For Quick Alerts
ALLOW NOTIFICATIONS  
For Daily Alerts

ಬಜೆಟ್: ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ನೀಡಿರುವ ಕೊಡುಗೆಗಳು

|

ಬೆಂಗಳೂರು, ಫೆಬ್ರವರಿ 8: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ ಸಮ್ಮಿಶ್ರ ಸರ್ಕಾರದ ಎರಡನೆಯ ಬಜೆಟ್ ಮಂಡಿಸಿದರು. ಸಿರಿಧಾನ್ಯ ಬೆಳೆಗೆ ಉತ್ತೇಜನ, ಸಾವಯವ ಕೃಷಿಗೆ ಪ್ರೋತ್ಸಾಹ, ರೈತಸಿರಿ ಯೋಜನೆಯಂತಹ ವಿವಿಧ ಘೋಷಣೆಗಳನ್ನು ಅವರು ಪ್ರಕಟಿಸಿದರು.

 

ಕೃಷಿ ವಲಯಕ್ಕೆ ಪ್ರತ್ಯೇಕವಾಗಿ ಅವರು ಘೋಷಿಸಿದ ವಿವಿಧ ಯೋಜನೆಗಳು, ಅನುದಾನಗಳ ನೆರವಿನ ವಿವರಗಳು ಇಲ್ಲಿವೆ.

 

Karnataka Budget 2019 LIVE : ರೈತರಿಗಾಗಿ 'ಗೃಹಲಕ್ಷ್ಮಿ' ಯೋಜನೆKarnataka Budget 2019 LIVE : ರೈತರಿಗಾಗಿ 'ಗೃಹಲಕ್ಷ್ಮಿ' ಯೋಜನೆ

* ಕೃಷಿ ಭಾಗ್ಯ ಯೋಜನೆಗೆ 250 ಕೋಟಿ ರೂ. ಅನುದಾನ.
* ಶೂನ್ಯ ಬಂಡವಾಳ ಕೃಷಿ ಯೋಜನೆಗೆ 40 ಕೋಟಿ ರೂ. ಅನುದಾನ.
* ಸಾವಯವ ಕೃಷಿ ಯೋಜನೆಗೆ 35 ಕೋಟಿ ರೂ.
* ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳ ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹ; ಅರ್ಹ ಉದ್ದಿಮೆದಾರು, ನವೋದ್ಯಮಿಗಳಿಗೆ ಶೇ. 50 ಪ್ರೋತ್ಸಾಹಧನ; 2 ಕೋಟಿ ರೂ. ಅನುದಾನ.
* ಇಸ್ರೇಲ್ ಮಾದರಿ ಕೃಷಿ ಯೋಜನೆಗೆ 145 ಕೋಟಿ ರೂ.
* ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು "ರೈತಸಿರಿ" ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ನಗದು ಪ್ರೋತ್ಸಾಹ; 10 ಕೋಟಿ ರೂ. ಅನುದಾನ.
* ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರೇರಣೆ-ಹೆಕ್ಟೇರ್‌ಗೆ 7500 ರೂ. ಪ್ರೋತ್ಸಾಹಧನ ನೀಡುವ "ಕರಾವಳಿ ಪ್ಯಾಕೇಜ್‌"ಗೆ 5 ಕೋಟಿ ರೂ. ಅನುದಾನ.

ಬಜೆಟ್: ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ನೀಡಿರುವ ಕೊಡುಗೆಗಳು

* "ಮುಖ್ಯಮಂತ್ರಿಗಳ ¸ ಸೂಕ್ಷ್ಮ ನೀರಾವರಿಯೋಜನೆಗೆ 2019-20 ನೇ ಸಾಲನಲ್ಲಿ 368 ಕೋಟಿ ರೂ. ಅನುದಾನ.

* ರಾಜ್ಯದ ಅತಿ ಹೆಚ್ಚು ಬರಪೀಡಿತ ಹಾಗೂ ಅಂತರ್ಜಲ ಮಟ್ಟ ಕುಸಿದಿರುವ 100 ತಾಲ್ಲೂಕುಗಳಲ್ಲಿ 2024ರವರೆಗೆ ಬರ ನಿರೋಧಕ ಜಲಾನಯನ ಚಟುವಟಿಕೆ ಕೈಗೊಳ್ಳಲು 100 ಕೋಟಿ ರೂ ಅನುದಾನ.

ಕರ್ನಾಟಕ ಬಜೆಟ್ 2019 : 176 ಪಬ್ಲಿಕ್ ಸ್ಕೂಲ್ ಸ್ಥಾಪನೆ ಕರ್ನಾಟಕ ಬಜೆಟ್ 2019 : 176 ಪಬ್ಲಿಕ್ ಸ್ಕೂಲ್ ಸ್ಥಾಪನೆ

* ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಯ ಉನ್ನತೀಕರಣ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮದ ಅಭಿವೃದ್ಧಿ ಕಾರ್ಯಗಳಿಗೆ ತಲಾ 5 ಕೋಟಿ ರೂ. ನಿಗದಿ.

* ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮಾ ಯೋಜನೆ ಜಾರಿಗೆ ತರುವ ಬಗ್ಗೆ ಪರಿಶೀಲನೆ.

* ಮಂಡ್ಯ ಜಿಲ್ಲೆಯ ವಿ.ಸಿ. ಫಾರಂ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಸಂಸ್ಥೆ ಸ್ಥಾಪನೆಗೆ ಕ್ರಮ. 2019-20 ರಲ್ಲಿ 10 ಕೋಟಿ ರೂ. ಅನುದಾನ.

English summary

Karnataka budget 2019 hd kumaraswamy announcements to agriculture development

Karnataka budget 2019: Cheif Minister HD Kumaraswamy announced support to millets, organic forming and new schemes for development of agriculture sector.
Story first published: Friday, February 8, 2019, 14:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X