For Quick Alerts
ALLOW NOTIFICATIONS  
For Daily Alerts

ಏರ್ ಇಂಡಿಯಾಕ್ಕೆ ಕೇಂದ್ರದಿಂದ ಈ ವಾರ 1,500 ಕೋಟಿ ಬಿಡುಗಡೆ

|

ನವದೆಹಲಿ, ಜನವರಿ 28: ಆರ್ಥಿಕ ಸಂಕಷ್ಟದಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಜೀವ ತುಂಬಲು ಕೇಂದ್ರ ಸರ್ಕಾರ 1,500 ಕೋಟಿ ಈಕ್ವಿಟಿ ಒದಗಿಸಲಿದೆ.

ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾಕ್ಕೆ ಚೈತನ್ಯ ನೀಡಲು 2,345 ಕೋಟಿ ರೂ. ಈಕ್ವಿಟಿ ಹೂಡಿಕೆ ಮಾಡಲು ಸಂಸತ್ ಅನುಮೋದನೆ ನೀಡಿತ್ತು. ಅದರಲ್ಲಿ 1,500 ಕೋಟಿ ರೂ. ಈ ವಾರ ಬಿಡುಗಡೆಯಾಗಲಿದೆ. 2018-19ನೇ ಸಾಲಿನ ಅನುದಾನಗಳ ಪೂರಕ ಬೇಡಿಕೆಗಳ ಎರಡನೆಯ ಕಂತಿನಲ್ಲಿ ಈ ಹಣವನ್ನು ಹೂಡಿಕೆ ಮಾಡಲಾಗುತ್ತದೆ.

ಫೆ.1 ರಿಂದ ಹೊಸ ನಿಯಮ ಜಾರಿ: ಕೇಬಲ್ ಟಿವಿ, ಡಿಟಿಹೆಚ್ ಚಾನೆಲ್ ಹೊಸ ದರದ ಮಾಹಿತಿ ಇಲ್ಲಿದೆ.. ಫೆ.1 ರಿಂದ ಹೊಸ ನಿಯಮ ಜಾರಿ: ಕೇಬಲ್ ಟಿವಿ, ಡಿಟಿಹೆಚ್ ಚಾನೆಲ್ ಹೊಸ ದರದ ಮಾಹಿತಿ ಇಲ್ಲಿದೆ..

ಅಲ್ಲದೆ, ವಿಮಾನಯಾನ ಸಂಸ್ಥೆಯ 29,000 ಕೋಟಿ ರೂ. ಸಾಲದ ಹೊರೆಯನ್ನು ಅಸೆಟ್ ಹೋಲ್ಡಿಂಗ್ ಕಂಪೆನಿಗೆ ವರ್ಗಾಯಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಏರ್ ಇಂಡಿಯಾ ಒಟ್ಟು 55 ಸಾವಿರ ಕೋಟಿ ರೂ. ಸಾಲ ಹೊಂದಿದೆ.

ಏರ್ ಇಂಡಿಯಾಕ್ಕೆ ಕೇಂದ್ರದಿಂದ ಈ ವಾರ 1,500 ಕೋಟಿ ಬಿಡುಗಡೆ

ಗಾಂಧೀಜಿ ಲೋಗೊ:
ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನೋತ್ಸವದ ಪ್ರಯುಕ್ತ ಏರ್ ಇಂಡಿಯಾ ಈ ವರ್ಷ ಗಾಂಧೀಜಿ ಅವರ ಚಿತ್ರವುಳ್ಳು ಲೋಗೋದೊಂದಿಗೆ ಹಾರಾಟ ನಡೆಸಲು ಆರಂಭಿಸಿದೆ.

ಮಧ್ಯಂತರ ಬಜೆಟ್ ಎಂದರೇನು? ಮಧ್ಯಂತರ ಬಜೆಟ್ ಎಂದರೇನು?

ಏರ್ ಇಂಡಿಯಾ, ಅಲಯನ್ಸ್ ಏರ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎಲ್ಲ 163 ವಿಮಾನಗಳಲ್ಲಿ ಕೂಡ ಮೂರು ತಿಂಗಳೊಳಗೆ ಗಾಂಧೀಜಿ ಲೋಗೊ ಅಳವಡಿಸಲಾಗುವುದು.

ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋ ವೇಳೆ ಸಂಸ್ಥೆಯ ಒಂದು ವಿಮಾನದಲ್ಲಿ ಲೋಗೊ ಅನ್ನು ಬಿಡುಗಡೆ ಮಾಡಲಾಗುತ್ತದೆ.

English summary

Centre to infuse 1,500 crore rupees into Air India

Centra Government will infuse equity of Rs 1,500 crore into Air India in this week.
Story first published: Monday, January 28, 2019, 18:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X