ಬೆಂಗಳೂರಿನ ಐಟಿ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಹತಾಶೆ-ನಿರಾಶೆಗಳಿಗೆ ಕಾರಣಗಳೇನು?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಕರ್ನಾಟಕದ ರಾಜಧಾನಿ, ಉದ್ಯಾನ ನಗರಗಳ ಖ್ಯಾತಿಯ ಬೆಂಗಳೂರು ದೇಶದ ಪ್ರಮುಖ ಮಹಾನಗರಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಇದು ಭಾರತದ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಇಲ್ಲಿನ ವಾಣಿಜ್ಯ ವಹಿವಾಟಿನಿಂದ ದೇಶದ ಜಿಡಿಪಿಗೆ ಬಹುದೊಡ್ಡ ಪ್ರಮಾಣದ ಆದಾಯ ನೀಡುತ್ತಿದೆ.

  ಜಗತ್ತಿನಲ್ಲೇ ಹೆಸರುವಾಸಿಯಾದ ಇನ್ಫೊಸಿಸ್, ಐಬಿಎಂ, ಡೆಲಾಯಿಟ್, ಅಕ್ಸೆಂಚರ್, ಟಿಸಿಎಸ್ ಸೇರಿದಂತೆ ಇನ್ನೂ ಅನೇಕ ಐಟಿ ಹಾಗೂ ತಂತ್ರಜ್ಞಾನದ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಇನ್ಫಾರ್ಮೇಶನ್ ಟೆಕ್ನಾಲಜಿ ಹಾಗೂ ಐಟಿ ಸಂಬಂಧಿತ ವಲಯದಲ್ಲಿ ದೇಶ ಅಪಾರ ಅಭಿವೃದ್ಧಿ ಸಾಧಿಸಿದೆ.

  ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಬಹುತೇಕ ಜನತೆ ಒಂದು ರೀತಿಯ ಅರ್ಥವಿಲ್ಲದ ಜೀವನ ಕಳೆಯುತ್ತಿದ್ದಾರೆ. ಈ ರೀತಿಯ ಅಸಂತೃಪ್ತಿ ಹಾಗೂ ಅನಾರೋಗ್ಯಕರ ಜೀವನ ಶೈಲಿಗೆ ಕಾರಣವಾಗುತ್ತಿರುವ ಅಂಶಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ವಾರ್ಷಿಕ ವೇತನ ಎಷ್ಟು? ಕೇಳಿದ್ರೆ ಶಾಕ್ ಆಗ್ತಿರಾ!

  ಗೊಂದಲದ ಮಾನಸಿಕ ಸ್ಥಿತಿ, ಕಳವಳ

  ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಐಟಿ ಕಂಪನಿಗಳಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು, ಇಂಥ ಕಂಪನಿಗಳಲ್ಲಿ ಕೆಲಸ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಇದು ಬೆಂಗಳೂರಿನ ಜನಸಂಖ್ಯೆ ಏರಿಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಬೆಂಗಳೂರಿನ ಐಟಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಹತಾಶೆ, ಉದ್ವಿಗ್ನತೆ ಮತ್ತು ಗೊಂದಲದ ಮಾನಸಿಕ ಸ್ಥಿತಿಯಿಂದ ಬಳಲುವಿಕೆ ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೇಶದಲ್ಲಿ ನಗದು ಕೊರತೆ ಹಾಗೂ ಎಟಿಎಂ ಗಳು ಖಾಲಿಯಾಗಲು ಮುಖ್ಯ ಕಾರಣಗಳೇನು ಗೊತ್ತೆ?

  ಕುಟುಂಬ ಬಿಟ್ಟು ಒಂಟಿಯಾಗಿ ಜೀವನ

  ದೇಶದ ಐಟಿ ಹಬ್ ಆಗಿರುವ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿ, ಬದುಕು ಕಟ್ಟಿಕೊಳ್ಳಲು ದೇಶದ ಎಲ್ಲ ಭಾಗಗಳಿಂದ ಜನ ಆಗಮಿಸುತ್ತಾರೆ. ಆದರೆ ಇವರಲ್ಲಿ ಬಹುತೇಕರು ತಮ್ಮ ಕುಟುಂಬವನ್ನು ಊರಲ್ಲಿಯೇ ಬಿಟ್ಟು ಇಲ್ಲಿ ಒಂಟಿ ಜೀವನ ಕಳೆಯಲಾರಂಭಿಸುತ್ತಾರೆ. ಹಲವಾರು ದಿನ, ವರ್ಷಗಳವರೆಗೆ ತಮ್ಮ ಗೆಳೆಯರು, ಸಹೋದ್ಯೋಗಿಗಳೊಂದಿಗೆ ವಾಸಿಸುತ್ತಾರೆ. ಈ ರೀತಿಯ ಜೀವನದಿಂದ ಅವರಲ್ಲಿ ಒಂದು ರೀತಿಯ ಹತಾಶೆ ಹಾಗೂ ಉದ್ವಿಗ್ನತೆ ಮನೆ ಮಾಡುತ್ತದೆ. ಅವರ ಮಾನಸಿಕ ಸಂತುಲನ ಏರುಪೇರಾಗಿ ಅರ್ಥವಿಲ್ಲದ ಜೀವನ ಸಾಗಿಸುವಂತಾಗುತ್ತದೆ.

  ಟ್ರಾಫಿಕ್ ಸಮಸ್ಯೆ ಹಾಗೂ ಒತ್ತಡದ ಜೀವನ ಶೈಲಿ

  ಬಹುತೇಕ ಐಟಿ ಉದ್ಯೋಗಿಗಳು ಬೆಂಗಳೂರಿನಲ್ಲಿ ಕೇವಲ ಕೆಲಸ ಮಾಡಿ ದುಡ್ಡು ಸಂಪಾದನೆ ಮಾಡುವ ದೃಷ್ಟಿಯಿಂದ ಇಲ್ಲಿ ವಾಸಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ದಿನೆ ದಿನೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಟ್ರಾಫಿಕ್ ಸಮಸ್ಯೆ ವಿಪರೀತವಾಗುತ್ತಿದೆ. ಯಾವಾಗ ನೋಡಿದರೂ ವಾಹನಗಳಿಂದ ಗಿಜಿಗುಡುತ್ತಿರುವ ಬೆಂಗಳೂರಿನ ರಸ್ತೆಗಳು ನಿರಂತರವಾಗಿ ಮನಸ್ಸಿಗೆ ಕಿರಿಕಿರಿ ಉಂಟುಮಾಡುತ್ತವೆ. ಇನ್ನು ಅನೇಕ ಐಟಿ ಉದ್ಯೋಗಿಗಳು ತಮ್ಮ ಜೀವನವನ್ನು ನೆಮ್ಮದಿಯಾಗಿ ಅನುಭವಿಸುವ ಬದಲು ಕೇವಲ ಕೆಲಸದ ಮೇಲೆಯೇ ಮನಸ್ಸು ಕೇಂದ್ರೀಕರಿಸಿರುತ್ತಾರೆ.

  ಅತಿಯಾದ ಒತ್ತಡದ ಜೀವನ ಶೈಲಿಯಿಂದ ನಿರಾಳವಾದ ಬದುಕು ನಡೆಸಲು ಸಾಧ್ಯವಾಗದೆ, ಈ ಪರಿಸ್ಥಿತಿಯಿಂದ ಹೊರಬರಲು ಸಹ ಆಗದೆ ಐಟಿ ಉದ್ಯೋಗಿಗಳು ಚಡಪಡಿಸುತ್ತಾರೆ. ಇದರಿಂದ ಜೀವನ ಮತ್ತಷ್ಟು ಒತ್ತಡಕ್ಕೀಡಾಗಿ ಅತಿಯಾದ ಬಳಲಿಕೆ, ಆಯಾಸ ಅನುಭವಿಸುವಂತಾಗುತ್ತದೆ.

  ಬಿಡುವಿನ ವೇಳೆಯಲ್ಲಿಯೂ ಭವಿಷ್ಯದ್ದೇ ಚಿಂತೆ

  ಐಟಿ ವಲಯದಲ್ಲಿ ಕೆಲಸ ಮಾಡುವವರು ಪ್ರತಿದಿನ ಬದಲಾಗುವ ತಂತ್ರಜ್ಞಾನದ ಬಗ್ಗೆ ಆಗಿಂದಾಗ ಜ್ಞಾನ ಪಡೆಯುವುದು ಅನಿವಾರ್ಯ. ನೂತನ ತಂತ್ರಜ್ಞಾನದ ಬಗ್ಗೆ ಅಪ್ಡೇಟ್ ಆಗದಿದ್ದರೆ ಮುಂದೇನು ಎಂಬ ಚಿಂತೆ ಕಾಡುತ್ತದೆ. ಹೀಗಾಗಿ ಕೆಲವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೊರೆ ಹೋದರೆ, ಇನ್ನು ಹಲವರು ಹೊಸ ಟೆಕ್ನಾಲಜಿಯ ಅಧ್ಯಯನದ ಮೊರೆ ಹೋಗುತ್ತಾರೆ. ಮುಂದಿನ ದಿನಗಳಲ್ಲಿ ನೆಮ್ಮದಿಯ ಸಮಯ ಬರಲಿದೆ ಎಂಬ ನಿರೀಕ್ಷೆಯಲ್ಲಿ ಸಾಕಷ್ಟು ಸಮಯಾವಕಾಶ ಕಳೆದು ಹೋಗುತ್ತದೆ. ಬಿಡುವಿನ ವೇಳೆಯಲ್ಲಿ ಕಂಪನಿಗಳ ವತಿಯಿಂದ ಆಗಾಗ ಟೂರ್‌ಗಳಿಗೆ ಹೋದರೂ ಜೀವನೋತ್ಸಾಹಕ್ಕೆ ಬೇಕಾದ ಸ್ಫೂರ್ತಿ ದೊರೆಯುವುದಿಲ್ಲ. ಇವೆಲ್ಲ ಕಾರಣಗಳಿಂದ ಜೀವನ ಖಾಲಿ ಎನಿಸತೊಡಗುತ್ತದೆ.

  ಹತಾಶೆ, ಉದ್ವಿಗ್ನತೆ

  ಸಮಯ ಕಳೆದಂತೆ ಇಂಥ ಒಂದು ಖಾಲಿ ಜೀವನಕ್ಕೆ ಇವರು ಒಗ್ಗಿಕೊಳ್ಳುತ್ತ ಸಾಗುತ್ತಾರೆ. ಆದರೆ ಹತಾಶೆ, ಉದ್ವಿಗ್ನತೆಗಳು ಹೆಚ್ಚಾಗುತ್ತ ಹೋಗುವುದರಿಂದ ಇವರು ತಮ್ಮ ಕೆಲಸದ ಮೇಲೂ ಸರಿಯಾಗಿ ಗಮನವಿಡಲು ಸಾಧ್ಯವಾಗುವುದಿಲ್ಲ. ಬೆಂಗಳೂರು ಮಹಾನಗರ ಐಟಿ ವಲಯದಲ್ಲಿನ ಉದ್ಯೋಗಿಗಳಿಗೆ ಅಪಾರ ಭವಿಷ್ಯ ನೀಡುವುದು ನಿಜವಾದರೂ ಜೊತೆಗೆ ಹತಾಶೆಯ ಜೀವನವೂ ಸುತ್ತಿಕೊಳ್ಳುತ್ತದೆ.

  ಒಟ್ಟಾರೆಯಾಗಿ ಒತ್ತಡದ ಜೀವನದಲ್ಲಿ ರಿಲ್ಯಾಕ್ಸ್ ಆಗಲು ಸಮಯವೇ ಸಿಗುವುದಿಲ್ಲ. ಹೀಗಾಗಿ ಹತಾಶೆಯ ಸುಳಿಯಲ್ಲಿ ಸಿಲುಕುವ ಐಟಿ ಉದ್ಯೋಗಿಗಳ ಜೀವನದಲ್ಲಿ ನೆಮ್ಮದಿ ಎಂಬುದು ಮರೀಚಿಕೆಯಾಗುತ್ತಿದೆ.

  English summary

  Why Bangalore’s IT Employees Are Always Frustrated: Reasons..

  Most of the IT guys in Bengaluru are leading a meaningless life. There are different reasons because of which the IT people of Bengaluru as facing problems to lead a healthier and happier life there.
  Story first published: Thursday, May 17, 2018, 10:56 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more