For Quick Alerts
ALLOW NOTIFICATIONS  
For Daily Alerts

ಎಲ್ಪಿಜಿ ಗ್ರಾಹಕರಿಗೆ ಕಹಿಸುದ್ದಿ! ಎಲ್ಪಿಜಿ ಸಿಲಿಂಡರ್ ಬೆಲೆ ರೂ. 59 ಏರಿಕೆ

ಸರ್ಕಾರ ಎಲ್ಪಿಜಿ ಗ್ರಾಹಕರಿಗೆ ಕಳೆದ ತಿಂಗಳಿನಂತೆ ಈ ತಿಂಗಳು ಕೂಡ ಕಹಿಸುದ್ದಿ ನೀಡಿದೆ. ಒಂದೇಡೆ ತೈಲ ಬೆಲೆ ಏರಿಕೆಯಿಂದ ತಲೆ ಕಡೆಸಿಕೊಂಡಿರುವ ಸಾರ್ವಜನಕಿಕರಿಗೆ ಇನ್ನೊಂದು ಅಘಾತ! ಸರ್ಕಾರ ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ

|

ಸರ್ಕಾರ ಎಲ್ಪಿಜಿ ಗ್ರಾಹಕರಿಗೆ ಕಳೆದ ತಿಂಗಳಿನಂತೆ ಈ ತಿಂಗಳು ಕೂಡ ಕಹಿಸುದ್ದಿ ನೀಡಿದೆ. ಒಂದೇಡೆ ತೈಲ ಬೆಲೆ ಏರಿಕೆಯಿಂದ ತಲೆ ಕಡೆಸಿಕೊಂಡಿರುವ ಸಾರ್ವಜನಕಿಕರಿಗೆ ಇನ್ನೊಂದು ಅಘಾತ! ಸರ್ಕಾರ ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಏರಿಕೆ ಮಾಡಿದೆ. ಎಸ್ಬಿಐ ಹೊಸ ನಿಯಮಕ್ಕೆ ಗ್ರಾಹಕರ ಆಕ್ರೋಶ

ಸಬ್ಸಿಡಿ ಸಿಲಿಂಡರ್ ಬೆಲೆ

ಸಬ್ಸಿಡಿ ಸಿಲಿಂಡರ್ ಬೆಲೆ

ಸಬ್ಸಿಡಿ ರಹಿತ ಎಲ್ಪಿಜಿ ದರ ಪ್ರತಿ ಸಿಲಿಂಡರ್ ಗೆ ರೂ. 2.89 ಏರಿಕೆ ಆಗಿದೆ. ಎಲ್ಪಿಜಿ ದರ ಏರಿಕೆಯಿಂದ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 502.4 ಆಗಲಿದೆ. ಸೆಪ್ಟಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 499.51 ಆಗಿತ್ತು.
ಕೇಂದ್ರ ಸರ್ಕಾರ ಸಬ್ಸಿಡಿಯನ್ನು ನೀಡುತ್ತಿದ್ದರೂ ಜಿಎಸ್ಟಿ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ.

ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ

ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ

ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ದೆಹಲಿಯಲ್ಲಿ ರೂ. 59 ಏರಿಕೆಯಾಗಿದೆ. ಅಕ್ಟೋಬರ್ 1ರಿಂದ ಜಾರಿಯಾಗಿದ್ದು, ಪ್ರತಿ ಸಿಲಿಂಡರ್ ಬೆಲೆ ರೂ. 879 ಇದೆ. ಆಗಸ್ಟ್ ನಲ್ಲಿ ಇದರ ಬೆಲೆ ರೂ. ರೂ. 820 ಇತ್ತು.

ಸಬ್ಸಿಡಿ ಮೊತ್ತ ಖಾತೆಗೆ ಜಮಾ
 

ಸಬ್ಸಿಡಿ ಮೊತ್ತ ಖಾತೆಗೆ ಜಮಾ

ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಸಬ್ಸಿಡಿ ಮೊತ್ತ ವರ್ಗಾವಣೆ ಮಾಡುವ ಪ್ರಮಾಣವನ್ನು ಅಕ್ಟೋಬರ್ ತಿಂಗಳಲ್ಲಿ ಪ್ರತಿ ಸಿಲಿಂಡರ್ ಗೆ ರೂ. 376.60 ಸಬ್ಸಿಡಿ ನೀಡಲಾಗುತ್ತದೆ. ಇದು ಸೆಪ್ಟೆಂಬರ್‌ ನಲ್ಲಿ ಪ್ರತಿ ಸಿಲಿಂಡರ್ ಗೆ ರೂ. 320.49, ಆಗಸ್ಟ್ ನಲ್ಲಿ ರೂ. 291.48, ಜುಲೈನಲ್ಲಿ ರೂ. 257.74 ಇತ್ತು. ಸಬ್ಸಿಡಿ ಪಡೆಯುವ ಎಲ್ಪಿಜಿ ಗ್ರಾಹಕರು ಬೆಲೆ ಹೆಚ್ಚಳದಿಂದ ಕೊಂಚ ನೆಮ್ಮದಿ ಪಡೆದಿದ್ದಾರೆ ಎನ್ನಬಹುದು.

ಎಲ್ಪಿಜಿ ಏರಿಕೆಗೆ ಕಾರಣ

ಎಲ್ಪಿಜಿ ಏರಿಕೆಗೆ ಕಾರಣ

- ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಏರಿಕೆಯ ಪರಿಣಾಮದಿಂದ ಎಲ್ಪಿಜಿ ದರ ಏರಿಕೆಯಾಗಿದೆ ಇಂಧನ ಸಂಸ್ಥೆ ಇಂಡಿಯನ್ ಆಯಿಲ್ ತಿಳಿಸಿದೆ.
- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಕೂಡ ಸಿಲಿಂಡರ್ ಬೆಲೆ ಏರಿಕೆ ಕಾರಣವಾಗಿದೆ.

ವರ್ಷಕ್ಕೆ 12 ಸಿಲಿಂಡರ್

ವರ್ಷಕ್ಕೆ 12 ಸಿಲಿಂಡರ್

ದೇಶದಲ್ಲಿನ ಕುಟುಂಬಗಳು ವರ್ಷಕ್ಕೆ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದೆ. ಈ ಮಿತಿಯನ್ನು ಮೀರಿದ ನಂತರ ಖರೀದಿಸುವ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತವಾಗಿರುತ್ತವೆ.

ಉಜ್ವಲ ಯೋಜನೆ

ಉಜ್ವಲ ಯೋಜನೆ

ಕೇಂದ್ರದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ 10 ಕೋಟಿ ಮನೆಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸಿದೆ. ಈ ಯೋಜನೆ ಸಾಕಾರಕ್ಕಾಗಿ ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಕೈಜೋಡಿಸಿವೆ.

English summary

LPG Cylinder Price Hiked by Rs 59

The price of non-subsidised LPG in Delhi will increase by Rs. 59.00 per cylinder in October 2018.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X