For Quick Alerts
ALLOW NOTIFICATIONS  
For Daily Alerts

ನೋಟು ರದ್ದತಿ ನಂತರ ಜನರು ಹೆಚ್ಚು ನಗದು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದಾರೆ, ಕಾರಣವೇನು?

ಪ್ರಧಾನಿ ನರೇಂದ್ರ ಮೋದಿಯವರು 2016 ರ ನವೆಂಬರ್ ನಲ್ಲಿ ರೂ. 500, 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರದ ಪ್ರಮುಖ ಬೆಳವಣಿಗೆಯನ್ನು ಸಿಎಂಎಸ್ ಇನ್ಫೋ ಸಿಸ್ಟಮ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀವ್ ಕೌಲ್ ಬಿಚ್ಚಿಟ್ಟಿದ್ದಾರೆ.

|

ಪ್ರಧಾನಿ ನರೇಂದ್ರ ಮೋದಿಯವರು 2016 ರ ನವೆಂಬರ್ ನಲ್ಲಿ ರೂ. 500, 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರದ ಪ್ರಮುಖ ಬೆಳವಣಿಗೆಯನ್ನು ಸಿಎಂಎಸ್ ಇನ್ಫೋ ಸಿಸ್ಟಮ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀವ್ ಕೌಲ್ ಬಿಚ್ಚಿಟ್ಟಿದ್ದಾರೆ.

 
ನೋಟು ರದ್ದತಿ ನಂತರ ಹೆಚ್ಚು ನಗದು ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದಾರೆ

ನೋಟು ನಿಷೇಧದ ನಂತರ ಎಟಿಎಂಗಳಲ್ಲಿ ಸಾಕಾಷ್ಟು ಪ್ರಮಾಣದಲ್ಲಿ ನಗದು ಸಿಗದ ಕಾರಣ, ಸಾರ್ವಜನಿಕರು ಮನೆಯಲ್ಲಿ ಹಣ ಇಟ್ಟುಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾಜೀವ್ ಕೌಲ್ ಹೇಳಿದ್ದಾರೆ.
ನೋಟು ನಿಷೇಧದ ನಂತರ ಎಟಿಎಂಗಳಲ್ಲಿ ನಗದು ಲಭ್ಯತೆ ಕಡಿಮೆಯಾದ್ದರಿಂದ ಹಣ ಸಿಗುವ ನಂಬಿಕೆ ಕಳೆದುಕೊಂಡ ಜನ ಎಟಿಎಂಗಳಲ್ಲಿ ಹೆಚ್ಚೆಚ್ಚು ಹಣ ಡ್ರಾ ಮಾಡಿ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ.

 

ಶೇ. 22ರಷ್ಟು ಏರಿಕೆ
ಕಳೆದ ಸಾಲಿಗೆ ಹೋಲಿಸಿದರೆ ಎಟಿಎಂಗಳಿಂದ ನಗದು ವಿತ್ ಡ್ರಾ ಪ್ರಮಾಣ ಶೇ. 22 ರಷ್ಟು ಏರಿಕೆಯಾಗಿದ್ದು, ನೋಟು ರದ್ದತಿಗೂ ಮುನ್ನ ಜನ ತಮ್ಮ ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳುತ್ತಿದ್ದರೋ ಈಗ ಅದಕ್ಕಿಂತ ಹೆಚ್ಚಿನ ನಗದನ್ನು ಇಟ್ಟುಕೊಳ್ಳುತ್ತಿದ್ದಾರೆಂದು ರಾಜೀವ್ ಕೌಲ್ ತಿಳಿಸಿದ್ದಾರೆ.

English summary

Indians keeping more cash reserves at home now than they did before demonetisation

India’s cash economy has mostly bounced back but the ATM network is not strong enough yet. Rajiv Kaul, executive vice-chairman and CEO of CMS Info Systems.
Story first published: Wednesday, October 31, 2018, 15:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X