆ ಸ್ಥಳಾವಕಾಶವಿದ್ದರೂ ನಡೆಯುತ್ತದೆ.

  6. ರಸಗೊಬ್ಬರ ಉತ್ಪಾದಕ

  ಮುಂದಿನ ವ್ಯಾಪಾರವು ರಸಗೊಬ್ಬರ ಉತ್ಪಾದನೆಯಾಗಿದೆ.ಇದು ಸಣ್ಣ ಪ್ರಮಾಣದಲ್ಲಿ ಆರಂಭಿಸಬಹುದಾದ ಉದ್ಯಮವಾಗಿದ್ದು,ಇದನ್ನು ಆರಂಭಿಸಲು ಯಾವುದೇ ಅನುಭವ ಅಥವಾ ಕೌಶಲ್ಯಗಳು ಬೇಕಾಗುವುದಿಲ್ಲ.

  7. ಸೀಮೆಸುಣ್ಣ ತಯಾರಕ

  ಸೀಮೆಸುಣ್ಣದಂತಹ ಸಣ್ಣ ವಸ್ತುಗಳು ಯಾವಾಗಲೂ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಬೇಡಿಕೆಯಲ್ಲಿರುತ್ತವೆ.ಸ್ಥಳೀಯ ಮಾರುಕಟ್ಟೆಯನ್ನು ಅಭ್ಯಸಿಸಿ, ಸೀಮೆಸುಣ್ಣ ತಯಾರಕರಾಗಿ ನೀವು ನಿಮ್ಮದೇ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಬಹುದು.

  8. ಅಡುಗೆ ಸಾಧನಗಳ ತಯಾರಕ

  ಪಾಟ್ಸ್, ಕೆಟಲ್, ಫ್ರೈ ಪ್ಯಾನ್, ಊಟಕ್ಕೆ ಬಳಸುವ ಸಾಧನಗಳು ಮತ್ತು ಇತರ ಅಡಿಗೆ ಪಾತ್ರೆಗಳು ನಮ್ಮ ಮನೆಯಲ್ಲಿ ಬಳಸುವ ಅಗತ್ಯ ವಸ್ತುಗಳಾಗಿವೆ.ಅಡುಗೆ ಸಾಧನಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಆದ್ದರಿಂದ, ಅಡುಗೆ ಸಾಧನಗಳ ವ್ಯಾಪಾರ ಉತ್ತಮ ವ್ಯಾಪಾರವಾಗಿದೆ.

  9. ಆಟಿಕೆ ತಯಾರಿಕೆ ಆಟಿಕೆ ತಯಾರಿಕೆ

  ಮುಂದಿನ ಉದ್ಯಮವಾಗಿದೆ. ವಿವಿಧ ರೂಪ,ಗಾತ್ರ ಮತ್ತು ಬಣ್ಣಗಳಲ್ಲಿ ಆಟಿಕೆಗಳಿರುತ್ತವೆ. ಆಟಿಕೆಗಳೂ ಸಹ ಸ್ವಭಾವದಲ್ಲಿ ಗ್ರಾಹಕೀಯವಾಗಿವೆ.ನೀವು ಈ ವ್ಯಾಪಾರವನ್ನು ಕಡಿಮೆ ಮಟ್ಟದಲ್ಲಿ ಆರಂಭಿಸಿ,ನಂತರದ ಹಂತಗಳಲ್ಲಿ ವಿಸ್ತರಿಸಬಹುದು.

  10. ಹೇರ್ ಬ್ಯಾಂಡ್ ತಯಾರಿಕೆ

  ಹೇರ್ ಬ್ಯಾಂಡ್ ತಯಾರಿಕೆಯು ಕೊನೆಯ ಉತ್ಪಾದನಾ ಉದ್ಯಮವಾಗಿದೆ. ಇದು ಸ್ವಲ್ಪ ಕೈ ಚೀಲ ತಯಾರಿಕೆಗೆ ಸಂಬಂಧಿಸಿದ್ದು ಇದನ್ನು ಮನೆಯಿಂದಲೂ ಪ್ರಾರಂಭಿಸಬಹುದು.

  ಕೊನೆ ಮಾತು

  ಇಲ್ಲಿ ಹೇಳಲಾದ 30 ಉತ್ಪಾದನಾ ಉದ್ಯಮಗಳು ನಿಮಗೆ ನಿಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸ್ಪೂರ್ತಿಯಾಗಿವೆ ಎಂದು ಆಶಿಸುತ್ತೇನೆ. ನಿಮ್ಮ ಸ್ವಂತ ಸಣ್ಣ ಉತ್ಪಾದನಾ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ನಿಮ್ಮ ಕೌಶಲ,ಅನುಭವ ಮತ್ತು ತಿಳುವಳಿಕೆಯ ಆಧಾರದ ಮೇಲೆ ವಿಶ್ಲೇಷಿಸಿ,ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಿ. ನಿಮಗೆ ಯಾವುದೇ ಸಹಾಯ ಬೇಕಿದ್ದಲ್ಲಿ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ನಮಗೆ ಬರೆಯಿರಿ.

  English summary

  Top 10 Best Business with Low Investment

  The cost of equipment or manufacturing machinery required for starting a business is very low.
  Story first published: Monday, March 26, 2018, 10:33 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more