ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರೂ. 13,417 ಕೋಟಿ ನಷ್ಟ

Posted By: Siddu
Subscribe to GoodReturns Kannada

ನಿರವ್ ಮೋದಿ ವಂಚನೆ ಹಗರಣದ ಸುಳಿಗೆ ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ 4ನೇ ತ್ರೈಮಾಸಿಕದಲ್ಲಿ ನಷ್ಟದ ಸುಳಿಗೆ ಸಿಲುಕಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ 2017-18ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ರೂ. 13,417 ಕೋಟಿ ನಷ್ಟ ಅನುಭವಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರೂ. 13,417 ಕೋಟಿ ನಷ್ಟ

ಕಳೆದ ಭಾರಿಯ ನಾಲ್ಕನೇ ತ್ರೈಮಾಸಿಕದಲ್ಲಿ ರೂ. 262 ಕೋಟಿ ನಿವ್ವಳ ಲಾಭ ಗಳಿಸಿತ್ತು. ವಸೂಲಾಗದ ಸಾಲಗಳಿಗಾಗಿ ಹೆಚ್ಚಿನ ಮೊತ್ತವನ್ನು ಮೀಸಲಿರಿಸಿದ್ದರಿಂದ ಈ ಭಾರಿ ಮೊತ್ತದ ನಷ್ಟ ಸಂಭವಿಸಿದೆ.

ಈ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿನ ಒಟ್ಟು ಆದಾಯ ಕಳೆದ ಸಾಲಿನ ರೂ. 14,989 ಕೋಟಿಗಳಿಂದ ರೂ. 12,945 ಕೋಟಿಗಳಿಗೆ ಕುಸಿತ ಕಂಡಿದೆ. ಹೆಚ್ಚುತ್ತಿರುವ ಕೆಟ್ಟ ಸಾಲಗಳು ಒಟ್ಟಾರೆ ತ್ರೈಮಾಸಿಕ ನಷ್ಟದ ಹೆಚ್ಚಳಕ್ಕೆ ಕಾರಣವಾಯಿತು.

ಬ್ಯಾಂಕಿನ ಒಟ್ಟು ಎನ್ಪಿಎ(ವಸುಲಾಗದ ಸಾಲದ ಮೊತ್ತ) 4ನೇ ತ್ರೈಮಾಸಿಕಕ್ಕೆ ಶೇ. 18.38ಕ್ಕೆ ಏರಿದೆ. ಕಳೆದ ವರ್ಷ ಶೇ. 12.53ರಷ್ಟಿತ್ತು.

English summary

PNB biggest ever quarterly loss of ₹13,416 crore in Q4

Scam-hit Punjab National Bank reported a ₹13,416 crore loss in the fourth quarter of 2017-18, compared with a ₹262 crore profit a year earlier.
Story first published: Wednesday, May 16, 2018, 12:55 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns