For Quick Alerts
ALLOW NOTIFICATIONS  
For Daily Alerts

ಉಕ್ಕು ಉತ್ಪಾದನೆ : ಜಾಗತಿಕವಾಗಿ ನಂ.2 ಸ್ಥಾನಕ್ಕೇರಿದ ಭಾರತ

|

ವಿಶ್ವದ ಅತಿ ಹೆಚ್ಚು ಉಕ್ಕು ಉತ್ಪಾದನಾ ರಾಷ್ಟ್ರಗಳ ಪಟ್ಟಿಯನ್ನು ವಿಶ್ವ ಉಕ್ಕು ಅಸೋಸಿಯೇಷನ್ ಪ್ರಕಟಿಸಿದೆ. ಜಪಾನ್ ಹಿಂದಿಕ್ಕಿದ ಭಾರತ ಈಗ ಜಾಗತಿಕವಾಗಿ ನಂ.2 ಸ್ಥಾನಕ್ಕೇರಿದೆ. 2018ರಲ್ಲಿ ಜಾಗತಿಕವಾಗಿ ಉಕ್ಕು ಉತ್ಪಾದನೆ ಶೇ 4.6ರಷ್ಟು ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಶೇ 51ರಷ್ಟು ಪಾಲು ಹೊಂದಿರುವ ಚೀನಾ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಚೀನಾ ಕಚ್ಚಾ ಸ್ಟೀಲ್ ಉತ್ಪನ್ನಗಳ ಉತ್ಪಾದನೆ ಪ್ರಮಾಣವು 2018ರಲ್ಲಿ ಶೇ 6.6ರಷ್ಟು ಏರಿಕೆ ಕಂಡು 928.3 ಮಿಲಿಯನ್ ಟನ್ ಗಳಿಗೆ ಏರಿಕೆಯಾಗಿದೆ. 2017ರಲ್ಲಿ 870.9 ಮಿಲಿಯನ್ ಟನ್ ಗಳಿಷ್ಟು. 2017ರಲ್ಲಿ ಉಕ್ಕು ಉತ್ಪಾದನಾ ಮಾರುಕಟ್ಟೆಯಲ್ಲಿ ಶೇ 50.3% ಪಾಲು ಹೊಂದಿದ್ದ ಚೀನಾ, 2018ರಲ್ಲಿ 51.3% ಪಾಲು ಹೊಂದಿದೆ.

ಭಾರತದ ಉಕ್ಕು ಉತ್ಪಾದನೆ 2018ರಲ್ಲಿ 106.5 ಮಿಲಿಯನ್ ಟನ್ ಗಳಿಷ್ಟಿದ್ದು, ಶೇ 4.9ರಷ್ಟು ಏರಿಕೆಯಾಗಿದೆ. 2017ರಲ್ಲಿ 101.5 ಮಿಲಿಯನ್ ಟನ್ ಗಳಿಷ್ಟಿತ್ತು.

ಉಕ್ಕು ಉತ್ಪಾದನೆ : ಜಾಗತಿಕವಾಗಿ ನಂ.2 ಸ್ಥಾನಕ್ಕೇರಿದ ಭಾರತ

2018ರಲ್ಲಿ ಜಪಾನ್ 104.3 ಮಿಲಿಯನ್ ಟನ್ ಗಳಷ್ಟು ಉಕ್ಕು ಉತ್ಪಾದನೆ ಕಂಡಿದೆ, 2017ಕ್ಕೆ ಹೋಲಿಸಿದರೆ ಶೇ 0.3ರಷ್ಟು ಉತ್ಪಾದನೆಯಲಿ ಇಳಿಕೆಯಾಗಿದೆ.

2018ರಲ್ಲಿ ಉಕ್ಕು ಉತ್ಪಾದನಾ(ಮಿಲಿಯನ್ ಟನ್ ಗಳಲ್ಲಿ ) ಟಾಪ್ 10 ಪಟ್ಟಿ
1. ಚೀನಾ : 928.3 ಮಿಲಿಯನ್ ಟನ್
2. ಭಾರತ : 106.5
3. ಜಪಾನ್ : 104.3
4. ಯುನೈಟೆಡ್ ಸ್ಟೇಟ್ಸ್ : 86.7
5. ದಕ್ಷಿಣ ಕೊರಿಯಾ : 72.5
6. ರಷ್ಯಾ: 71.7
7. ಜರ್ಮನಿ : 42.4
8. ಟರ್ಕಿ: 37.3
9. ಬ್ರೆಜಿಲ್ : 34.7
10. ಇರಾನ್: 25

English summary

India replaces Japan as second top steel producer

India has replaced Japan as world’s second largest steel producing country, while China is the largest producer of crude steel accounting for more than 51 per cent of production, according to World Steel Association (worldsteel).
Story first published: Tuesday, January 29, 2019, 16:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X