For Quick Alerts
ALLOW NOTIFICATIONS  
For Daily Alerts

ನೋಟು ನಿಷೇಧ ದೊಡ್ಡ ವೈಫಲ್ಯ: ಉದಯ್ ಕೋಟಕ್

ರೂ. 500, 1000 ಮುಖಬೆಲೆಯ ನೋಟುಗಳ ನಿಷೇಧದ ನಂತರ ರೂ. 2,000 ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡದೆ ಇದ್ದಿದ್ದರೆ ನಿಜಕ್ಕೂ ಉತ್ತಮ ನಡೆಯಾಗಿರುತ್ತಿತ್ತು ಎಂದು ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಉಪಾಧ್ಯಕ್ಷ ಉದಯ್‌ ಕೋಟಕ್‌ ಅಭಿಪ್ರಾಯಿಸಿದ್ದಾರೆ

|

ರೂ. 500, 1000 ಮುಖಬೆಲೆಯ ನೋಟುಗಳ ನಿಷೇಧದ ನಂತರ ರೂ. 2,000 ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡದೆ ಇದ್ದಿದ್ದರೆ ನಿಜಕ್ಕೂ ಉತ್ತಮ ನಡೆಯಾಗಿರುತ್ತಿತ್ತು ಎಂದು ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಉಪಾಧ್ಯಕ್ಷ ಉದಯ್‌ ಕೋಟಕ್‌ ಅಭಿಪ್ರಾಯಿಸಿದ್ದಾರೆ.

 
ನೋಟು ನಿಷೇಧ ದೊಡ್ಡ ವೈಫಲ್ಯ: ಉದಯ್ ಕೋಟಕ್

ದೊಡ್ಡ ಮುಖಬೆಲೆಯ ನೋಟುಗಳಿಂದಾಗಿ ಸಣ್ಣ ವ್ಯಾಪಾರಿಗಳೂ ಇಂದಿಗೂ ಕಷ್ಟ ಪಡುತ್ತಿದ್ದು, ನೋಟು ನಿಷೇಧದ ಯಶಸ್ಸಿನ ಬಗ್ಗೆ ಚರ್ಚೆ ವ್ಯರ್ಥ ಎಂದಿದ್ದಾರೆ. ನೋಟು ರದ್ದತಿಯಾಗಿ ಎರಡು ವರ್ಷದ ನಂತರ ಅಭಿಪ್ರಾಯ ವ್ಯಕ್ತವಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಒಂದು ವೇಳೆ ಚೆನ್ನಾಗಿ ಯೋಜನೆ ರೂಪಿಸಿ ನೋಟು ನಿಷೇಧ ಮಾಡಿದ್ದರೆ ಅತ್ಯಂತ ಪರಿಣಾಮಕಾರಿಯಾಗಿರುತ್ತಿತ್ತು ಎಂದು ಉದಯ್‌ ಕೋಟಕ್ ಹೇಳಿದ್ದಾರೆ.
ರೂ. 500 ಮತ್ತು ರೂ. 1,000 ಮುಖ ಬೆಲೆಯ ನೋಟುಗಳನ್ನು ಅಪಮೌಲ್ಯೀಕರಣಗೊಳಿಸುತ್ತೀರಿ ಎಂದಾದರೆ ರೂ. 2,000 ಮುಖ ಬೆಲೆಯ ನೋಟನ್ನು ಏಕೆ ಮದ್ರಿಸಿದ್ದಿರಿ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2016 ರ ನವೆಂಬರ್‌ 8ರಂದು ರೂ. 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಅಚ್ಚರಿ ಮೂಡಿಸಿದ್ದರು.

 

ಕಪ್ಪು ಹಣ ಮತ್ತು ನಕಲಿ ನೋಟುಗಳಿಗೆ ಬ್ರೇಕ್‌ ಹಾಕುವ ಉದ್ದೇಶದಿಂದ ಅಮಾನ್ಯೀಕರಣ ಕ್ರಮ ಕೈಗೊಂಡಿದ್ದಾಗಿ ಕೇಂದ್ರ ಸರ್ಕಾರ ಸಮರ್ಥಿಸಿತ್ತು.

English summary

Two years later, Uday Kotak says demonetisation was poorly executed

The outcome of the controversial demonetisation would have been "significantly better" if "simple things" like not cancelling the higher denomination of Rs 2,000 notes, banker Uday Kotak has said.
Story first published: Monday, December 10, 2018, 16:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X