For Quick Alerts
ALLOW NOTIFICATIONS  
For Daily Alerts

ಓಲಾ, ಉಬರ್ ವಿಲೀನ ಸಾಧ್ಯತೆ

ದೇಶದ ಟ್ಯಾಕ್ಸಿ ಸಂಸ್ಥೆ ಓಲಾ ಹಾಗು ಜಾಗತಿಕ ಟ್ಯಾಕ್ಸಿ ಸಂಸ್ಥೆ ಉಬರ್ ನಡುವೆ ವಿಲೀನ ಮಾತುಕತೆ ನಡೆದಿದೆ.

|

ದೇಶದ ಟ್ಯಾಕ್ಸಿ ಸಂಸ್ಥೆ ಓಲಾ ಹಾಗು ಜಾಗತಿಕ ಟ್ಯಾಕ್ಸಿ ಸಂಸ್ಥೆ ಉಬರ್ ನಡುವೆ ವಿಲೀನ ಮಾತುಕತೆ ನಡೆದಿದೆ.

ಜಪಾನ್ ಹೂಡಿಕೆ ಸಂಸ್ಥೆಯಾಗಿರುವ ಸಾಪ್ಟ್ ಬ್ಯಾಂಕ್ ಓಲಾದಲ್ಲಿ ಶೇ. 26 ರಷ್ಟು ಪಾಲನ್ನು ಹೊಂದಿದ್ದು, ಉಬರ್ ನಲ್ಲಿ ಸಲ್ಪ ಕಡಿಮೆ ಪಾಲನ್ನು ಹೊಂದಿದೆ. ಈ ಎರಡೂ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಸಾಪ್ಟ್ ಬ್ಯಾಂಕ್ ಓಲಾ ಉಬರ್ ವಿಲೀನ ಪ್ರಕ್ರಿಯೆಯನ್ನು ಬೆಂಬಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಉಭಯ ಕಂಪನಿಗಳ ಅಧಿಕಾರಿಗಳು ಮಾತುಕತೆಯಲ್ಲಿ ತೊಡಗಿದ್ದಾರೆ.

ಓಲಾ, ಉಬರ್ ವಿಲೀನ ಸಾಧ್ಯತೆ

ಭಾರತದಲ್ಲಿ ಉಬರ್ ಮತ್ತು ಓಲಾ ವಿಲೀನಗೊಂಡರೆ ಬಹುಸಂಖ್ಯೆಯ ಕ್ಯಾಬ್ ಅಗ್ರಿಗ್ರೇಷನ್ ಮಾರುಕಟ್ಟೆಯನ್ನು ನಿಯಂತ್ರಿಸಲಿವೆ. ಪ್ರಸ್ತುತ, ಓಲಾ ಸಂಸ್ಥೆಯಲ್ಲಿ 900,000 ವಾಹನಗಳು ನೋಂದಣಿಯಾಗಿದ್ದು, ಉಬರ್ ನಲ್ಲಿ 350,000 ವಾಹನಗಳು ನೋಂದಣಿಯಾಗಿವೆ. ಈ ಎರಡು ಸಂಸ್ಥೆಗಳ ವಿಲೀನ ಪ್ರಕ್ರಿಯೆ ಮುಂದುವರಿದರೆ ಎರಡು ಸಂಸ್ಥೆಗಳ ನಡುವಿನ ಸ್ಪರ್ಧೆ ಕೊನೆಯಾಗಲಿದೆ. ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಓಲಾ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಎದುರು ನೋಡುತ್ತಿದೆ.

English summary

Uber and Ola merger could happen soon

A merger between Uber and Ola in India could be on the cards, as the rivals in the Indian taxi aggregation space are said to be in talks for a possible merger.
Story first published: Thursday, March 29, 2018, 14:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X