ರೈಲ್ವೆ ಬಜೆಟ್ 2019ರ ಮುಖ್ಯಾಂಶಗಳು: ರೈಲ್ವೆಗೆ ಹೆಚ್ಚಿನದೇನಿಲ್ಲ

ಕೇಂದ್ರ ಸಚಿವ ಪಿಯೂಷ್ ಗೋಯಲ್ ರೈಲ್ವೆ ಬಜೆಟ್ ನಲ್ಲಿ ಘೋಷಿಸಿದ ಪ್ರಮುಖ ಅಂಶಗಳು ಹೀಗಿವೆ.

* 2019-20ನೇ ಸಾಲಿಗೆ ರೈಲ್ವೆ ಬಜೆಟ್ ಗೆ 64,587 ಕೋಟಿ ಘೋಷಣೆ

* ಸದ್ಯಕ್ಕೆ ಇರುವ ಕಾರ್ಯ ನಿರ್ವಹಣಾ ಪ್ರಮಾಣ 96.2%ರಿಂದ 95%ಗೆ ಗುರಿ ಇರಿಸಲಾಗಿದೆ.

* ಸ್ವದೇಶಿ ತಂತ್ರಜ್ಞಾನಕ್ಕೆ ವಂದೇ ಭಾರತ್ ಎಕ್ಸ್ ಪ್ರೆಸ್ ದೊಡ್ಡ ಗರಿ .

* ಬ್ರಾಡ್ ಗೇಜ್ ನೆಟ್ ವರ್ಕ್ ನಲ್ಲಿ ಇನ್ನು ಮುಂದೆ ಎಲ್ಲ ಲೆವೆಲ್ ಕ್ರಾಸಿಂಗ್ ಗಳಲ್ಲೂ ಸಿಬ್ಬಂದಿ ನೇಮಕ .

ರೈಲ್ವೆ ಬಜೆಟ್ 2019ರ ಮುಖ್ಯಾಂಶಗಳು: ರೈಲ್ವೆಗೆ ಹೆಚ್ಚಿನದೇನಿಲ್ಲ

* ಹಳಿಗಳಲ್ಲಿ ದೋಷಗಳನ್ನು ಕಂಡು ಹಿಡಿಯುವುದಕ್ಕೆ ಕೃತಿಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಬಳಕೆ. ಈಚೆಗಷ್ಟೇ ಸ್ಮಾರ್ಟ್ ಕೃತಕ ಬುದ್ಧಿಮತ್ತೆ ಇರುವ ಎಲ್ ಎಚ್ ಬಿ ಬೋಗಿ ಜಾರಿಗೆ ತರಲಾಗಿತ್ತು. ಇನ್ನು ಮುಂದೆ ಎಲ್ಲ ರೈಲುಗಳಲ್ಲೂ ಈ ತಂತ್ರಜ್ಞಾನ ಬಳಕೆ.

* ಹೊಸದಾಗಿ ಐಆರ್‌ಸಿಟಿಸಿ ವೆಬ್ ಸೈಟ್ ರಚನೆ. ಅದರಲ್ಲಿ ಹೆಚ್ಚು ಫೀಚರ್.

* ಬಿಲ್ ಕೊಡದಿದ್ದರೆ ರೈಲುಗಳಲ್ಲಿ ಯಾವುದೇ ಆಹಾರ ಖರೀದಿಸದಂತೆ ಸೂಚನೆ. ಜಿಎಸ್ ಟಿ ಒಳಗೊಂಡಂತೆ ದರವನ್ನು ಟಿನ್ ಪ್ಲೇಟ್ ಮೇಲೆ ಮುದ್ರಿಸಿರಬೇಕು. ಇದರಿಂದ ಹೆಚ್ಚಿನ ಬೆಲೆ ಆಹಾರ ಮಾರಾಟ ಮಾಡುವುದನ್ನು ತಡೆಯಬಹುದಾಗಿದೆ.

* ಉತ್ಕೃಷ್ಟ ಯೋಜನೆಯಡಿ 140 ಎಕ್ಸ್‌ಪ್ರೆಸ್‌ ರೈಲುಗಳನ್ನು ಈ ಹಣಕಾಸು ವರ್ಷದಲ್ಲಿ ಮೇಲ್ದರ್ಜೆಗೇರಿಸಲಾಗುತ್ತದೆ. ಮುಂದಿನ ಕೆಲ ವರ್ಷಗಳಲ್ಲಿ 640 ರೈಲುಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ರೈಲ್ವೆ ಪ್ರಯಾಣ ಸೌಲಭ್ಯವನ್ನು ಹೆಚ್ಚಿಸುವುದು ಇದರ ಉದ್ದೇಶ.

* ಮುಂದಿನ ಎರಡು ವರ್ಷದಲ್ಲಿ 2.30 ಲಕ್ಷ ಉದ್ಯೋಗಗಳನ್ನು ರೈಲ್ವೆ ಇಲಾಖೆಯಲ್ಲಿ ಸೃಷ್ಟಿಸುವುದು. ಸಾಮಾನ್ಯ ವರ್ಗದ 10% ಮೀಸಲಾತಿಯೂ ಇದರಲ್ಲಿ ಸೇರಿರುತ್ತದೆ.

* ವಿಮಾನ ನಿಲ್ದಾಣ ಮಾದರಿಯಲ್ಲಿ ರೈಲು ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸುವುದು. ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ಸಂಸ್ಥೆಯು ಈ ಕಾರ್ಯವನ್ನು ಮಾಡುತ್ತಿದ್ದು, ಮಧ್ಯಪ್ರದೇಶದ ಹಬೀಬ್‌ಗಂಜ್ ರೈಲ್ವೆ ನಿಲ್ದಾಣ ಮತ್ತು ಗುಜರಾತ್‌ನ ಗಾಂಧಿನಗರ ರೈಲ್ವೆ ನಿಲ್ದಾಣಗಳು ಕೆಲವೇ ದಿನಗಳಲ್ಲಿ ಸಂಪೂರ್ಣ ಚಹರೆ ಬದಲಾಯಿಸಿ ವಿಮಾನ ನಿಲ್ದಾಣದಂತೆ ಕಂಗೊಳಿಸಲಿವೆ. ನಿಧಾನವಾಗಿ ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಹೀಗೆಯೇ ಬದಲಾಯಿಸಲಾಗುವುದು.

* ಎಲ್ಲಾ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳಿಗೂ ಭದ್ರತೆ ನೀಡಲಾಗಿದ್ದು, ಭದ್ರತೆ ಇಲ್ಲದೆ ಯಾವುದೇ ಲೆವೆಲ್ ಕ್ರಾಸಿಂಗ್ ದೇಶದಲ್ಲಿ ಇಲ್ಲ ಎಂದು ಗೋಯಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+