For Quick Alerts
ALLOW NOTIFICATIONS  
For Daily Alerts

ಕಳೆದ 7 ತಿಂಗಳಲ್ಲಿ 39 ಲಕ್ಷ ಹೊಸ ಉದ್ಯೋಗ ಸೃಷ್ಟಿ: ಇಪಿಎಫ್ಒ

ಭಾರತವು ಕಳೆದ ಏಳು ತಿಂಗಳ ಅವಧಿಯಲ್ಲಿ ಮಾರ್ಚ್ 2018 ರ ಅಂತ್ಯದ ವೇಳೆಗೆ, 39 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ನಿವೃತ್ತ ನಿಧಿ ಸಂಸ್ಥೆ (ಇಪಿಎಫ್ಒ) ತಿಳಿಸಿದೆ.

|

ಭಾರತವು ಕಳೆದ ಏಳು ತಿಂಗಳ ಅವಧಿಯಲ್ಲಿ ಮಾರ್ಚ್ 2018 ರ ಅಂತ್ಯದ ವೇಳೆಗೆ, 39 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ನಿವೃತ್ತ ನಿಧಿ ಸಂಸ್ಥೆ (ಇಪಿಎಫ್ಒ) ತಿಳಿಸಿದೆ.

 
ಕಳೆದ 7 ತಿಂಗಳಲ್ಲಿ 39 ಲಕ್ಷ ಹೊಸ ಉದ್ಯೋಗ ಸೃಷ್ಟಿ: ಇಪಿಎಫ್ಒ

ಈ ವರ್ಷದ ಮಾರ್ಚ್ ತಿಂಗಳಲ್ಲಿ 6.13 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದು, ಫೆಬ್ರವರಿಯಲ್ಲಿ 5.89 ಲಕ್ಷಕ್ಕಿಂತ ಹೆಚ್ಚಿನ ವೇತನದಾರರಿದ್ದಾರೆ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ.

 

ಎಲ್ಲಾ ವಯಸ್ಸಿನ ಗುಂಪುಗಳಲ್ಲಿನ ಪರಿಣಿತ ಸೇವಾ ವಿಭಾಗದಲ್ಲಿ ಅರ್ಧದಷ್ಟು ವೇತನದಾರರಿದ್ದು, ಎಲೆಕ್ಟ್ರಿಕ್, ಮೆಕ್ಯಾನಿಕಲ್ ಅಥವಾ ಜನರಲ್ ಎಂಜಿನಿಯರಿಂಗ್, ಕಟ್ಟಡ ಮತ್ತು ನಿರ್ಮಾಣ ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಉದ್ಯಮ ಮತ್ತು ಜವಳಿ ವಿಭಾಗಗಳು ಉದ್ಯೋಗ ಸೃಷ್ಟಿಗೆ ಗಮನಾರ್ಹವಾದ ಕೆಲವು ಕ್ಷೇತ್ರಗಳಾಗಿವೆ.

ಈ ವರ್ಷದ ಮಾರ್ಚ್ ವರೆಗೆ ಏಳು ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ ಗಳಲ್ಲಿ ಸಂಘಟಿತ ವಲಯದಲ್ಲಿ ಅರ್ಧದಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಮದು ಅಂಕಾಂಶಗಳು ತಿಳಿಸಿವೆ.

ಕಳೆದ ತಿಂಗಳು ಮೊದಲ ವೇತನದಾರರ ಡೇಟಾವನ್ನು ಇಪಿಎಫ್ಓ ಬಿಡುಗಡೆ ಮಾಡಿತು. ವೇತನದಾರರ ಅಂಕಿ-ಅಂಶಗಳಿಂದ ಉದ್ಯೋಗಾವಕಾಶ ಸೃಷ್ಟಿಯಾಗುವ ಬಗ್ಗೆ ಕೆಲವು ಪರಿಣಿತರು ಸಂಶಯ ವ್ಯಕ್ತಪಡಿಸಿದ್ದು, ಈ ಅಂಕಿ-ಅಂಶ ದೇಶದಲ್ಲಿ ನಿಜವಾದ ಉದ್ಯೋಗ ಸೃಷ್ಟಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಅಬಿಪ್ರಾಯಪಟ್ಟಿದ್ದಾರೆ.

English summary

Over 39 Lakh Jobs Created In Seven Months Till March: EPFO Data

Over 39 Lakh Jobs Created In Seven Months Till March: EPFO Data
Story first published: Wednesday, May 23, 2018, 15:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X