For Quick Alerts
ALLOW NOTIFICATIONS  
For Daily Alerts

ಬಜೆಟ್ 2019: ಐದು ವರ್ಷಗಳಲ್ಲಿ ಒಂದು ಲಕ್ಷ ಡಿಜಿಟಲ್ ಹಳ್ಳಿಗಳ ನಿರ್ಮಾಣ

By ಅನಿಲ್ ಆಚಾರ್
|

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಡಿಜಿಟಲ್ ಇಂಡಿಯಾಗೆ ಬಜೆಟ್ ನಲ್ಲಿ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಹಣಕಾಸು ಇಲಾಖೆ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಸಚಿವ ಪಿಯೂಷ್ ಗೋಯಲ್ ಡಿಜಿಟಲ್ ಹಳ್ಳಿಗಳ ಆಲೋಚನೆಯನ್ನು ಸಹ ತೆರೆದಿಟ್ಟರು. ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಡಿಜಿಟಲ್ ಹಳ್ಳಿಗಳ ನಿರ್ಮಾಣಕ್ಕೆ ಗುರಿ ಇರಿಸಿಕೊಂಡಿರುವುದಾಗಿ ಹೇಳಿದರು.

ಕಾಮನ್ ಸರ್ವೀಸ್ ಸೆಂಟರ್ ಗೆ ಡಿಜಿಟಲ್ ಹಳ್ಳಿಗಳನ್ನು ರೂಪಿಸುವ ಜವಾಬ್ದಾರಿ ನೀಡಲಾಗುವುದು. ಡಿಜಿಟಲ್ ಮೂಲ ಸೌಕರ್ಯಗಳನ್ನು ಸಿಎಸ್ ಸಿಗಳು ರೂಪಿಸುತ್ತವೆ. ಅವುಗಳನ್ನು ಡಿಜಿಟಲ್ ಹಳ್ಳಿಗಳಾಗಿ ಬದಲಿಸಲಾಗುವುದು ಎಂದು ಗೋಯಲ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2019: ಪಶುಸಂಗೋಪನೆ, ಮೀನುಗಾರಿಕೆಗೂ ಕೊಡುಗೆಕೇಂದ್ರ ಬಜೆಟ್ 2019: ಪಶುಸಂಗೋಪನೆ, ಮೀನುಗಾರಿಕೆಗೂ ಕೊಡುಗೆ

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಪ್ರಯತ್ನವೇ ಕಾಮನ್ ಸರ್ವೀಸಸ್ ಸೆಂಟರ್. ಭಾರತದ ಹಳ್ಳಿಗಳಿಗೆ ವಿವಿಧ ಎಲೆಕ್ಟ್ರಾನಿಕ್ ಸೇವೆಗಳನ್ನು ಒದಗಿಸುವುದಕ್ಕೆ ಇದು ಕೆಲಸ ಮಾಡುತ್ತದೆ. ಇನ್ನು ಭಾರತದಲ್ಲಿ ಮೊಬೈಲ್ ಡೇಟಾ ಸೇವೆಯಲ್ಲಿ ಮಹತ್ತರ ಬದಲಾವಣೆ ಆಗಿದೆ. ಡೇಟಾ ಹಾಗೂ ಫೋನ್ ಕರೆಯ ದರವು ಇಡೀ ಜಗತ್ತಿನಲ್ಲೇ ಅತ್ಯಂತ ಕಡಿಮೆ ಆಗಲಿದೆ ಎಂದು ಹೇಳಿದರು.

ಬಜೆಟ್ 2019: ಐದು ವರ್ಷಗಳಲ್ಲಿ ಒಂದು ಲಕ್ಷ ಡಿಜಿಟಲ್ ಹಳ್ಳಿಗಳ ನಿರ್ಮಾಣ

ಮೊಬೈಲ್ ಹಾಗೂ ಮೊಬೈಲ್ ತಯಾರಿಕಾ ಕಂಪನಿಗಳ ಸಂಖ್ಯೆ ಎರಡರಿಂದ ಇನ್ನೂರಾ ಅರವತ್ತೆಂಟಕ್ಕೆ ಏರಿಕೆ ಆಗಿದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2019: ಷೇರುದಾರರಿಗೆ ಖುಷಿ ನೀಡಿದ ರೈತ ಪರ ಘೋಷಣೆಕೇಂದ್ರ ಬಜೆಟ್ 2019: ಷೇರುದಾರರಿಗೆ ಖುಷಿ ನೀಡಿದ ರೈತ ಪರ ಘೋಷಣೆ

ಈಶಾನ್ಯ ಭಾಗಕ್ಕೆ ಕಳೆದ ವರ್ಷಕ್ಕಿಂತ 21% ಹೆಚ್ಚಿನ ಮೊತ್ತವನ್ನು ಅಂದರೆ, 58,166 ಕೋಟಿ ರುಪಾಯಿಯಷ್ಟನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ.

ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ

ಭಾರತೀಯ ಸಿನಿಮಾ ನಿರ್ಮಾತೃಗಳಿಗೆ ಏಕ ಗವಾಕ್ಷಿ ಸಿನಿಮಾ ನಿರ್ಮಾಣ ಕ್ಲಿಯರೆನ್ಸ್. ಸಿನಿಮಾಟೋಗ್ರಫಿ ಕಾಯ್ದೆಗೆ ಅನಿಟ್ ಕ್ಯಾಮ್ ಕಾರ್ಡಿಂಗ್ ಪರಿಚಯಿಸಲಾಗುತ್ತದೆ.

English summary

Budget 2019: Government to create 1 lakh digital villages in 5 years

Taking forward government's Digital India programme, finance minister Piyush Goyal broached the concept of Digital Villages. Presenting the concept in the interim Budget, the finance minister said that the government has set an aim of building one lakh digital villages in the next 5 years.
Story first published: Friday, February 1, 2019, 12:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X