For Quick Alerts
ALLOW NOTIFICATIONS  
For Daily Alerts

'ಮುದ್ರಾ ಬ್ಯಾಂಕ್' ಪ್ರಯೋಜನಗಳೇನು?

ಮುದ್ರಾ(ಮೈಕ್ರೋ ಯುನಿಟ್ಸ್ ಡೆವಲಪ್​ವೆುಂಟ್ ಆಂಡ್ ರಿಫೈನಾನ್ಸ್ ಏಜೆನ್ಸಿ) ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು.

By Siddu
|

ಮುದ್ರಾ(ಮೈಕ್ರೋ ಯುನಿಟ್ಸ್ ಡೆವಲಪ್​ವೆುಂಟ್ ಆಂಡ್ ರಿಫೈನಾನ್ಸ್ ಏಜೆನ್ಸಿ) ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು. ದೇಶದ ಯುವಜನತೆಯನ್ನು ಉದ್ಯಮಶೀಲತೆಯೆತ್ತ ಆಕರ್ಷಿಸಲು ಹಾಗೂ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ನೀಡಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ.

 

ಪ್ರಧಾನ ಮಂತ್ರಿ ಜನಧನ ಯೋಜನೆಗೆ ಪೂರಕವಾಗಿ ಕೆಲಸ ಮಾಡಲಿರುವ ಮುದ್ರಾ ಬ್ಯಾಂಕ್ ನ ಗುಣಲಕ್ಷಣಗಳು ಏನು? ಏತಕ್ಕಾಗಿ ಬ್ಯಾಂಕ್ ತೆರೆಯಲಾಗಿದೆ? ಯಾರು ಲಾಭ ಪಡೆದುಕೊಳ್ಳಬಹುದು? ದೇಶದ ಅರ್ಥ ವ್ಯವಸ್ಥೆಯಲ್ಲಿ ಇದರ ಪಾತ್ರವೇನು? ಎಂಬುದರ ಮೇಲೆ ಗಮನ ಹರಿಸುವುದು ಅಗತ್ಯವಾಗುತ್ತದೆ

1. ಅರ್ಹತೆ:

1. ಅರ್ಹತೆ:

ಯಾವುದೇ ಭಾರತೀಯ ನಾಗರಿಕ ಕೃಷಿಯೇತರ ಆದಾಯದ ಚಟುವಟಿಕೆಗೆ ಉದಾಹರಣೆಗೆ ಉತ್ಪಾದನೆ, ಪರಿಷ್ಕರಣೆ, ವ್ಯಾಪಾರ ಅಥವಾ ಸೇವಾ ವಲಯ ಇವುಗಳಲ್ಲಿ ತೊಡಗಲು ಇಚ್ಛಿಸಿ ರೂ. 10 ಲಕ್ಷದ ವರೆಗೆ ಸಾಲ ಪಡೆಯಲು ಬಯಸಿದಲ್ಲಿ ಬ್ಯಾಂಕ್, MFI, ಅಥವಾ NBFC ಸಂಪರ್ಕಿಸಿ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ & ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್ (ಮುದ್ರಾ) ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಸಾಲ ಪಡೆಯಬಹುದು.

2. ವಿವಿಧ ರೀತಿಯ ಸಾಲಗಳು

2. ವಿವಿಧ ರೀತಿಯ ಸಾಲಗಳು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಈ ಕೆಳಗಿನ ಸಾಲ ಯೋಜನೆಗಳು ಲಭ್ಯವಿರುತ್ತದೆ.
ಶಿಶು ಸಾಲ: ರೂ . 50,000/- ವರೆಗೆ ಒಳಗೊಂಡ ಸಾಲ
ಕಿಶೋರ್ ಸಾಲ: - ರೂ 50,000 /- ದಿಂದ ರೂ 5 ಲಕ್ಷ ವರೆಗೆ ಸಾಲ
ತರುಣ್ ಸಾಲ: ರೂ 5 ಲಕ್ಷ ದಿಂದ ರೂ. 10 ಲಕ್ಷ ವರೆಗೆ ಸಾಲ
ಶಿಶು, ಕಿಶೋರ್, ಮತ್ತು ತರುಣ್ ಹೆಸರುಗಳು ಫಲಾನುಭವಿಗಳ / ವಾಣಿಜ್ಯೋದ್ಯಮಿ ಗಳ ಅಭಿವೃದ್ಧಿ ಮತ್ತು ಹಣಕಾಸು ಅಗತ್ಯಗಳನ್ನು ಹಂತ ಹಂತ ವಾಗಿ ಪ್ರತಿನಿಧಿಸುತ್ತದೆ.

3. ಮುದ್ರಾ ಒಳಗೊಂಡಿರುವ ಕ್ಷೇತ್ರಗಳು
 

3. ಮುದ್ರಾ ಒಳಗೊಂಡಿರುವ ಕ್ಷೇತ್ರಗಳು

ನಿರ್ದಿಷ್ಟ ವ್ಯಾಪಾರ ಚಟುವಟಿಕೆಗಳು, ನಿರ್ಧಿಷ್ಟ ಕ್ಷೇತ್ರದಲ್ಲಿ ಚಟುವಟಿಕೆ ಅಗತ್ಯಗಳನ್ನು ಪೂರೈಸಲು ಫಲಾನುಭವಿಗಳಿಗೆ ಬೇಕಾದ ಅಗತ್ಯತೆ ಕಡೆಗೆ ಗಮನ ಹರಿಸಲಾಗುತ್ತದೆ. 
ಸಾರಿಗೆ ವಲಯ: ಇದು ಆಟೋ ರಿಕ್ಷಾ, ಸಣ್ಣ ಸರಕುಗಳು ಸಾರಿಗೆ ವಾಹನ, 3 ಚಕ್ರ ವಾಹನ, ಕಾರು, ಟ್ಯಾಕ್ಸಿ, ಇತ್ಯಾದಿ ಸರಕು ಮತ್ತು ಸಾರಿಗೆ ವಾಹನಗಳ ಖರೀದಿಯನ್ನು ಬೆಂಬಲಿಸುತ್ತದೆ.
ಸಮುದಾಯ ಮತ್ತು ವೈಯಕ್ತಿಕ ಸೇವೆ ಚಟುವಟಿಕೆಗಳು:
ಸಲೂನ್, ಬ್ಯೂಟಿಪಾರ್ಲರ್ ಗಳು, ವ್ಯಾಯಾಮಶಾಲೆ, ಅಂಗಡಿಗಳು, ಹೊಲಿಗೆ ಅಂಗಡಿಗಳು, ಡ್ರೈ ಕ್ಲೀನಿಂಗ್, ಸೈಕಲ್ ಮತ್ತು ಮೋಟರ್ ರಿಪೇರಿ ಮಾಡುವ ಅಂಗಡಿ, DTP ಮತ್ತು ಜೆರಾಕ್ಸ್ , ಮೆಡಿಸಿನ್ ಅಂಗಡಿಗಳು, ಕೊರಿಯರ್ ಏಜೆಂಟ್ಸ್ ಹೀಗೆ ಹಲವು ಕ್ಷೇತ್ರಗಳನ್ನು ಒಳಗೊಂಡಿದೆ.

4. ಉತ್ಪನ್ನಗಳ ವಲಯ

4. ಉತ್ಪನ್ನಗಳ ವಲಯ

ಹಪ್ಪಳ ತಯಾರಿಕೆ, ಉಪ್ಪಿನಕಾಯಿ ತಯಾರಿಕೆ, ಜಾಮ್ / ಜೆಲ್ಲಿ ತಯಾರಿಕೆ, ಗ್ರಾಮೀಣ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಸಂರಕ್ಷಣೆ, ಸಣ್ಣ ಸೇವೆ ಆಹಾರ ಮಳಿಗೆಗಳು ಮತ್ತು ಅಡುಗೆ / ಕ್ಯಾಂಟೀನ್ ಸೇವೆಗಳು, ಐಸ್ ತಯಾರಿಕೆ ಘಟಕಗಳು, ಐಸ್ ಕ್ರೀಮ್ ಮಾಡುವ ಘಟಕಗಳು, ಬಿಸ್ಕತ್ತು, ಬ್ರೆಡ್ ಮತ್ತು ಬನ್ ತಯಾರಿಕೆ, ಇತ್ಯಾದಿ ಗಳಿಗೆ ಬೆಂಬಲ ಒದಗಿಸುವುದಾಗಿದೆ.

5. ಜವಳಿ ಕ್ಷೇತ್ರ

5. ಜವಳಿ ಕ್ಷೇತ್ರ

ಕೈಮಗ್ಗ, ಮಗ್ಗ, ಸಾಂಪ್ರದಾಯಿಕ ಕಸೂತಿ ಮತ್ತು ಕೈ ಕೆಲಸ, ಸಾಂಪ್ರದಾಯಿಕ ಬಣ್ಣ ಮತ್ತು ಮುದ್ರಣ, ಉಡುಪು ವಿನ್ಯಾಸ, ಹೆಣಿಗೆ, ಹತ್ತಿ ಬೆಸೆಯುವುದು, ಗಣಕೀಕೃತ ಕಸೂತಿ, ಹೊಲಿಗೆ ಮತ್ತು ಜವಳಿ ಉಡುಪು ಇತ್ಯಾದಿ.

6. ಅರ್ಜಿ ಸಲ್ಲಿಸುವುದು ಹೇಗೆ

6. ಅರ್ಜಿ ಸಲ್ಲಿಸುವುದು ಹೇಗೆ

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ನೆರವು ಪಡೆಯಲು ಬಯಸುವವರು, ತಮ್ಮ ಪ್ರದೇಶದಲ್ಲಿರುವ PSU ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು ಯಾವುದೇ ಸ್ಥಳೀಯ ಶಾಖೆಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು.

7. ಅರ್ಜಿ ಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

7. ಅರ್ಜಿ ಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

1. ಗುರುತಿನ ಪ್ರಮಾಣ - ಸ್ವಯಂ ದೃಢೀಕರಿಸಿದ ಮತದಾರರ ಐಡಿ ಕಾರ್ಡ್ / ಚಾಲಕ ಪರವಾನಗಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ಪೋರ್ಟ್ ಇತ್ಯಾದಿ.
2. ನಿವಾಸ ಪುರಾವೆ: ಇತ್ತೀಚಿನ ದೂರವಾಣಿ ಬಿಲ್ / ವಿದ್ಯುತ್ ಬಿಲ್ / ಆಸ್ತಿ ತೆರಿಗೆ ಸ್ವೀಕೃತಿ (ಹಳೆಯ 2 ತಿಂಗಳ) / ಮತದಾರರ ಐಡಿ ಕಾರ್ಡ್ / ಆಧಾರ್ ಕಾರ್ಡ್ / ಬ್ಯಾಂಕ್ ಠೇವಣಿ ಪುಸ್ತಕ ಅಥವಾ ಇತ್ತೀಚಿನ ಖಾತೆ ಹೇಳಿಕೆಯ ಪಾಸ್ಪೋರ್ಟ್ ತಕ್ಕಂತೆ ಬ್ಯಾಂಕ್ ಅಧಿಕಾರಿಗಳು ದೃಢೀಕರಿಸಿದ / ವಸತಿ ಪ್ರಮಾಣಪತ್ರ / ಸರಕಾರ ಪ್ರಾಧಿಕಾರ / ಸ್ಥಳೀಯ ಪಂಚಾಯತ್ / ಪುರಸಭೆ ಬಿಡುಗಡೆಮಾಡಿದ ಪ್ರಮಾಣಪತ್ರ ಇತ್ಯಾದಿ.
3. ರ್ಜಿದಾರರ ಇತ್ತೀಚಿನ ಛಾಯಾಚಿತ್ರ (2 ಪ್ರತಿಗಳು) 6 ತಿಂಗಳ ಒಳಗೆ ತೆಗೆಸಿರುವಂತಹದು.
4. ಯಂತ್ರೋಪಕರಣಗಳನ್ನು ಮತ್ತು ಇತರ ವಸ್ತುಗಳನ್ನು ಖರೀದಿಸುವ ಉದ್ಧರಣ (ಕೊಟೇಶನ್)
5. ಯಂತ್ರೋಪಕರಣಗಳು ಮತ್ತು ವಸ್ತು ಗಳ ಸರಬರಾಜುದಾರ ಹೆಸರು ಮತ್ತು ವಿವರ
6. ಮಾಲೀಕತ್ವಕ್ಕೆ ಸಂಬಂಧಿಸಿದ ನೋಂದಣಿ ಪ್ರಮಾಣಪತ್ರಗಳು / ಇತರೆ ದಾಖಲೆಗಳ ಪ್ರತಿ, ವ್ಯಾಪಾರದ ಘಟಕ ವಿಳಾಸದ ಗುರುತು, ಉದ್ಯಮ ಗುರುತು / ವಿಳಾಸ ಪುರಾವೆ
7. ಎಸ್ಸಿ / ಎಸ್ಟಿ / ಒಬಿಸಿ / ಹಿಂದುಳಿದ ವರ್ಗದ ಬಗ್ಗೆ ಪುರಾವೆ.

8. ಒಟ್ಟಾರೆ ಪ್ರಯೋಜನ ಏನು ?

8. ಒಟ್ಟಾರೆ ಪ್ರಯೋಜನ ಏನು ?

1. ಯಾವುದೇ ಒಂದು ವಿಷಯದಲ್ಲಿ ಪರಿಣತಿ (skill) ಇರುವವರಿಗೆ ಸ್ವಂತ ಉದ್ದಿಮೆ ಸ್ಥಾಪಿಸಲು ನೆರವು ನೀಡುವುದು.
2. ಕಡಿಮೆ ಬಡ್ಡಿ ದರದಲ್ಲಿ ದೀರ್ಘಾವಧಿಗೆ ಸಾಲ ಸೌಲಭ್ಯ ಒದಗಿಸುವುದು.
3. ಜಾಮೀನು ರಹಿತ ಅಥವಾ ಉದ್ಯಮದ ಯಂತ್ರೋಪಕರಣ ಅಡಮಾನದ ಮೇಲೆ ಸಾಲ ನೀಡುವುದು.
4. ಅತ್ಯಂತ ಕಡಿಮೆ ಅವಧಿಯಲ್ಲಿ ಸರಳ ದಾಖಲೆ ಮೂಲಕ ಸವಲತ್ತು ಒದಗಿಸುವುದು.
5. ಹರಿಜನ-ಗಿರಿಜನ- ಹಿಂದುಳಿದ ವರ್ಗದವರಿಗೆ ವಿಶೆಷ ಆದ್ಯತೆ ನೀಡುವುದು.

English summary

Mudra Bank What you should know about it?

The Prime Minister Shri Narendra Modi on Wednesday launched the Micro Units Development and Refinance Agency Ltd. called as MUDRA Bank at a function at Vigyan Bhavan in the national capital. During the launch, the Prime Minister said that MUDRA scheme is aimed at "funding the unfunded".
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X