For Quick Alerts
ALLOW NOTIFICATIONS  
For Daily Alerts

ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ನಂಬರ್ 3

2017 ರ ಸೆಪ್ಟಂಬರ್ ನಿಂದ ಕಳೆದ ಒಂದು ವರ್ಷದಲ್ಲಿ ಗರಿಷ್ಠ ಉದ್ಯೋಗಗಳನ್ನು ಸೃಷ್ಟಿಸಿದ ಅಗ್ರ ಮೂರು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

|

2017 ರ ಸೆಪ್ಟಂಬರ್ ನಿಂದ ಕಳೆದ ಒಂದು ವರ್ಷದಲ್ಲಿ ಗರಿಷ್ಠ ಉದ್ಯೋಗಗಳನ್ನು ಸೃಷ್ಟಿಸಿದ ಅಗ್ರ ಮೂರು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

 

ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಎಂಪ್ಲಾಯಮೆಂಟ್ ಔಟ್ಲುಕ್ ವರದಿ ಬಿಡುಗಡೆ ಮಾಡಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ದತ್ತಾಂಶ ಆಧರಿಸಿ ಈ ಮಾಹಿತಿ ಸಿದ್ದಪಡಿಸಲಾಗಿದೆ. ಇದರನ್ವಯ ಈ ಅವಧಿಯಲ್ಲಿ ಸುಮಾರು ೧.೫೭ ಕೋಟಿ ಹೊಸ ಉದ್ಯೋಗಿಗಳು ಇಪಿಎಫ್ ಸೇರ್ಪಡೆಯಾಗಿದ್ದಾರೆ.
ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳ ನಡುವೆಯೇ ಈ ಅಧಿಕೃತ ಮಾಹಿತಿ ಬಿಡುಗಡೆಯಾಗಿದೆ.

ಕರ್ನಾಟಕದ ಸ್ಥಾನ

ಕರ್ನಾಟಕದ ಸ್ಥಾನ

ಎಂಪ್ಲಾಯಮೆಂಟ್ ಔಟ್ಲುಕ್ ವರದಿ ಪ್ರಕಾರ ಇಪಿಎಫ್ ಗೆ ಸೇರ್ಪೆಯಾದ ರಾಜ್ಯದಲ್ಲಿ ಮಹಾರಾಷ್ಟ್ರ ಮೇಲುಗೈ ಸಾಧಿಸಿದೆ. ಅಂದರೆ ಶೇ. ೨೫ ರಷ್ಟು ಮಂದಿ ಹೊಸದಾಗಿ ಸೇರಿದ್ದಾರೆ. ಹೊಸ ಉದ್ಯೋಗ ಸೇರ್ಪಡೆಯಲ್ಲಿ ಕರ್ನಾಟಕ ಹಾಗು ತಮಿಳುನಾಡು ಶೇ. ೪೫ ರಷ್ಟು ಪಾಲು ಹೊಂದಿದೆ.

ಬಿಟ್ಟು ಹೋದ , ಮರಳಿ ಬಂದ ಉದ್ಯೋಗಿಗಳು

ಬಿಟ್ಟು ಹೋದ , ಮರಳಿ ಬಂದ ಉದ್ಯೋಗಿಗಳು

ಅಂಕಿಅಂಶ ಸಂಗ್ರಹ ಆರಂಭಿಸಿದ ಕಳೆದ ೧೩ ತಿಂಗಳ ಅವಧಿಯಲ್ಲಿ ೧.೦೨ ಕೋಟಿ ಉದ್ಯೋಗಿಗಳು ಇಪಿಎಫ್ ಮತ್ತು ಇಎಸ್ಐಸಿ ಯಿಂದ ಬಿಟ್ಟು ಹೋಗಿದ್ದಾರೆ. ಬಿಟ್ಟು ಹೋದವರು ಹಾಗು ಮರಳಿ ಸೇರಿದವರನ್ನು ಗುರುತಿಸಲಾಗಿದ್ದು, ಹೀಗೆ ಬಿಟ್ಟು ಹೋದವರಲ್ಲಿ ಶೇ. ೮೦ರಷ್ಟು ಮಂದಿ ಮರಳಿ ಸೇರ್ಪಡೆಯಗಿದ್ದಾರೆ.

ಉದ್ಯೋಗ ಸೃಷ್ಟಿಯಾದ ಕ್ಷೇತ್ರಗಳು
 

ಉದ್ಯೋಗ ಸೃಷ್ಟಿಯಾದ ಕ್ಷೇತ್ರಗಳು

ನಿರ್ಮಾಣ ಕಾಮಗಾರಿ, ಇಂಜಿನೀಯರಿಂಗ್, ಪರಿಣತ ಸೇವೆ ಹಾಗು ಗುತ್ತಿಗೆ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಹೊಸದಾಗಿ ಸೇರ್ಪಡೆಯಾದವರಲ್ಲಿ ಶೇ. ೮೨ ರಷ್ಟು ಮಂದಿ ೩೫ ವರ್ಷದೊಳಗಿನವರಾಗಿದ್ದಾರೆ.

Read more about: jobs employment money
English summary

Karnataka among top three job creators

Karnataka is among the top three Indian states that created maximum jobs in the formal sector in the past one year since September 2017, the latest official data showed.
Story first published: Monday, December 3, 2018, 12:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X