For Quick Alerts
ALLOW NOTIFICATIONS  
For Daily Alerts

ಮುದ್ರಾ ಯೋಜನೆ: ಸಾಲ ಒದಗಿಸಲು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಸರ್ಕಾರ ಒಪ್ಪಂದ

ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಸಣ್ಣ ಉದ್ಯಮಿಗಳಿಗೆ ಸುಲಭದ ಹಣಕಾಸು ಒದಗಿಸುವ ಸಲುವಾಗಿ ಅಇಪ್ಪತ್ತಕ್ಕೂ ಹೆಚ್ಚು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಹಣಕಾಸು ಇಲಾಖೆ ಕೈ ಜೋಡಿಸಿದೆ.

|

ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಸಣ್ಣ ಉದ್ಯಮಿಗಳಿಗೆ ಸುಲಭದ ಹಣಕಾಸು ಒದಗಿಸುವ ಸಲುವಾಗಿ ಅಮೆಜಾನ್, ಫ್ಲಿಪ್ಕಾರ್ಟ್, ಒಲಾ ಮತ್ತು ಉಬರ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಹಣಕಾಸು ಇಲಾಖೆ ಕೈ ಜೋಡಿಸಿದೆ.

 
ಮುದ್ರಾ ಯೋಜನೆ: ಸಾಲ ಒದಗಿಸಲು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಒಪ್ಪಂದ

ಸಾಲದಾತರು, ಉದ್ಯಮ ಮತ್ತು ಸರ್ಕಾರದ ನಡುವಿನ ಪಾಲುದಾರಿಕೆ ಮೂಲಕ ಸಣ್ಣ ವ್ಯವಹಾರ ಸಾಲಗಳನ್ನು ಸುಲಭಗೊಳಿಸಲು ಉದ್ದೇಶಿಸಿದೆ.

 

ಸಣ್ಣ ಉದ್ಯಮಿಗಳಿಗೆ ರೂ. 10 ಲಕ್ಷಗಳವರೆಗೆ ಸಾಲ ಒದಗಿಸುವುದು ಮುದ್ರಾ ಯೋಜನೆಯ ಗುರಿಯಾಗಿದೆ. ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs) ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲವನ್ನು ಒದಗಿಸುತ್ತವೆ. 'ಮುದ್ರಾ ಬ್ಯಾಂಕ್' ಪ್ರಯೋಜನಗಳೇನು?

ಓಲಾ, ಫ್ಲಿಪ್ಕಾರ್ಟ್, ಉಬರ್, ಡಬ್ಬವಾಲಾಸ್, ಕೇಬಲ್ ಆಪರೇಟರ್ ಗಳು, ಝೊಮಾಟೊ, ಕಂಪೆನಿಗಳು ಸಾಲ ಒದಗಿಸುವ ಪಾಲುದಾರರಾಗಿದ್ದಾರೆ. ಮುದ್ರಾ ಯೋಜನೆಯಡಿ ಹೆಚ್ಚಿನ ಸೌಲಭ್ಯ ಒದಗಿಸಲು ನಾವು ಬಯಸುತ್ತೇವೆ ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಉದ್ಯಮದಾರರಿಗೆ ಬ್ಯಾಮಕ್ ಸಾಲಗಳು ಉತ್ತಮ. ಆದರೆ ಕಂಪನಿಗಳು ಪಾಲುದಾರರಿಂದ ಬೆಂಬಲ ಬಯಸುತ್ತಿವೆ. ಹೀಗಾಗಿ ನಾವು ಅವುಗಳ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು. ಮೇಕ್ ಮೈ ಟ್ರಿಪ್, ಓಯೋ, ಮೆರು ಕ್ಯಾಬ್, ಬಿಗ್ ಬಾಸ್ಕೆಟ್, ಕಾರ್ಜ್ ಆನ್ ರೆಂಟ್ ಇತ್ಯಾದಿ ಇದರಲ್ಲಿ ಸೇರಿವೆ.
ಕಳೆದ ಹಣಕಾಸು ವರ್ಷದಲ್ಲಿ ಸರಕಾರ ಮುದ್ರಾ ಯೋಜನೆಯಡಿ ರೂ. 2.53 ಲಕ್ಷ ಕೋಟಿ ವರೆಗೆ ಸಾಲವನ್ನು ವಿಸ್ತರಿಸಿದೆ.

English summary

Mudra Yojana: Finance ministry ties up with e-commerce firms to give loans

Mudra Yojana: Finance ministry ties up with e-commerce firms to give loans
Story first published: Friday, May 25, 2018, 13:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X