For Quick Alerts
ALLOW NOTIFICATIONS  
For Daily Alerts

ಬಾಬಾ ರಾಮದೇವ್ ರಿಂದ ಪತಂಜಲಿಯ ಹೊಸ ಉತ್ಪನ್ನಗಳ ಬಿಡುಗಡೆ,1000 ಕೋಟಿ ಆದಾಯ ನಿರೀಕ್ಷೆ

ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಪತಂಜಲಿ ಸಂಸ್ಥೆಯ ರಾಯಬಾರಿ ಯೋಗ ಗುರು ಬಾಬಾ ರಮದೇವ್ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.

|

ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಪತಂಜಲಿ ಸಂಸ್ಥೆಯ ರಾಯಬಾರಿ ಯೋಗ ಗುರು ಬಾಬಾ ರಮದೇವ್ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.
ದೇಶಿ ಉತ್ಪನ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಪತಂಜಲಿ ವೇಗವಾಗಿ ಬೆಳೆಯುತ್ತಿರುವ (ಎಫ್ಎಂಸಿಜಿ) ಸಂಸ್ಥೆಯಾಗಿ ಹೊರಹೊಮ್ಮಿದೆ. ಆಯುಷ್ಮಾನ್ ಭಾರತ್ ಯೋಜನೆ: 5 ಲಕ್ಷ ವಿಮಾ ಸೌಲಭ್ಯ ಯಾರಿಗೆ ಸಿಗಲಿದೆ, ನೋಂದಣಿ ಹೇಗೆ?

ಪತಂಜಲಿ ನೂತನ ಉತ್ಪನ್ನಗಳು

ಪತಂಜಲಿ ನೂತನ ಉತ್ಪನ್ನಗಳು

ಯೋಗ ಗುರು ರಾಮದೇವ್ ಗಣೇಶ ಚತುರ್ಥಿ ಪ್ರಯುಕ್ತ ಪತಂಜಲಿ ಬ್ರ್ಯಾಂಡ್ ಹಸುವಿನ ಹಾಲು, ತುಪ್ಪ, ಪನ್ನೀರ್, ಮಜ್ಜಿಗೆ ಸೇರಿದಂತೆ ಹಲವು ಉತ್ಪನ್ನಗಳನ್ನು ಮೊದಲ ಹಂತದಲ್ಲಿ ದೆಹಲಿ-ಎನ್ಸಿಆರ್, ಮುಂಬೈ, ಪುಣೆ, ರಾಜಸ್ಥಾನ್ ಮತ್ತು ಇತರ ಕಡೆಗಳಲ್ಲಿ ಬಿಡುಗಡೆಯಾಗಿದೆ. 2019-20ನೇ ಸಾಲಿನ ಹಣಕಾಸು ವರ್ಷದಲ್ಲಿ ಸಂಸ್ಥೆ ಪ್ರತಿದಿನ ಹತ್ತು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ನಿರೀಕ್ಷೆ ಇದೆ. ಇದರೊಂದಿಗೆ ತರಕಾರಿ, ಪತಂಜಲಿ ಮಿನರಲ್ ವಾಟರ್ ಕೂಡ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಬಾಬಾ ರಾಮದೇವ್ ಏನೆಂದರು?

ಬಾಬಾ ರಾಮದೇವ್ ಏನೆಂದರು?

ಸಮಾರಂಭದಲ್ಲಿ ಮಾತನಾಡಿದ ರಾಮದೇವ್, ಪತಂಜಲಿ ಉತ್ಪನ್ನಗಳು ಶೇ. 100 ರಷ್ಟು ಪರಿಶುದ್ಧವಾಗಿದ್ದು, ಪತಂಜಲಿ ಉತ್ಪನ್ನಗಳು ರುಚಿಗೂ ಕೂಡ ಹೆಸರುವಾಸಿಯಾಗಿವೆ. ಗ್ರಾಹಕರ ಬೇಡಿಕೆ ಮೇರೆಗೆ ಮುಂದಿನ ದಿನಗಳಲ್ಲಿ ಉತ್ಪಾದನೆಯ ಪ್ರಮಾಣ ಹೆಚ್ಚಿಸಲಾಗುವುದು ಎಂದಿದ್ದಾರೆ. ಸದ್ಯ 10 ಲಕ್ಷ ಲೀಟರ್ ಗುರಿಯಿರುವ ಪತಂಜಲಿ ಹಾಲಿನ ಉತ್ಪಾದನೆಯ ಪ್ರಮಾಣ ಮುಂದಿನ ದಿನಗಳಲ್ಲಿ 40 ಲಕ್ಷ ಲೀಟರ್ ಗೆ ಏರಿಕೆ ಮಾಡಲಾಗುವುದು ಎಂದರು.

ಪತಂಜಲಿ ಸಾದನೆ

ಪತಂಜಲಿ ಸಾದನೆ

ದೇಶದ ಎರಡು ಸಾವಿರ ಗ್ರಾಮಗಳ 1 ಲಕ್ಷಕ್ಕೂ ಹೆಚ್ಚು ರೈತರಿಂದ ಶುದ್ದ ಹಾಲನ್ನು ನೇರವಾಗಿ ಖರೀದಿ ಮಾಡಲಾಗುವುದು ಎಂದು ಯೋಗಗುರು ತಿಳಿಸಿದ್ದಾರೆ. ಪತಂಜಲಿ ಉತ್ಪನ್ನಗಳನ್ನ ಗ್ರಾಹಕರ ಮನೆ ಮನೆಗೆ ತಲುಪಿಸುವಲ್ಲಿ ದೇಶದ 56,000 ಮಾರಾಟಗಾರರು ಮತ್ತು ರೀಟೈಲ್ ಉದ್ದಿಮೆದಾರರು ಸಫಲರಾಗಿದ್ದಾರೆ ಎಂದಿದ್ದಾರೆ. ರೋಸ್ ಮಿಲ್ಕ್ ಮತ್ತು ವಸ್ತ್ರ ಭಂಡಾರ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಪತಂಜಲಿ ಮುಂದಾಗಿದೆ.

English summary

Baba Ramdev's Patanjali launches dairy products, expects Rs 1,000 crore revenue

Baba Ramdev's Patanjali has announced its entry into the dairy products section and expects the category to generate revenue of Rs 1,000 crore by 2020.
Story first published: Friday, September 14, 2018, 12:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X