For Quick Alerts
ALLOW NOTIFICATIONS  
For Daily Alerts

ಡೆಬಿಟ್, ಕ್ರೆಡಿಟ್ ಕಾರ್ಡುಗಳು ಡಿಸೆಂಬರ್ 31ರ ನಂತರ ಬ್ಲಾಕ್ ಆಗಲಿವೆ, ಗ್ರಾಹಕರು ಏನು ಮಾಡಬೇಕು?

ಡಿಸೆಂಬರ್ 31 ರ ನಂತರ ಹಳೆಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಕಾರ್ಯ ನಿರ್ವಹಿಸುವುದಿಲ್ಲ.

|

ಹಳೆಯ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರು ಈ ಸುದ್ದಿಯನ್ನು ತಪ್ಪದೇ ಓದಿ. ಡಿಸೆಂಬರ್ 31 ರ ನಂತರ ಹಳೆಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಆರ್ಬಿಐ ಈ ಹಿಂದೆಯೇ ಹೊರಡಿಸಿದ ಅಧಿಸೂಚನೆ ಪ್ರಕಾರ ಮ್ಯಾಗ್ನೆಟಿಕ್ ಸ್ಟ್ರಿಪ್ ಕಾರ್ಡ್ ಗಳ ಜಾಗಕ್ಕೆ ಇವಿಎಂ ಚಿಪ್‌ ಹೊಂದಿರುವ ಕಾರ್ಡ್ ಗಳು ಚಾಲ್ತಿಗೆ ಬರಲಿವೆ.

 

ನಿಮ್ಮ ಹಳೆಯ ಕಾರ್ಡ್ ಅನ್ನು ಬದಲಾಯಿಸಲು ಇನ್ನೂ ಕಾಲಾವಕಾಶವಿದ್ದು, ಹೊಸ ಇವಿಎಂ ಕಾರ್ಡ್‌ ಹೆಚ್ಚು ಭದ್ರತಾ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಇದರಿಂದಾಗಿ ವಂಚನೆಗೆ ತುತ್ತಾಗುವ ಸಂಭವ ಕಡಿಮೆ ಎಂದು ಹೇಳಲಾಗುತ್ತದೆ.

ಆರ್‌ಬಿಐ ಆದೇಶ

ಆರ್‌ಬಿಐ ಆದೇಶ

ಮೂರು ವರ್ಷಗಳ ಹಿಂದೆ ಅಂದರೆ 2015 ರ ಆಗಸ್ಟ್ 27ರಂದು ಆರ್ಬಿಐ ಆದೇಶ ಹೊರಡಿಸಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಬ್ಯಾಂಕುಗಳಿಗೆ 3 ವರ್ಷಗಳಿಗಿಂತಲೂ ಹೆಚ್ಚಿನ ಕಾಲಾವಕಾಶ ನೀಡಿತ್ತು.
2015 ರ ಸೆಪ್ಟಂಬರ್ 1 ರಿಂದ ಅನ್ವಯವಾಗುವಂತೆ ವಿತರಿಸಲಾಗುವ ಎಲ್ಲಾ ಕ್ರೆಡಿಟ್, ಡೆಬಿಟ್ ಹಾಗೂ ಅಂತಾರಾಷ್ಟ್ರೀಯ ಕಾರ್ಡ್‌ಗಳು ಇವಿಎಂ ಮತ್ತು ಪಿನ್ ಆಧಾರಿತ ಕಾರ್ಡ್‌ ಗಳಾಗಿರಬೇಕು ಎಂದು ಆರ್‌ಬಿಐ ಸೂಚಿಸಿತ್ತು.

ಎಸ್ಎಂಎಸ್ ರವಾನೆ

ಎಸ್ಎಂಎಸ್ ರವಾನೆ

ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಮ್ಮ ಹಳೆಯ ಕಾರ್ಡ್‌ಗಳನ್ನು ಬದಲಾಯಿಸಿಕೊಳ್ಳುವಂತೆ ಎಸ್ಎಂಎಸ್ ಕಳುಹಿಸುತ್ತಿವೆ. ಇನ್ನೂ ಹೊಸ ಕಾರ್ಡ್ ಪಡೆದುಕೊಳ್ಳದ ಗ್ರಾಹಕರು ಡಿಸೆಂಬರ್ 31ರೊಳಗೆ ಬದಲಾಯಿಸಿಕೊಳ್ಳಬೇಕು.

ಇಎಂವಿ ಚಿಪ್ ಕಾರ್ಡ್ ಗುರುತಿಸುವುದು ಹೇಗೆ?
 

ಇಎಂವಿ ಚಿಪ್ ಕಾರ್ಡ್ ಗುರುತಿಸುವುದು ಹೇಗೆ?

ಡೆಬಿಟ್/ಕ್ರೆಡಿಟ್ ಕಾರ್ಡ್ ಮುಖಭಾಗದ ಎಡಭಾಗದ ಮಧ್ಯಭಾಗದಲ್ಲಿ(center-left position) ಚಿಪ್ ಇದ್ದರೆ ಅದನ್ನು ಇಎಂವಿ ಚಿಪ್ ಹೊಂದಿರುವ ಡೆಬಿಟ್ ಕಾರ್ಡ್ ಎಂದು ಗುರುತಿಸಬಹುದಾಗಿದೆ ಎಂದು ಎಸ್ಬಿಐ ಹೇಳಿದೆ. ವಾಸ್ತವವಾಗಿ, ಇಎಂವಿ ಚಿಪ್ ತಂತ್ರಜ್ಞಾನವು ಡೆಬಿಟ್ ಕಾರ್ಡ್ ಪೇಮೆಂಟ್ ನ ಇತ್ತೀಚಿನ ಜಾಗತಿಕ ಮಾನದಂಡವಾಗಿದೆ. ಈ ಇಎಂವಿ ತಂತ್ರಜ್ಞಾನವು ಕಾರ್ಡ್ ಹೊಂದಿರುವವರ ಡೇಟಾವನ್ನು ಸಂಗ್ರಹಿಸಿ ಮತ್ತು ರಕ್ಷಿಸುವ ಎಂಬೆಡೆಡ್ ಮೈಕ್ರೊಪ್ರೊಸೆಸರ್ ಚಿಪ್ ಹೊಂದಿದೆ.

Read more about: banking debit card money
English summary

Debit, credit card holders beware! Your cards may get blocked if you fail to do this by December 31

you need to hurry up and get your cards replaced with EMV Chip Cards as soon as possible. For, if you fail to do so latest by December 31, 2018, then your card /cards may get blocked by your bank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X