For Quick Alerts
ALLOW NOTIFICATIONS  
For Daily Alerts

ಪಾಸ್ಪೋರ್ಟ್ ಕಾಯಿದೆ ಬದಲಾವಣೆ: ಸಮಿತಿ ಶಿಫಾರಸ್ಸು

ವಿಜಯ್‌ ಮಲ್ಯ, ನೀರವ್‌ ಮೋದಿ ಹಾಗೂ ಹಾಗು ಮೆಹುಲ್ ಚೊಕ್ಸಿ ಹೀಗೆ ಹಲವರು ಬಹುಕೋಟಿ ಬ್ಯಾಂಕಿಂಗ್ ಹಗರಣಗಳನ್ನು ನಡೆಸಿ ದೇಶ ಬಿಟ್ಟು ಫಲಾಯನ ಮಾಡಿದ್ದಾರೆ.

By Siddu Thoravat
|

ವಿಜಯ್‌ ಮಲ್ಯ, ನೀರವ್‌ ಮೋದಿ ಹಾಗು ಮೆಹುಲ್ ಚೊಕ್ಸಿ ಹೀಗೆ ಹಲವರು ಬಹುಕೋಟಿ ಹಗರಣಗಳನ್ನು ನಡೆಸಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಬ್ಯಾಂಕಿಂಗ್ ಹಗರಣ ಮತ್ತು ವಂಚನಾ ಪ್ರಕರಣಗಳನ್ನು ತಡೆಗಟ್ಟಲು ಪಾಸ್ಪೋರ್ಟ್ ನಿಯಮಗಳಲ್ಲಿ ಬದಲಾವಣೆ ತರಲು ವಿದೇಶಾಂಗ ಸಚಿವಾಲಯ ಮುಂದಾಗಿದೆ.

ಪಾಸ್ಪೋರ್ಟ್ ಕಾಯಿದೆ ಬದಲಾವಣೆ: ಸಮಿತಿ ಶಿಫಾರಸ್ಸು

ಡೀಫಾಲ್ಟಿಂಗ್ ಪ್ರವರ್ತಕರು ಹಾಗು ವಂಚಕರು ದೇಶ ಬಿಟ್ಟು ಪಲಾಯನ ಮಾಡದಂತೆ ತಡೆಗಟ್ಟಲು ಪಾಸ್ಪೋರ್ಟ್ ಕಾಯಿದೆ ತಿದ್ದುಪಡಿಗೆ ಸಮಿತಿ ರಚಿಸಲಾಗಿದೆ. ಪಾಸ್ಪೋರ್ಟ್ ತಿದ್ದುಪಡಿ ಸಮಿತಿಯಲ್ಲಿ ಜಾರಿ ನಿರ್ದೇಶನಾಲಯ, ಗುಪ್ತಚರ ಇಲಾಖೆ, ಆರ್‌ಬಿಐ, ಸಿಬಿಐ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಇರಲಿದ್ದಾರೆ.

ಭಾರತೀಯ ನಾಗರಿಕರು ವಿದೇಶದಲ್ಲಿ ನಾಗರಿಕತ್ವ ಪಡೆಯುವ ಬಗ್ಗೆ ಸಮಿತಿ ವಿಚಾರ ಮಾಡಲಿದ್ದು, ಆರೋಪಿಗಳು ಬೇರೊಂದು ದೇಶದ ಪಾಸ್‌ಪೋರ್ಟ್‌ ಹೊಂದಿದ್ದರೆ, ಅವರನ್ನು ಹಿಡಿಯುವುದು ಕಷ್ಟವಾಗುತ್ತದೆ. ಹೀಗಾಗಿ ಕಟ್ಟುನಿಟ್ಟಿನ ನಿಯಮ ರೂಪಿಸಲು ಸಮಿತಿ ಶಿಫಾರಸ್ಸು ಮಾಡಲಿದೆ.

ಇದಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ಯುಗಿಟಿವ್ ಎಕನಾಮಿಕ್ ಅಫೆಂಡರ್ಸ್ ವಿಧೇಯಕ 2018 (Fugitive Economic Offenders Bill, 2018) ಮಂಡಿಸಲಾಗಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಮೆಹುಲ್‌ ಚೋಕ್ಸಿಯಂತೆ ಎರಡು ದೇಶದ ಪೌರತ್ವ ಹೊಂದಿರುವ ಪ್ರಕರಣಗಳಲ್ಲಿ ಅನುಸರಿಸಬೇಕಾದ ನಿಯಮ, ಹಲವು ಕ್ರಮಗಳಲ್ಲಿ ಆಗಬೇಕಿರುವ ಬದಲಾವಣೆ ನಗ್ಗೆ ಚರ್ಚಿಸಲಾಗಿದೆ. ನೀರವ್‌ ಮೋದಿ ವಿರುದ್ಧ ಇಂಟರ್‌ಪೋಲ್‌ ರೆಡ್‌ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದ್ದರೂ ಈವರೆಗೆ ಬಂಧಿಸಲು ಆಗಿಲ್ಲ.

ಈ ಎಲ್ಲಾ ಸಂಗತಿಗಳ ಹಿನ್ನೆಲೆಯಲ್ಲಿ ಕಾಯಿದೆ ರಚಿಸಲು, ಪಾಸ್‌ಪೋರ್ಟ್‌ ಕಾಯಿದೆಯಲ್ಲಿ ತಿದ್ದುಪಡಿ ತರಲು ತೀರ್ಮಾನಿಸಲಾಗಿದ್ದು, ಹಗರಣದಲ್ಲಿ ಪಾಲ್ಗೊಂಡು ಪಲಾಯನ ಮಾಡುವವರಿಗೆ ಹೊಸ ಕಾಯಿದೆ ರೂಪಿಸಲಾಗುತ್ತಿದೆ ಎಂದು ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

English summary

Panel seeks changes in passport Act to prevent fraudsters from fleeing India

The home ministry had constituted a panel to look into the issue of Indian passport holders obtaining duel citizenship as has been the case of Choksi.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X