ಭಾರತ ಸೇರಿದಂತೆ ಜಗತ್ತಿನಾದ್ಯಂತ ಮಹಿಳೆಯರಿಗೆ ಪುರುಷರಿಗಿಂತ ಸರಾಸರಿ ಶೇ. 16.1ರಷ್ಟು ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಕಾರ್ನ್ ಫೆರ್ರಿ ಸಂಸ್ಥೆ ವರದಿ ಮಾಡಿದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ಮಹಿಳೆಯರಿಗೆ ಪುರುಷರಿಗಿಂತ ಸರಾಸರಿ ಶೇ. 16.1ರಷ್ಟು ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಕಾರ್ನ್ ಫೆರ್ರಿ ಸಂಸ್ಥೆ ವರದಿ ಮಾಡಿದೆ.

ಪುರುಷರಿಗೆ ಸರಿಸಮನಾಗಿ ಮಹಿಳೆಯರು ಕೆಲಸ ಮಾಡುತ್ತಾರೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ತುಂಬಾ ಕಡಿಮೆ ಸಂಬಳ ನೀಡಲಾಗುತ್ತಿದ್ದು, ವೇತನದ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಕಾರ್ನ್ ಫೆರ್ರಿ ಸಂಸ್ಥೆ ವರದಿ ಹೇಳಿದೆ.
ಜಗತ್ತಿನಾದ್ಯಂತ ಪುರುಷರಿಗೆ ಹೋಲಿಸಿದಾಗ ಮಹಿಳೆಯರು ಸರಾಸರಿ ಶೇ. 16.1 ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ.
ಕಾರ್ನ್ ಫೆರ್ರಿ ಜೆಂಡರ್ ಪೇ ಇಂಡೆಕ್ಸ್ ಪ್ರಕಾರ, ಪುರುಷರು ಮತ್ತು ಮಹಿಳೆಯರ ನಡುವಿನ ವೇತನ ಅಂತರ ನಿಜ. ಆದರೆ ಒಂದು ಕಂಪನಿಯಲ್ಲಿನ ಅದೇ ಉದ್ಯೋಗ ಮಟ್ಟ ಹಾಗು ಅದೇ ಕಾರ್ಯವನ್ನು ವಿಶ್ಲೇಷಿಸುವಾಗ ಅಸಮಾನತೆ ತೀರಾ ಕಡಿಮೆಯಿರುತ್ತದೆ.
ಒಂದೇ ತರಹದ ಕೆಲಸವನ್ನು ನಿರ್ವಹಿಸುವ ಸ್ಥಳದಲ್ಲಿ ಶೇ. 4 ರಷ್ಟು ವೇತನದ ಅಂತರ ಇದೆ. ಒಂದೇ ಕಂಪನಿಯ ಒಂದೇ ರೀತಿಯ ಹುದ್ದೆಯಲ್ಲಿರುವ ಮಹಿಳೆ ಹಾಗು ಪುರುಷರ ವೇತನದ ಅಂತರ ಶೇ. 0.4 ರಷ್ಟಿದೆ.
ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿನ ವೇತನ ಅಂತರ ಹೆಚ್ಚಾಗಿದ್ದು, ಇದು ಶೇ. 12.1ರಷ್ಟಿದೆ. ವೇತನದ ಅಂತರವು ಬ್ರೆಜಿಲ್ ಶೇ. 26.2, ಫ್ರಾನ್ಸ್ ನಲ್ಲಿ ಶೇ. 14.1, ಜರ್ಮನಿಯಲ್ಲಿ ಶೇ. 16.8, ಯುಕೆ ಶೇ. 23.8 ಮತ್ತು ಯುಎಸ್ ನಲ್ಲಿ ಶೇ. 17.6 ರಷ್ಟಿದೆ. ಪುರುಷರಿಗೆ ಹೋಲಿಸಿದರೆ ಗರಿಷ್ಟ ಸಂಬಳ ಪಡೆಯುವ ಮಹಿಳೆಯರ ಸಂಖ್ಯೆ ಕೂಡ ಕಡಿಮೆ ಇದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?



Click it and Unblock the Notifications