For Quick Alerts
ALLOW NOTIFICATIONS  
For Daily Alerts

ಬಜೆಟ್ 2019 : ಲೋಕೋಪಯೋಗಿ, ಬಂದರು ಇಲಾಖೆಯ ಘೋಷಣೆಗಳು

|

ಬೆಂಗಳೂರು, ಫೆಬ್ರವರಿ 08 : ಹಣಕಾಸು ಸಚಿವರೂ ಆಗಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್‌ ಮಂಡನೆ ಮಾಡಿದರು. 7940 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು.

 

ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದರು.

 

ಮಂಡ್ಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ವಿಸಿ ನಾಲೆಗೆ ಖಾಸಗಿ ಬಸ್ ಉರುಳಿ ಬಿದ್ದಿತ್ತು. ಈ ಘಟನೆ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಸ್ತೆಗಳ ಪಕ್ಕದಲ್ಲಿ ಬರುವ ಕೆರೆಗಳು, ನಾಲೆಗಳು ಹಾಗೂ ಇತರೆ ಜಲಮೂಲಗಳ ಬಳಿ ಸುರಕ್ಷತಾ ಬ್ಯಾರಿಕೇಡ್ ಅಳವಡಿಸಲು 100 ಕೋಟಿ ರೂ. ಅನುದಾನವನ್ನು ಮೀಸಲಾಗಿಡಲಾಗಿದೆ.

ಬಜೆಟ್ 2019 : ಲೋಕೋಪಯೋಗಿ, ಬಂದರು ಇಲಾಖೆಯ ಘೋಷಣೆಗಳು

2019-20ರಲ್ಲಿ ಬೀದರ್ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಲಿದೆ. ಕಲಬುರಗಿ ವಿಮಾನ ನಿಲ್ದಾಣವೂ ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.

* ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (SHDP) ಅಡಿ ಒಟ್ಟು 10,000 ಕೋಟಿ ರೂ.ಗಳಲ್ಲಿ 7,940 ಕಿ.ಮೀ ಉದ್ದದ ರಸ್ತೆಗಳನ್ನು
ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಘೋಷಿಸಿದರು.

* 5670 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಸೇತುವೆಗಳ ಸುಧಾರಣೆ ಮತ್ತು ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಶಾಲಾ ಸಂಪರ್ಕ
ಸೇತು ಯೋಜನೆಯಡಿ 1317 ಸಂಖ್ಯೆಯ ಕಿರು ಸೇತುವೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

* ರಸ್ತೆಗಳ ಪಕ್ಕದಲ್ಲಿ ಬರುವ ಕೆರೆಗಳು, ನಾಲೆಗಳು ಹಾಗೂ ಇತರೆ ಜಲಮೂಲಗ ಬಳಿ ಸು ರಕ್ಷತಾ ಬ್ಯಾರಿಯರ್ ಅಳವಡಿಸಲು 100 ಕೋಟಿ ರೂ. ಅನುದಾನ.

* ರಾಜ್ಯದ ವಿಮಾನ ನಿಲ್ದಾಣಗಳ ಮೂಲಭೂತ ಸೌಲಭ್ಯಗಳ ಸಮಗ್ರ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು. 2019-20ನೇ ಸಾಲಿನಲ್ಲಿ ಬೀದರ್ ನಾಗರಿಕ ವಿಮಾನ ನಿಲ್ದಾಣ ಕಾರ್ಯಾಚರಣೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

* ಕಲಬುರಗಿ ವಿಮಾನನಿಲ್ದಾಣ ಕಾರ್ಯಾಚರಣೆ ಶೀಘ್ರ ಪ್ರಾರಂಭವಾಗಲಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಏರ್‌ಸ್ಟ್ರಿಪ್ ಪಿಪಿಪಿ ಮಾದರಿಯಲ್ಲಿ ಅಬಿವೃದ್ಧಿ ಹಾಗೂ ಹಾಸನ
ವಿಮಾನನಿಲ್ದಾಣದ ಅಭಿವೃದ್ಧಿಗೆ ಕ್ರಮ.

* ರಸ್ತೆ ಮೇಲುಸೇತುವೆ / ಕೆಳಸೇತುವೆಗೆ ಭೂಸ್ವಾಧೀನ ಹಾಗೂ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ 70 ಕೋಟಿ ರೂ. ಅನುದಾನ ಮೀಸಲಾಗಿಡಲಾಗಿದೆ.

English summary

Karnataka budget 2019 : What for Public Works Department

Finance and Chief Minister of Karnataka H.D.Kumaraswamy presented 2019-20 budget on February 8, 2019. What for Public Works Department in the budget?.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X