For Quick Alerts
ALLOW NOTIFICATIONS  
For Daily Alerts

  ಕರ್ನಾಟಕ ಬಜೆಟ್ 2018: ಎಚ್. ಡಿ. ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

  By Siddu
  |

  ಕರ್ನಾಟಕ ರಾಜ್ಯದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದ್ದಾರೆ.
  ರಾಜ್ಯದ ಎಲ್ಲ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿಪರ ಬಜೆಟ್ ಮಂಡನೆ ಸರ್ಕಾರ ಉದ್ದೇಶ. ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಕುಮಾರಸ್ವಾಮಿಯವರ ಮೊದಲ ಬಜೆಟ್ ನ ಆಶಯ..!
  ಬಿಜೆಪಿ, ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷಗಳು ವಿಧಾನಸಭಾ ಚುನಾವಣೆ ಮುನ್ನ ತಮ್ಮ ಪ್ರಣಾಳಿಕೆಗಳಲ್ಲಿ ಭರಪೂರ ಯೋಜನೆಗಳನ್ನು ಘೋಷಿಸುವುದಾಗಿ ಭರವಸೆ ನೀಡಿದ್ದವು. ಇದೀಗ ಅಧಿಕಾರಕ್ಕೆ ಬಂದಿರುವ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಅವುಗಳಲ್ಲಿ ಎಷ್ಟನ್ನು ಬಜೆಟ್ ನಲ್ಲಿ ಅಳವಡಿಸಿಕೊಳ್ಳಲಿದೆ ಎಂಬುದು ಗೊತ್ತಾಗಲಿದೆ.

  ಅದೇನೆ ಇರಲಿ, 2018ರ ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ..

  ಸರ್ವಾಂಗೀಣ ಅಭಿವೃದ್ದಿಯ ಧ್ಯೇಯ

  ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಕಾ್ರ ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿಯ ಧ್ಯೇಯವನ್ನು ಹೊಂದಿದೆ. ಕರ್ನಾಟಕ ಈಗಾಗಲೇ ಸಾಕಷ್ಟು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಜೊತೆಗೆ ನಮ್ಮ ಮುಂದೆ ಹಲವು ಸವಾಲುಗಳಿದ್ದರೂ ಅದನ್ನೆಲ್ಲಾ ಯಶಸ್ವಿಯಾಗಿ ನಿಭಾಯಿಸಿ ಮುನ್ನಡೆಯಲಾಗುವುದು ಎಂದು ಬಜೆಟ್ ಮಂಡಿಸುತ್ತಿರುವ ಕುಮಾರಸ್ವಾಮಿ ಹೇಳಿದರು.

  ರೈತರ ಸಾಲಮನ್ನಾ

  ಹಲವಾರು ಚರ್ಚೆಗಳಿಗೆ ಗ್ರಾಸವಾಗಿರುವ ರೈತರ ಸಾಲಮನ್ನಾ ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಎಲ್ಲಾ ವರ್ಗದ ಜನರ ಆಶೋತ್ತರಗಳನ್ನು ಈಡೇರಿಸಲಾಗುವುದು.
  ರೈತರ ರೂ. 2 ಲಕ್ಷಗಳವರೆಗಿನ ಸಾಲಮನ್ನಾ ಮಾಡಲು ಕ್ರಮಕೈಗೊಳ್ಲಲಾಗುವುದು. ರೈತರ ಸಾಲಮನ್ನಾದ ದೃಷ್ಟಿಯಿಂದ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು. ಬಜೆಟ್ 2018: ಸಿದ್ದರಾಮಯ್ಯರವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

  ಇಸ್ರೆಲ್ ಮಾದರಿ ಕೃಷಿಗೆ 150 ಕೋಟಿ ಮೀಸಲು

  ಇಸ್ರೆಲ್ ಮಾದರಿಯ ನೂತನ ಕೃಷಿ ಪದ್ದತಿಗೆ ರೂ. 150 ಕೋಟಿ ಮೀಸಲು ಇಡಲಾಗುವುದು. ೫ ಸಾವಿರ ಹೆಕ್ಟೇರ್ ನಲ್ಲಿ ಇಸ್ರೇಲ್ ಮಾದರಿ ಕೃಷಿ ಆರಂಭ. ರಾಜ್ಯದಾದ್ಯಂತ ೧.೯ ಲಕ್ಷ ಹೊಂಡಗಲ ನಿರ್ಮಾಣ.

  ತೈಲದ ಮೇಲೆ ಸೆಸ್ ಶೇ. 32ಕ್ಕೆ ಏರಿಕೆ

  ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ದರವನ್ನು ಶೇ. ೩೦ ರಿಮದ ೩೨ಕ್ಕೆ ಹೆಚ್ಚಿಸಲಾಗಿದೆ.

  ರೈತರಿಗೆ ರೂ. 6 ಸಾವಿರ ಕೋಟಿ ಮೀಸಲು

  ರೈತರಿಗೆ ಹೊಸದಾಗಿ ಸಾಲ ನೀಡಲು ರೂ. 6 ಸಾವಿರ ಕೋಟಿ ಮೀಸಲು ಇಡಲಾಗಿದೆ. ರೂ. ೩೪ ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗುವುದು.

  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

  ಪೆಟ್ರೋಲ್ ಬೆಲೆ ರೂ. ೧.೧೪ ಏರಿಕೆ, ಡೀಸೆಲ್ ದರ ಲೀಟರ್ ರೂ. ೧.೧೨ ಹೆಚ್ಚಳ ಮಾಡಲಾಗಿದೆ.

  ರೇಷ್ಮೆ ಮಾರುಕಟ್ಟೆ

  ರೂ. ೩ ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು.

  ಮದ್ಯ ದುಬಾರಿ

  ಮದ್ಯದ ಮೇಲಿನ ತೆರಿಗೆಯನ್ನು ಶೇ. ೪ರಷ್ಟು ಹೆಚ್ಚಳ ಮಾಡಲಾಗಿದೆ. ಮದ್ಯ ದುಬಾರಿ
  ಮದ್ಯದ ಮೇಲಿನ ತೆರಿಗೆಯನ್ನು ಶೇ. ೪ರಷ್ಟು ಹೆಚ್ಚಳ ಮಾಡಲಾಗಿದೆ.

  ಸಿದ್ದರಾಮಯ್ಯ ಯೋಜನೆಗಳು ಮುಂದುವರಿಕೆ

  ಕಳೆದ ಬಾರಿ ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯರವರು ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಮುಂದುವರೆಸಲಾಗುವುದು.

  ಶಿಕ್ಷಣಕ್ಕೆ ಒತ್ತು

  ಮಂಡ್ಯ ವೈದ್ಯಕೀಯ ಕಾಲೇಜು ಮೇಲ್ದರ್ಜೆಗೇರಿಸಲು ರೂ. ೩೦ ಕೋಟಿ ಮೀಸಲು. ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಶಿಕ್ಷಣ ಇಲಾಖೆಗೆ ರೂ. ೧೫೦ ಕೋಟಿ ನಿಗದಿ.

  ಇಂದಿರಾ ಕ್ಯಾಂಟಿನ್ ೨೧೧ ಕೋಟಿ ಮೀಸಲು

  ಹೊಸ ಇಂದಿರಾ ಕ್ಯಾಂಟಿನ್ ಗಳಿಗಾಗಿ ರೂ. ೨೧೧ ಕೊಟಿ ಮೀಸಲು ಇಡಲಾಗಿದೆ.

  ಸಂದ್ಯಾ ಸುರಕ್ಷಾ ಯೋಜನೆ

  ಸಂದ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು ರೂ. ೬೦೦ ರಿಂದ ರೂ. ೧೦೦೦ಕ್ಕೆ ಏರಿಸಲಾಗಿದೆ.

  ಸ್ವಸಹಾಯ ಸಂಘಗಳಿಗೆ ಭರ್ಜರಿ ಸಾಲ

  ಸ್ವಸಹಾಯ ಸಂಘಗಳ ಉತ್ತೇಜನಕ್ಕಾಗಿ ರೂ. ೧೦ ಲಕ್ಷದವರೆಗಿನ ಸಾಲ ನೀಡಲಾಗುವುದು. ಮೊದಲ ರೂ. ೫ ಲಕ್ಷಗಳಿಗೆ ಬಡ್ಡಿ ಇರುವುದಿಲ್ಲ.

  ಹಿರಿಯ ನಾಗರಿಕರಿಗೆ ಮಾಸಾಶನ

  ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ನೀಡಲಾಗುತ್ತಿರುವ ಮಾಸಾಶನದಲ್ಲಿ ಹೆಚ್ಚಳ. ಇರು ರೂ. ೬೦೦ ರಿಂದ ರು. ೧೦೦೦ಕ್ಕೆ ಏರಿಸಲಾಗಿದೆ. ಇದು ೩೨ ಲಕ್ಷ ಹಿರಿಯ ಜೀವಗಳಿಗೆ ಸಹಕಾರಿಯಾಗಲಿದೆ.

  ಬೆಂಗಳೂರು ಕಾರಿಡಾರ್ ಯೋಜನೆ

  ಬೆಂಗಳೂರು ನಗರದಲ್ಲಿ ಆರು ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕಾಗಿ ರೂ. ೧೫,೮೨೫ ಕೋಟಿ ಮೀಸಲಿಟ್ಟಿದ್ದು, ಯೊಜನೆ ಜಾರಿ ಮಾಡಲಾಗುವುದು. ಬೆಂಗಳೂರು ಹೊರವಲಯದಲ್ಲಿ ಫೆರಿಫೆರಲ್ ರಿಂಗ್ ರೋಡ್ ನಾರ್ಮಾಣ.

  ಅಬಕಾರಿ ಸುಂಕ ಏರಿಕೆ

  ರಾಜ್ಯದಲ್ಲಿ ಅಬಕಾರಿ ಸುಂಕವನ್ನು ಶೇ. ೪ರಷ್ಟು ಏರಿಸಲಾಗುವುದು. ಮದ್ಯ ಕೂಡ ದುಬಾರಿಯಾಗಿದ್ದು, ವಾಹನ ತೆರಿಗೆಯಲ್ಲಿ ಹೆಚ್ಚಳವಾಗಿದೆ.

  ಮುಖ್ಯಮಂತ್ರಿ ಮಾತೃಶ್ರೀ ಯೋಜನೆ

  ಕುಮಾರಸ್ವಾಮಿಯವರು ಮುಖ್ಯಮಂತ್ರಿ ಮಾತೃಶ್ರೀ ಯೋಜನೆಗಾಗಿ ರೂ. ೩೫೦ ಕೋಟಿ ಮೀಸಲು ಇಟ್ಟಿದ್ದಾರೆ. ಪ್ರತಿ ಬಿಪಿಎಲ್ ಕಾರ್ಡುದಾರ ಗರ್ಭೀಣಿಯರಿಗೆ ಆರು ತಿಂಗಳವರೆಗೆ ರೂ. ೧,೦೦೦ ಮಾಶಾಸನ ಇರಿಸಿದ್ದಾರೆ.

  ಜಲಧಾರೆ ಯೋಜನೆ

  ಶುದ್ದ ಕುಡಿಯುವ ನೀರಿಗಾಗಿ ಶುದ್ದೀಕರಣಕ್ಕಾಗಿ ಜಲಧಾರೆ ಯೋಜನೆಯನ್ನು ಜಾರಿ ಮಾಡಲಾಗಿದೆ. ಜಲಧಾರೆ ಯೋಜನೆಗಾಗಿ ರೂ. ೫೩ ಕೋಟಿ ಮೀಸಲು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಜಲಧಾರೆ ಯೋಜನೆ ಜಾರಿ.

  ಬ್ರಾಹ್ಮಣರಿಗೆ ೨೫ ಕೋಟಿ ಮೀಸಲು

  ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರೂ. ೨೫ ಸಾವಿರ ಕೋಟಿ ಮೀಸಲು ಇಡಲಾಗಿದೆ.

  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

  ಮೈಸೂರು, ಬೆಳಗಾವಿ, ಕಲಬುರಗಿಯಲ್ಲಿ ಸೂಪರರ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ. ರಾಮನಗರದಲ್ಲಿ ೪೦ ಕೋಟಿ ವೆಚ್ಚದಲ್ಲಿ ೩೦೦ ಹಾಸಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.

  ಮೆಟ್ರೋ ವಿಸ್ತರಣೆ

  ಬೆಂಗಳೂರಿನ ಪ್ರಮುಖ ನಮ್ಮ ಮೆಟ್ರೋ ಯೋಜನೆಯನ್ನು ಮೂರನೇ ಹಂತಕ್ಕೆ ವಿಸ್ತರಣೆ. ಜೆ.ಪಿ ನಗರದಿಂದ ಕೆ.ಆರ್ ಪುರಂ, ಟೋಲ್ ಗೇಟ್ ನಿಂದ ಕಡಬಗೆರೆ, ಗೊಟ್ಟಿಗೆರೆಯಿಮದ ಬಸವಪುರ, ಕೋಗಿಲು ಕ್ರಾಸ್ ನಿಂದ ರಾಜಾನಕುಂಟೆ ಹಿಗೆ ಹಲವು ಭಾಗಗಳಿಗೆ ಮೂರನೆ ಹಂತದ ಮೆಟ್ರೋ ವಿಸ್ತರಣೆ.

  ಗ್ರಾಮಾಭಿವೃದ್ಧಿಗೆ 14 ಕೋಟಿ ಮೀಸಲು

  ರಾಜ್ಯದಲ್ಲಿನ ಗ್ರಾಮಗಳ ಅಭಿವೃದ್ಧಿಗಾಗಿ ರೂ. ೧೪.೪೯ ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಆದಗಯತೆ ನೀಡಲಾಗಿದೆ.

  ಭೂ ಒಡೆತನ ಯೊಜನೆ

  ರೈತ ಮಹಿಳೆಯರ ಅಭಿವೃದ್ಧಿಗಾಗಿ ಭೂ ಒಡೆತನ ಯೊಜನೆ ಜಾರಿ ಮಾಡಲಾಗಿದೆ. ಮಹಿಳೆಯರ ಭೂಮಿಗೆ ಕೊಳವೆ ಬಾವಿ ಸೌಲಭ್ಯ ಹಾಗು ಕೃಷಿ ಯಂತ್ರಗಳ ವಿತರಣೆ ಮಾಡಲಾಗುವುದು.

  ಪ್ರಗತಿ ಕಾಲನಿ ಯೋಜನೆ ೫ ಕೋಟಿ

  ರಾಜ್ಯದಲ್ಲಿರುವ ಕಾಲನಿ ಹಾಗು ತಾಂಡಾಗಳ ಅಭಿವೃದ್ಧಿಗಾಗಿ ಪ್ರಗತಿ ಕಾಲನಿ ಯೋಜನೆ ಜಾರಿ. ಈ ಯೋಜನೆಗಾಗಿ ರೂ. ೫ ಕೋಟಿ ಅನುದಾನ ಇರಿಸಲಾಗಿದೆ.

  ಎಸ್ಸಿ, ಎಸ್ಟಿ ತರಬೇತಿ

  ಪರಿಶಿಷ್ಟ್ ಜಾತಿ ಹಾಗು ಪರಿಶಿಷ್ಟ್ ಪಂಗಡಗಳ ವಿದ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ನೀಡಲಾಗುವುದು.

  ಶಿಕ್ಷಣ ಇಲಾಖೆಗೆ ೧೫೦ ಕೋಟಿ

  ಶಿಕ್ಷಣ ಸಬಲೀಕರಣಕ್ಕಾಗಿ ಶಿಕ್ಷಣ ಇಲಾಖೆಗೆ ರೂ. ೧೫೦ ಕೋಟಿ ಮೀಸಲು ಇಡಲಾಗಿದೆ. ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುವುದು.

  ಬಡವರಿಗೆ ಸೂರು

  ಬೆಂಗಳೂರಿನಲ್ಲಿ ಬಡವರಿಗೆ ಸೂರು ಕಲ್ಪಿಸುವ ಬಹುಮಹಡಿ ಮನೆ ಯೋಜನೆ ಜಾರಿ ಮಾಡಲಾಗುವುದು. ಸರ್ಕಾರಿ ಶಾಲಾ ಕಾಲೇಜುಗಳ ದುರಸ್ಥಿಗೆ ರೂ. ೧೫೦ ಕೋಟಿ ಅನುದಾನ ಮೀಸಲು. ಕೊಳಗೇರಿ ವಾಸಿಗಳಿಗೆ ಸೂರು ಕಲ್ಪಿಸುವ ಯೋಜನೆ ಜಾರಿ.

  ಸಾರಿಗೆ ಸಂಸ್ಥೆಗೆ ೧೦೦ ಕೋಟಿ

  ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆಗೆ ರೂ. ೧೦೦ ಕೋಟಿ ಅನುದಾನ ಇಡಲಾಗಿದೆ.

  ಅನ್ನಭಾಗ್ಯ

  ಬಿಪಿಎಲ್ ಫಲಾನು ವಿಗಳಿಗೆ ಹಿಂದಿನ ೭ ಕೆ.ಜಿ ಅಕ್ಕಿ ಬದಲಿಗೆ ೫ ಕೆಜಿ ಅಕ್ಕಿ, ೧ ಲಿಟರ್ ಫಾಮ್ ಎಣ್ಣೆ, ೧ ಕೆಜಿ ಸಕ್ಕರೆ, ಅರ್ಧ ಕೆಜಿ ತೊಗರಿ ಬೆಳೆ.

  ಧಾರವಾಡದ ಕೃಷಿ ವಿವಿಗೆ ರೂ. 3 ಕೋಟಿ ಮೀಸಲು

  ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ರೂ. 3 ಕೋಟಿ ಅನುದಾನ ಮೀಸಲು. ರೈತರ ಹೊಲಗಳಿಗೆ ಸೆನ್ಸಾರ್ ಅಳವಡಿಸಲು ರೂ. 5 ಕೋಟಿ. ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮಕ್ಕೆ 2 ಕೋಟಿ ರೂ.ಅನುದಾನ.

  1 ಲಕ್ಷ ಉದ್ಯೋಗ ಸೃಷ್ಟಿ

  ಮುಂದಿನ ನಾಲ್ಕು ವರ್ಷದಲ್ಲಿ ರೂ. 2000 ಸಾವಿರ ಕೋಟಿ ಬಂಡವಾಳ ಹೂಡಿಕೆಯ ಗುರಿ ಇರಿಸಲಾಗಿದೆ. ಈ ಮೂಲಕ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇದೆ.

  ಪ್ರಮುಖ ಇಲಾಖೆಗಳ ಅನುದಾನ

  ನಗರಾಭಿವೃದ್ಧಿ ಇಲಾಖೆಗೆ ರೂ. 17727 ಕೋಟಿ
  ಇಂಧನ ಇಲಾಖೆಗೆ ರೂ. 14123 ಕೋಟಿ
  ಸಮಾಜ ಕಲ್ಯಾಣ ಇಲಾಖೆಗೆ ರೂ. 11788 ಕೋಟಿ ರೂ. ಮೀಸಲಿಡಲಾಗಿದೆ. ಇ-ಆಡಳಿತ ಜಾರಿ ಮಾಡಲಾಗುವುದು.

  English summary

  Karnataka Budget 2018: Complete details of H D Kumaraswamy Budget..

  Karnataka Chief Minister H D Kumaraswamy, who also holds the Finance portfolio, presenting his first budget.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more