For Quick Alerts
ALLOW NOTIFICATIONS  
For Daily Alerts

ರೈತರಿಗೆ ನೇರ ಲಾಭ ವರ್ಗಾವಣೆ, ಪ್ರತಿ ಹೆಕ್ಟೇರಿಗೆ 15,000 ಸಿಗಲಿದೆ!

ನೀತಿ ಆಯೋಗವು ರೈತರಿಗಾಗಿ ಹೊಸ ಯೋಜನೆ ರೂಪಿಸಲು ಮುಂದಾಗಿದೆ. ರೈತರಿಗೆ ಸಬ್ಸಿಡಿ ನೀಡುವ ಬದಲು ನೇರ ಲಾಭದ ಪ್ರಯೋಜನ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.

|

ನೀತಿ ಆಯೋಗವು ರೈತರಿಗಾಗಿ ಹೊಸ ಯೋಜನೆ ರೂಪಿಸಲು ಮುಂದಾಗಿದೆ. ರೈತರಿಗೆ ಸಬ್ಸಿಡಿ ನೀಡುವ ಬದಲು ನೇರ ಲಾಭದ ಪ್ರಯೋಜನ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಸಬ್ಸಿಡಿ ಬದಲಾಗಿ ಪ್ರತಿ ಹೆಕ್ಟೇರಿಗೆ ರೂ. 15,000 ನೀಡಬೇಕು ಎಂದು ನೀತಿ ಆಯೋಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..

 

ಹೆಕ್ಟೇರಿಗೆ 15,000

ಹೆಕ್ಟೇರಿಗೆ 15,000

ನೇರ ಲಾಭದ ಪ್ರಯೋಜನವಾಗಿ ರೂ. 15,000 ನೀಡುವುದರಿಂದ ಕೃಷಿ ಕ್ಷೇತ್ರ ಸುಧಾರಣೆಯಾಗಲಿದೆ. ಸಬ್ಸಿಡಿ ದರದಲ್ಲಿ ರಸಗೊಬ್ಬರ, ವಿದ್ಯುತ್ ಶುಲ್ಕ ರಿಯಾಯಿತಿ, ಬೆಳೆ ವಿಮೆ, ಸಾಲದ ಬಡ್ಡಿ ಪಾವತಿ ಮಾಡುವ ಬದಲು ನೇರವಾಗಿ ಹಣ ನೀಡಬೇಕೆಂದು ನೀತಿ ಆಯೋಗ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ನೇರ ನಗದು ವರ್ಗಾವಣೆ

ನೇರ ನಗದು ವರ್ಗಾವಣೆ

ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ನೀತಿ ಆಯೋಗ ಪ್ರಸ್ತಾವನೆಯಲ್ಲಿ ತಿಳಿಸಿದೆ. ನೀತಿ ಆಯೋಗದ ಈ ಸಲಹೆ ಕುರಿತು ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಘೋಷಣೆ ಸಾಧ್ಯತೆ!
 

ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಘೋಷಣೆ ಸಾಧ್ಯತೆ!

ಕೆಲವು ರಾಜ್ಯಗಳಲ್ಲಿ ಸಾಲ, ಬಡ್ಡಿಯ ವಿನಾಯಿತಿ ಘೋಷಿಸಲಾಗಿದ್ದು, ಕೆಲ ರಾಜ್ಯಗಳಲ್ಲಿ ರೈತರಿಗೆ ಸಾಲ ವಿನಾಯಿತಿ ಬದಲು ನೇರವಾಗಿ ಸಹಾಯ ಧನ ನೀಡಲಾಗುತ್ತಿದೆ. ಹೀಗಾಗಿ ನೇರ ಲಾಭದ ಪ್ರಯೋಜನವಾಗಿ ಹೆಕ್ಟೇರ್ ಗೆ ರೂ. 15,000 ನೀಡುವುದು ಅನುಕೂಲಕರವಾಗಲಿದೆ ಎಂದು ನೀತಿ ಆಯೋಗ ಪ್ರಸ್ತಾವನೆಯಲ್ಲಿ ಹೇಳಿದೆ. ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Read more about: farmer loan waiver loan money rbi
English summary

NITI Aayog proposes direct benefit transfer to farmers: Report

The NITI Aayog has proposed an upfront subsidy through direct benefit transfer which could let farmers get annual income support of Rs 15,000 per hectare.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X