For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಚುನಾವಣಾ ಎಫೆಕ್ಟ್! 41 ಕೋಟಿ ನಗದು ಹಾಗು 4 ಲಕ್ಷ ಲೀಟರ್ ಮದ್ಯ ವಶ!!

ಚುನಾವಣಾ ಆಯೋಗ (ಇಸಿ) ಸುಮಾರು ರೂ. 41.48 ಕೋಟಿ ನಗದು ಮತ್ತು 4 ಲಕ್ಷ ಲೀಟರ್ ಗಳಷ್ಟು ಮದ್ಯವನ್ನು ವಶಪಡಿಸಿಕೊಂಡಿದ್ದು, ಕರ್ನಾಟಕದಲ್ಲಿ ಕಣ್ಗಾವಲು ತಂಡಗಳನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

By Siddu
|

ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಬಿಜೆಪಿ, ಕಾಂಗ್ರೆಸ್ ಪಕ್ಷದ ರಾಷ್ಟ್ರನಾಯಕರು ರಾಜ್ಯದ ನಾಯಕರಿಗೆ ಸಾಥ್ ಕೊಡುತ್ತಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರ ಅಂದರೆ ಕೇಳಬೇಕೆ? ಸಾಕಷ್ಟು ಗಿಮಿಕ್ ಗಳಿಗೆ, ಪೊಳ್ಳು ಸುಳ್ಳು ಭರವಸೆಗಳಿಗೆ, ಆಶೆ ಆಮಿಷಗಳಿಗೆ ಏನು ಕೊರತೆ ಇರಲ್ಲ!

ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ದುಡ್ಡು ಹಂಚುವುದು, ಹೆಂಡ ಕೊಡುವುದು ಮಾಮೂಲು. ಚುನಾವಣಾ ಆಯೋಗಕ್ಕೆ ಸಿಕ್ಕಿ ಬಿದ್ದ ನಗದು ಹಣ ಹಾಗು ಮದ್ಯದ ವಿವರ ಇಲ್ಲಿದೆ ನೋಡಿ.. ಪ್ರತಿ ತಿಂಗಳು ನಿರಂತರ ಆದಾಯ ಬೇಕೆ?

41 ಕೋಟಿ ನಗದು ಹಾಗು 21.69 ಕೋಟಿ ಮೌಲ್ಯದ ಮದ್ಯ ವಶ

41 ಕೋಟಿ ನಗದು ಹಾಗು 21.69 ಕೋಟಿ ಮೌಲ್ಯದ ಮದ್ಯ ವಶ

ಚುನಾವಣಾ ಆಯೋಗ (ಇಸಿ) ಸುಮಾರು ರೂ. 41.48 ಕೋಟಿ ನಗದು ಮತ್ತು 4 ಲಕ್ಷ ಲೀಟರ್ ಗಳಷ್ಟು ಮದ್ಯವನ್ನು ವಶಪಡಿಸಿಕೊಂಡಿದ್ದು, ಕರ್ನಾಟಕದಲ್ಲಿ ಕಣ್ಗಾವಲು ತಂಡಗಳನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ಫ್ಲೈಯಿಂಗ್ ಸ್ಕ್ವಾಡ್ ಮತ್ತು ಇತರ ಕಣ್ಗಾವಲು ತಂಡಗಳು ಒಟ್ಟು ರೂ. 41,48,27,231 ನಗದು ಮೊತ್ತ ಮತ್ತು ರೂ. 21.69 ಕೋಟಿಗಿಂತ ಹೆಚ್ಚು ಮೌಲ್ಯದ 4.64 ಲಕ್ಷ ಲೀಟರ್ಗಳಷ್ಟು ಮದ್ಯವನ್ನು ವಶಪಡಿಸಿಕೊಂಡಿವೆ.

ಚುನಾವಣಾ ಆಯೋಗದ ಕ್ರಮವೇನು?

ಚುನಾವಣಾ ಆಯೋಗದ ಕ್ರಮವೇನು?

ಮೇ 12 ರಂದು ಏಕಹಂತದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮತದಾರರನ್ನು ಸೆಳೆಯಲು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಕ್ಷಗಳು ತೊಡಗಿಕೊಳ್ಳಬಹುದೆಂದು ಚುನಾವಣ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಗದು ಹಂಚಿಕೆ ಮತ್ತು ಇನ್ನಿತರ ಆಕರ್ಷಣೆಗಳನ್ನು ಪರೀಕ್ಷಿಸಲು ಆಯೋಗ ಬಹು ಕಣ್ಗಾವಲು ತಂಡಗಳನ್ನು ಹಾಘು ಸ್ಕ್ವಾಡ್ ಗಳನ್ನು ನೇಮಿಸಿದೆ.

ಸಮೀಕ್ಷೆ ಸಮಿತಿ ಹೇಳಿಕೆ
 

ಸಮೀಕ್ಷೆ ಸಮಿತಿ ಹೇಳಿಕೆ

ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ದಕ್ಷಿಣದ ರಾಜ್ಯದಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆಯು ವಶಪಡಿಸಿಕೊಂಡ ನಗದು ಮತ್ತು ಆಭರಣಗಳ ಮೌಲ್ಯ ಮೂರು ಪಟ್ಟು ಅಂದರೆ ರೂ. 25 ಕೋಟಿಗೆ ಹೆಚ್ಚಿದೆ ಎಂದು ಸಮೀಕ್ಷೆ ಸಮಿತಿಯು ತಿಳಿಸಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ವಶಪಡಿಸಿದ್ದು ಎಷ್ಟು?

2013ರ ವಿಧಾನಸಭಾ ಚುನಾವಣೆಯಲ್ಲಿ ವಶಪಡಿಸಿದ್ದು ಎಷ್ಟು?

2013 ರ ವಿಧಾನಸಭಾ ಚುನಾವಣೆಯ ಸಂಪೂರ್ಣ ಪ್ರಚಾರದ ಅವಧಿಯಲ್ಲಿ ಐಟಿ ಇಲಾಖೆ ಒಟ್ಟು ರೂ. 4.97 ಕೋಟಿ ನಗದು ಮತ್ತು ಒಟ್ಟು ರೂ. 3.41 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.

ಕಣ್ಗಾವಲು ತಂಡ/ಮತದಾನ ಸಂಸ್ಥೆ ಹೇಳಿಕೆ

ಕಣ್ಗಾವಲು ತಂಡ/ಮತದಾನ ಸಂಸ್ಥೆ ಹೇಳಿಕೆ

ಚುನಾವಣಾ ಪ್ರಚಾರದ ಭಾಗವಾಗಿ ಏಪ್ರಿಲ್ 30ರವರೆಗೆ ವಶಪಡಿಸಿಕೊಂಡ ಒಟ್ಟು ರೂ. 19.69 ಕೋಟಿ ಮತ್ತು 4.81 ಕೋಟಿ ಮೌಲ್ಯದ ಆಭರಣಗಳನ್ನು ಕರ್ನಾಟಕದ ಐಟಿ ಇಲಾಖೆಯ ತನಿಖಾ ವಿಭಾಗವು ವಶಪಡಿಸಿಕೊಂಡಿದೆ ಎಂದು ವಿಧಾನಸಭಾ ಚುನಾವಣಾ ಸಂಬಂಧಿತ ಕಣ್ಗಾವಲು ತಂಡ ಮತ್ತು ಮತದಾನ ಸಂಸ್ಥೆ ಹೇಳಿದೆ.

English summary

Karnataka Election Effect! Over Rs 41 crore cash, 4 lakh litres liquor seized

Over Rs 41.48 crore cash and 4 lakh litres of liquor have so far been seized by the Election Commission (EC) appointed surveillance teams in poll-bound Karnataka, officials said Monday.
Story first published: Wednesday, May 2, 2018, 11:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X