For Quick Alerts
ALLOW NOTIFICATIONS  
For Daily Alerts

ಪಿಎಫ್ ಹಣ ವಿತ್ ಡ್ರಾ ಸುಲಭ, ಹೇಗೆ ಗೊತ್ತಾ?

ನೌಕರರ ಪ್ರಾವಿಡೆಂಟ್ ಫಂಡ್ ಸಂಸ್ಥೆ (ಇಪಿಎಫ್ಒ) ಮೊತ್ತವನ್ನು ಹಿಂಪಡೆಯಲು ಆನ್ಲೈನ್ ​​ಸೌಲಭ್ಯವನ್ನು ಪರಿಚಯಿಸಿದ್ದು, ಇದು ಸಂಪೂರ್ಣ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದಲ್ಲದೆ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ.

|

ನೌಕರರ ಪ್ರಾವಿಡೆಂಟ್ ಫಂಡ್ ಸಂಸ್ಥೆ (ಇಪಿಎಫ್ಒ) ಮೊತ್ತವನ್ನು ಹಿಂಪಡೆಯಲು ಆನ್ಲೈನ್ ​​ಸೌಲಭ್ಯವನ್ನು ಪರಿಚಯಿಸಿದ್ದು, ಇದು ಸಂಪೂರ್ಣ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದಲ್ಲದೆ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ.

 

ನೌಕರರು ಪಿಎಫ್ ಮೊತ್ತ ಹಿಂಪಡೆಯುದಕ್ಕಾಗಿ ಅರ್ಜಿ ಸಲ್ಲಿಸಲು ಕೆವೈಸಿ ಆಧಾರಿತ ಯುಎಎನ್ ನಂಬರ್ ಇದ್ದರೆ ಸಾಕು. ಯುಎಎನ್ (UAN) ಅನ್ನು ಹೊಂದಿದ್ದರೆ, ಈ ಅಪ್ಲಿಕೇಶನ್ ಅನ್ನು ಪ್ರಕ್ರಿಯೆಗೊಳಿಸುವುದಕ್ಕೆ ನಿಮ್ಮ ಹಿಂದಿನ ಉದ್ಯೋಗದಾತರ ಅನುಮೋದನೆಯ ಅಗತ್ಯವಿರುವುದಿಲ್ಲ.

ಹಾಗಾಗಿ ನಿಮ್ಮ ಪಿಎಫ್ ಮೊತ್ತ ಬಿಡಿಸಿಕೊಳ್ಳಲು ಇಷ್ಟು ದಿ‌ನ ತೊಂದರೆಗಳು ಇನ್ನುಮುಂದೆ ಇರಲ್ಲ. ಪಿಎಫ್ ಹಿಂಪಡೆಯಲು ಇನ್ನು ಆನ್ ಲೈನ್ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಎಲ್ಪಿಜಿ ಗ್ರಾಹಕರಿಗೆ ಕಹಿಸುದ್ದಿ! ಎಲ್ಪಿಜಿ ಸಿಲಿಂಡರ್ ಬೆಲೆ ರೂ. 59 ಏರಿಕೆ

ಪಿಎಫ್ ವಿತ್ ಡ್ರಾ ಸುಲಭ

ಪಿಎಫ್ ವಿತ್ ಡ್ರಾ ಸುಲಭ

ಚಂದಾದಾರರು ಪಿಎಫ್ ಹಣ ಬಿಡಿಸಿಕೊಳ್ಳಲು ತಮ್ಮ ಕಚೇರಿಯಿಂದ ಪಿಎಫ್ ಕಚೇರಿಗೆ ಅಲೆದಾಡಬೇಕಿತ್ತು. ಅನೇಕ ಬಾರಿ‌ ಜನ ಹೆಚ್ಚಿರುವುದರಿಂದ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಆದ್ದರಿಂದ ಇದನ್ನು ತಪ್ಪಿಸಲು ಆನ್ ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಯುಎಎನ್ ನಂಬರ್ ಇದ್ದರೆ ಸಾಕು ಎಂದು ಪಿಎಫ್ ಇಲಾಖೆ ಹೇಳಿದೆ.

ಪಿಎಫ್ ವರ್ಗಾವಣೆ

ಪಿಎಫ್ ವರ್ಗಾವಣೆ

ನೀವು 10 ವರ್ಷಗಳಿಗಿಂತಲೂ ಹೆಚ್ಚು ಕಾಲ ಇಪಿಎಫ್ ಯೋಜನೆಯಲ್ಲಿ ಮುಂದುವರಿದರೆ ಪಿಂಚಣಿಗೆ ನೀವು ಅರ್ಹತೆ ಪಡೆದುಕೊಳ್ಳುತ್ತೀರಿ. ಇದು ನೀವು ಹಿಂದಿನ ಉದ್ಯೋಗದಾತರಿಂದ ಪ್ರಸ್ತುತ ಉದ್ಯೋಗದಾತರಿಗೆ ಪಿಎಫ್ ಅನ್ನು ವರ್ಗಾವಣೆ ಮಾಡುವ ಮೂಲಕ ಮಾಡಬಹುದು. ಬ್ಯಾಂಕ್ ಖಾತೆಗೆ‌ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರುವ ಯುಎಎನ್ ನಂಬರ್ ಮೂಲಕ ಹಣ ಬಿಡಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಆನ್ ಲೈನ್ ಪ್ರಕ್ರಿಯೆಗೆ ಸಂಸ್ಥೆಯಿಂದಲೂ ಯಾವುದೇ ಪರವಾನಗಿ ಬೇಕಿಲ್ಲ.

ವಿತ್ ಡ್ರಾ ಮುನ್ನ ಎಚ್ಚರ
 

ವಿತ್ ಡ್ರಾ ಮುನ್ನ ಎಚ್ಚರ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪೂರ್ಣ ಪ್ರಮಾಣದ ಹಣವನ್ನು ಬಿಡಿಸಿಕೊಳ್ಳುವಾಗ ಎಚ್ಚರಿಕೆ ಇರಬೇಕು. ಐದು ವರ್ಷದೊಳಗೆ ಬಿಡಿಸಿಕೊಂಡರೆ ತೆರಿಗೆ ವಿನಾಯಿತಿ ಪರಿಗಣಿಸುವುದಿಲ್ಲ. ಆದ್ದರಿಂದ ನಿವೃತ್ತಿ ಜೀವನಕ್ಕೆ ಯಾವುದೇ ಸೇವಿಂಗ್ಸ್ ಉಳಿಯುವುದಿಲ್ಲ. ಆದ್ದರಿಂದ ಹಣ ಬಿಡಿಸುವಾಗ ಎಚ್ಚರ ಅಗತ್ಯ. ಆನ್ ಲೈನ್ ಅರ್ಜಿ ಸಲ್ಲಿಸಲು www.epfindia.gov.in ಭೇಟಿ ನೀಡಿ.

Read more about: ಇಪಿಎಫ್ epfo epf ppf money
English summary

Withdraw PF online: It is possible; Here’s how to do it

EPFO has introduced the online facility for withdrawal of the fund, which has made the entire process easier and less time-consuming.
Story first published: Monday, October 1, 2018, 13:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X