For Quick Alerts
ALLOW NOTIFICATIONS  
For Daily Alerts

ಸಿಹಿಸುದ್ದಿ! ಎಲ್ಲಾ ಅಂಚೆ ಕಚೇರಿಗಳಲ್ಲಿ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥೆ ಜಾರಿ

ಡಿಸೆಂಬರ್ 31, 2018 ರ ವೇಳೆಗೆ ದೇಶದಲ್ಲಿನ 1.55 ಲಕ್ಷ ಅಂಚೆ ಕಚೇರಿಗಳು ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)ವ್ಯವಸ್ಥೆಯೊಂದಿಗೆ ಲಿಂಕ್ ಮಾಡಬೇಕು ಎಂದು ಸಂವಹನ ಸಚಿವ ಮನೋಜ್ ಸಿನ್ಹಾ ಬುಧವಾರ ತಿಳಿಸಿದ್ದಾರೆ.

By Siddu
|

ಡಿಸೆಂಬರ್ 31, 2018 ರ ವೇಳೆಗೆ ದೇಶದಲ್ಲಿನ 1.55 ಲಕ್ಷ ಅಂಚೆ ಕಚೇರಿಗಳು ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ)ವ್ಯವಸ್ಥೆಯೊಂದಿಗೆ ಲಿಂಕ್ ಮಾಡಬೇಕು ಎಂದು ಸಂವಹನ ಸಚಿವ ಮನೋಜ್ ಸಿನ್ಹಾ ಬುಧವಾರ ತಿಳಿಸಿದ್ದಾರೆ.

 

ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಸೆಪ್ಟಂಬರ್ 1 ರಂದು ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗೆ ಚಾಲನೆ ನೀಡಲಿದ್ದಾರೆ. ಸೆಪ್ಟಂಬರ್ 1 ರಂದು ದೇಶದ 650 ಶಾಖೆಗಳಲ್ಲಿನ 3250 ಪ್ರವೇಶ ಪಾಯಿಂಟ್ ಗಳಲ್ಲಿ ಚಾಲನೆ ಸಿಗಲಿದೆ. ಮನೆಯಿಂದ ಕೆಲಸ ಮಾಡಲು ಬಯಸುವಿರಾ? ಈ 17 ಕಂಪನಿಗಳು ನೇಮಕಾತಿ ಮಾಡುತ್ತವೆ..

ಖರ್ಚು ವೆಚ್ಚ

ಖರ್ಚು ವೆಚ್ಚ

ಪೋಸ್ಟ್ ಪೇಮೆಂಟ್ ಬ್ಯಾಂಕ್ ಯೋಜನೆ ಅಳವಡಿಕೆಗೆ ರೂ. 800 ಕೋಟಿ ರೂ. 1,435 ಕೋಟಿವರೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ತಂತ್ರಜ್ಞಾನ ವೆಚ್ಚಕ್ಕಾಗಿ ರೂ. ೪೦೦ ಕೊಟಿ, ಮಾನವ ಸಂಪನ್ಮೂಲಕ್ಕಾಗಿ ರೂ. ೨೩೫ ಕೋಟಿ ವೆಚ್ಚ ಮಾಡಲಿದೆ.

1.55 ಲಕ್ಷ ಅಂಚೆ ಕಚೇರಿ

1.55 ಲಕ್ಷ ಅಂಚೆ ಕಚೇರಿ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಯನ್ನು ಒದಗಿಸಲು ಸುಮಾರು 1.55 ಲಕ್ಷ ಅಂಚೆ ಕಚೇರಿ ಶಾಖೆಗಳನ್ನು ತಲುಪಲಿದೆ. ಈ ವರ್ಷ ಅಂತ್ಯದ ವೇಳೆಗೆ ಎಲ್ಲಾ 1.55 ಲಕ್ಷ ಅಂಚೆ ಕಛೇರಿಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗಳೊಂದಿಗೆ ಸಂಪರ್ಕಿಸಲು ಪ್ರಯತ್ನಿಸಲಾಗುವುದು.

ಐಪಿಪಿಬಿ ಸೌಲಭ್ಯಗಳು
 

ಐಪಿಪಿಬಿ ಸೌಲಭ್ಯಗಳು

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೊಂದಿಗೆ, ಯಾವುದೇ ಬ್ಯಾಂಕ್ ಖಾತೆಯ ಗ್ರಾಮೀಣ ಪ್ರದೇಶದ ಜನರಿಗೆ ಮೊಬೈಲ್ ಬ್ಯಾಂಕ್ ಮತ್ತು ಹಣದ ವರ್ಗಾವಣೆ ಸೇರಿದಂತೆ ಹಣಕಾಸಿನ ಸೇವೆಗಳನ್ನು ಅಪ್ಲಿಕೇಶನ್ ಸಹಾಯದಿಂದ ಅಥವಾ ಅಂಚೆ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಪಡೆಯಬಹುದು. ಅಂಚೆ ಪಾವತಿ ಬ್ಯಾಂಕಿಯು ಆರ್ಟಿಜಿಎಸ್, ಎನ್ಇಎಫ್ಟಿ, ಐಎಂಪಿಎಸ್ (RTGS, NEFT, IMPS) ವ್ಯವಹಾರಕ್ಕೆ ಅವಕಾಶ ನೀಡಿದೆ. ಇದು ಯಾವುದೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.

English summary

Good News! All Post Offices to Be Linked to India Post Payments Bank

All the 1.55 lakh post offices in the country would be linked to the India Post Payments Bank (IPPB) system by December 31, 2018.
Story first published: Thursday, August 30, 2018, 12:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X