For Quick Alerts
ALLOW NOTIFICATIONS  
For Daily Alerts

ಮನೆ ಖರೀದಿಸುವವರಿಗೆ ಕೇಂದ್ರದಿಂದ ಬಂಪರ್! ಜಿಎಸ್ಟಿ ತೆರಿಗೆ ಕಡಿತ..

ಫೆಬ್ರವರಿ 24 ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯು ಈ ಮಹತ್ವದ ತೀರ್ಮಾನ ಕೈಗೊಂಡಿದೆ.

|

ಕೇಂದ್ರ ಸರ್ಕಾರ ಮನೆ ಮತ್ತು ಅಪಾರ್ಟ್‌ಮೆಂಟ್ ಖರೀದಿದಾರರಿಗೆ ಭಾರೀ ಪ್ರಮಾಣದ ಕೊಡುಗೆಯನ್ನು ಘೋಷಿಸಿದೆ.

ಫೆಬ್ರವರಿ 24 ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯು ಈ ಮಹತ್ವದ ತೀರ್ಮಾನ ಕೈಗೊಂಡಿದೆ. ನಿರ್ಮಾಣ ಹಂತದಲ್ಲಿರುವ ಗೃಹ ನಿರ್ಮಾಣ ಯೋಜನೆಗಳಿಗೆ ಶೇ. 12 ಇದ್ದ ಜಿಎಸ್ಟಿ ದರವನ್ನು ಶೇ. 5ಕ್ಕೆ ಇಳಿಸಲಾಗಿದೆ. ಎಲ್ಪಿಜಿ ಸಬ್ಸಿಡಿ ಖಾತೆಗೆ ಬರುತ್ತಿದೆಯೇ ಎಂಬುದನ್ನು ಚೆಕ್ ಮಾಡೋದು ಹೇಗೆ?

ಜಿಎಸ್ಟಿ ಶೇ.1ಕ್ಕೆ ಇಳಿಕೆ

ಜಿಎಸ್ಟಿ ಶೇ.1ಕ್ಕೆ ಇಳಿಕೆ

ಕಡಿಮೆ ಬೆಲೆಯ ಕೈಗೆಟಕುವ ಮನೆಗಳ ಮೇಲೆ ವಿಧಿಸಲಾಗುತ್ತಿದ್ದ ಶೇ. 8ರ ಜಿಎಸ್ಟಿಯನ್ನು ಶೇ.1ಕ್ಕೆ ಇಳಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರ ಮನೆಯ ಕನಸನ್ನು ಸಾಕಾರಗೊಳಿಸಲಿದೆ.

ಸಾಕಷ್ಟು ಉಳಿತಾಯ

ಸಾಕಷ್ಟು ಉಳಿತಾಯ

ಅಪಾರ್ಟ್ಮೆಂಟ್ ಮತ್ತು ಮನೆಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಅಥವಾ ರೆಡಿ ಟು ಮೂವ್ ಫ್ಲ್ಯಾಟ್ ಗಳಿಗೆ ವಿಧಿಸುವ ತೆರಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆ ಈಗಿನ ಶೇ. 12 ರಿಂದ ಶೇ. 5 ಕ್ಕೆ ಇಳಿಕೆ ಮಾಡಲಾಗಿದೆ.
ಕೈಗೆಟಕುವ ಅಗ್ಗದ ಮನೆಗಳಿಗೆ ವಿಧಿಸಲಾಗುತ್ತಿದ್ದ ಜಿಎಸ್ಟಿ ದರವನ್ನು ಶೇ. 8 ರಿಂದ ಶೇ. 1 ಕ್ಕೆ ಇಳಿಸಲಾಗಿದೆ.

ಏಪ್ರಿಲ್‌ 1ರಿಂದ ಜಾರಿ

ಏಪ್ರಿಲ್‌ 1ರಿಂದ ಜಾರಿ

ಕೇಂದ್ರದ ಈ ಹೊಸ ತೆರಿಗೆ ದರಗಳು 2019ರ ಏಪ್ರಿಲ್‌ 1ರಿಂದ ಜಾರಿಯಾಗಲಿವೆ. ಪ್ರಸ್ತುತ ಮಾರಾಟದ ವೇಳೆ ಕಂಪ್ಲೀಶನ್ ಸರ್ಟಿಫಿಕೇಟ್ ವಿತರಣೆಯಾಗಿದ್ದರೆ ಅಂತಹ ಪ್ರಾಪರ್ಟಿಗಳ ಖರೀದಿಗೆ ಜಿಎಸ್ಟಿ ಅನ್ವಯ ಆಗುವುದಿಲ್ಲ. ನಿರ್ಮಾಣ ಹಂತದಲ್ಲಿನ ಮನೆಗಳ ಮೇಲಿನ ಜಿಎಸ್ಟಿ ದರ ಶೇ. 12 ರಿಂದ ಶೇ. 5 ಕ್ಕೆ ಇಳಿಕೆ ಮಾಡುವಂತೆ ಇತ್ತೀಚೆಗೆ ನಡೆದ ರಾಜ್ಯ ಸಚಿವರ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿತ್ತು.

ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌

ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌

ಸರ್ಕಾರದ ಈ ಹೊಸ ಜಿಎಸ್ಟಿ ನಿಯಮದನುಸಾರ ಬಿಲ್ಡರ್‌ಗಳು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಶೇ. 12 ರಷ್ಟು ಜಿಎಸ್ಟಿ ದರವನ್ನು ಬಿಲ್ಡರ್‌ಗಳು ಮನೆ ಖರೀದಿದಾರರಿಂದ ಪಡೆಯುತ್ತಿದ್ದರು. ಹೀಗಾಗಿ ಸರ್ಕಾರದಿಂದ ಸಿಗುವ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಲಾಭ ಮನೆ ಖರೀದಿದಾರರಿಗೆ ಬಿಲ್ಡರ್‌ಗಳು ವರ್ಗಾವಣೆ ಮಾಡುವುದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಯಲ್ಲಿ ಕೇಂದ್ರದ ಈ ಕ್ರಮ ಅತ್ಯಂತ ಪ್ರಮುಖವಾಗಿದೆ.

ಕೈಗೆಟಕುವ ಮನೆಗಳ ಮಾನದಂಡ

ಕೈಗೆಟಕುವ ಮನೆಗಳ ಮಾನದಂಡ

ಅಗ್ಗದ ಮನೆಗಳ ನಿಯಮವನ್ನು ಜಿಎಸ್ಟಿ ಮಂಡಳಿ ಬದಲಿಸಿದ್ದು, ಮೆಟ್ರೋ ನಗರಗಳಲ್ಲಿ ರೂ. 45 ಲಕ್ಷ ವೆಚ್ಚದ 60 ಚದರ ಮೀಟರ್‌ ಅಳತೆ ಹೊಂದಿರುವ ಮನೆಗಳನ್ನು ಕೈಗೆಟಕುವ ಮನೆಗಳೆಂದು ಪರಿಗಣಿಸಲಾಗಿದೆ. ಮೆಟ್ರೋ ಹೊರತಾದ ಇತರ ನಗರಗಳಲ್ಲಿ 90 ಚದರ ಮೀಟರ್‌ ಮನೆಗಳು ಕಡಿಮೆ ವೆಚ್ಚದ ಮನೆ ವ್ಯಾಪ್ತಿಗೆ ಒಳಪಡಲಿವೆ. ಈ ಮನೆಗಳ ನಿರ್ಮಾಣದ ಮೇಲೆ ಶೇ.1 ಜಿಎಸ್ಟಿ ನಿರ್ಧರಿಸಲಾಗಿದೆ.

English summary

GST reduction centers contribution to Home Buyers

GST Council on Sunday decided to slash the levy on under-construction houses to 5% with a special rate of 1% introduced for affordable homes.
Story first published: Monday, February 25, 2019, 10:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X