ಮನೆ ಖರೀದಿದಾರರಿಗೆ ಸಿಹಿಸುದ್ದಿ! ಗೃಹ ಸಾಲದ ಮಿತಿ ಹೆಚ್ಚಳ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮನೆ ಖರೀದಾರರಿಗೆ ಸಿಹಿಸುದ್ದಿ ನೀಡಿದ್ದು, ಗೃಹ ಸಾಲದ ಮಿತಿಯನ್ನು ಹೆಚ್ಚಿಸಿದೆ.

  ಆದ್ಯತಾ ವಲಯದ ವ್ಯಾಪ್ತಿಗೆ ಬರುವ ಗೃಹ ಸಾಲದ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕೈಗೆಟಕುವ ಗೃಹ ನಿರ್ಮಾಣ ಸಾಲಕ್ಕೆ ಉತ್ತೇಜನ ಸಿಗಲಿದೆ.

  ಸಾಲ ಮಿತಿ ಏರಿಕೆ

  ಗೃಹಸಾಲದ ಮಿತಿಯನ್ನು ಮಹಾನಗರಗಳಲ್ಲಿ ರೂ. 28 ಲಕ್ಷದಿಂದ ರು. 35 ಲಕ್ಷಗಳಿಗೆ ಏರಿಸಲಾಗಿದೆ. ಅದೇ ರೀತಿ ನಗರಗಳಲ್ಲಿ ರೂ. 20 ಲಕ್ಷದಿಂದ ರೂ. 25 ಲಕ್ಷಗಳವರೆಗೆ ಹೆಚ್ಚಿಸಲಾಗಿದೆ. ಇದು ಆದ್ಯತಾ ವಲಯದ ವ್ಯಾಪ್ತಿಗೆ ಬರುವ ಸಾಲದ ಮಿತಿಯಾಗಿದೆ.

  ಅಪಾರ್ಟ್ಮೆಂಟ್ ವೆಚ್ಚ

  ಕೈಗೆಟಕುವ ವಸತಿ ಯೋಜನೆಗಳ ಅಪಾರ್ಟ್ಮೆಂಟ್ ವೆಚ್ಚ ರೂ. 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯಿರುವ ನಗರಗಳಲ್ಲಿ ರೂ. 45 ಲಕ್ಷ ಹಾಗು ಇತರ ನಗರಗಳಲ್ಲಿ ರೂ. 30 ಲಕ್ಷ ನಿಗದಿ ಮಾಡಲಾಗಿದೆ.

  ಜೂನ್ ಅಂತ್ಯಕ್ಕೆ ಸುತ್ತೋಲೆ

  ಕೈಗೆಟಕುವ ವಸತಿ ಯೋಜನೆಗಳ ಆದೇಶ ಜೂನ್ ಅಂತ್ಯಕ್ಕೆ ಬರುವ ನಿರೀಕ್ಷೆ ಇದೆ. ಆರ್ಬಿಐನ ಈ ತೀರ್ಮಾನದಿಂದಾಗಿ ಎಲ್ಲರಿಗೂ ಮನೆ ಒದಗಿಸುವ ಕೇಂದ್ರ ಸರ್ಕಾರದ ಯೋಜನೆಗೆ ಶಕ್ತಿ ಸಿಗಲಿದೆ.

  ಬೇಡಿಕೆ ಹೆಚ್ಚಲಿದೆ

  ಗೃಹಸಾಲಕ್ಕೆ ಸಂಬಂಧಿಸಿದಂತೆ ಆದ್ಯತಾ ವಲಯದ ಸಾಲದ ಮಿತಿಯ ಪ್ರಮಾಣ ಹೆಚ್ಚಿಸಿರುವುದರಿಂದ ಬ್ಯಾಂಕ್ ಸಾಲಕ್ಕೆ ಬೇಡಿಕೆ ಹೆಚ್ಚುವ ಸಾದ್ಯತೆ ಇದೆಯೆನ್ನಲಾಗಿದೆ.

  English summary

  RBI makes it easier to get home loans for affordable houses

  Home loans up to Rs 35 lakh in metros will now qualify for the benefits of priority sector lending. Earlier only housing loans up to Rs 28 lakh were eligible for these benefits.
  Story first published: Thursday, June 7, 2018, 10:57 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more