For Quick Alerts
ALLOW NOTIFICATIONS  
For Daily Alerts

ಎಸ್ಬಿಐ: ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲದ ಮೇಲಿನ ಹೊಸ ಬಡ್ಡಿದರ ಎಷ್ಟು ಗೊತ್ತೆ?

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ತನ್ನ ಗ್ರಾಹಕರ ಹಣಕಾಸು ಅಗತ್ಯತೆಗಳನ್ನು ಪೂರೈಸಲು ವಿವಿಧ ಸಾಲಗಳನ್ನು ಒದಗಿಸುತ್ತದೆ.

|

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ತನ್ನ ಗ್ರಾಹಕರ ಹಣಕಾಸು ಅಗತ್ಯತೆಗಳನ್ನು ಪೂರೈಸಲು ವಿವಿಧ ಸಾಲಗಳನ್ನು ಒದಗಿಸುತ್ತದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಮತ್ತು ಶಿಕ್ಷಣ ಸಾಲ ಹೀಗೆ ಹಲವು ವಿಧದ ಸಾಲಗಳನ್ನು ಒದಗಿಸುತ್ತದೆ. ವಿವಿಧ ಸಾಲಗಳಿಗೆ ಅನುಗುಣವಾಗಿ ಬಡ್ಡಿ ದರಗಳು ಅನ್ವಯವಾಗುತ್ತವೆ ಹಾಗು ಬದಲಾಗುತ್ತವೆ.

 

ಆಕರ್ಷಕ ಬಡ್ಡಿದರಗಳೊಂದಿಗೆ ಈ ಕೆಳಗಿನ ಯೋಜನೆಗಳ ಮೇಲೆ ಬ್ಯಾಂಕ್ ಸಾಲ ಒದಗಿಸುತ್ತದೆ ಎಂದು ಅಧಿಕೃತ ವೆಬ್ಸೈಟ್ sbi.co.in ನಲ್ಲಿ ಹೇಳಿದೆ.
ಎಸ್ಬಿಐ ನೀಡುವ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಮತ್ತು ಶಿಕ್ಷಣ ಸಾಲಗಳ ವಿವರ ಇಲ್ಲಿದೆ ನೋಡಿ.. ಎಸ್ಬಿಐನಿಂದ ಭರ್ಜರಿ ಆಫರ್, ಫೆಬ್ರವರಿ 27ರಿಂದ ಆರಂಭ..

1. ವೈಯಕ್ತಿಕ ಸಾಲ

1. ವೈಯಕ್ತಿಕ ಸಾಲ

ಎಸ್ಬಿಐ ವಿವಿಧ ಅಗತ್ಯಗಳಿಗಾಗಿ ವೈಯಕ್ತಿಕ ಸಾಲವನ್ನು ಒದಗಿಸುತ್ತದೆ. ಸಾಲಗಾರನು ಯಾವುದೇ ರೀತಿಯ ಭದ್ರತೆ ಅಥವಾ ಮೇಲಾಧಾರವಿಲ್ಲದೇ ಎಸ್ಬಿಐನ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಒಬ್ಬ ವ್ಯಕ್ತಿಯು ನಿವ್ವಳ ಮಾಸಿಕ ಆದಾಯದ 24 ಪಟ್ಟು ಸಾಲ ಪಡೆಯಬಹುದು. ಗರಿಷ್ಠ ರೂ. 15 ಲಕ್ಷದವರೆಗೆ ಸಾಲ ಒದಗಿಸುತ್ತದೆ. ಎಸ್ಬಿಐ ವೈಯಕ್ತಿಕ ಸಾಲಗಳಿಗೆ ಶೇ. 12.15 ರಿಂದ ಶೇ. 13.80 ರಷ್ಟು ನಡುವೆ ಬಡ್ಡಿ ದರವನ್ನು ವಿಧಿಸುತ್ತದೆ.

2. ಗೃಹ ಸಾಲ

2. ಗೃಹ ಸಾಲ

ನಿಮ್ಮ ಪ್ರಾಪರ್ಟಿಯ ಮೇಲೆ ಮನೆ ಖರೀದಿಸಲು ಅಥವಾ ನವೀಕರಿಸಲು ಗ್ರಾಹಕರು ಸಾಲವನ್ನು ತೆಗೆದುಕೊಳ್ಳುತ್ತಾರೆ. ರೂ. 30 ಲಕ್ಷದಿಂದ ರೂ. 75 ಲಕ್ಷದವರೆಗಿನ ವ್ಯಾಪ್ತಿಯಲ್ಲಿ ಸಾಲ ಲಭ್ಯವಿರುತ್ತದೆ. ಎಸ್ಬಿಐ ಸಂಬಳದಾತ ಸಾಲಗಾರರಿಗೆ ಶೇ. 8.95 ರಿಂದ ಶೇ. 9.05 ವ್ಯಾಪ್ತಿಯ ಬಡ್ಡಿದರವನ್ನು ವಿಧಿಸುತ್ತದೆ. ಮಹಿಳಾ ಸಾಲಗಾರರಿಗೆ ಶೇ. 8.90 ರಿಂದ ಶೇ. 9 ರ ನಡುವೆ ಕಡಿಮೆ ಬಡ್ಡಿದರವನ್ನು ವಿಧಿಸುತ್ತದೆ.

3. ಶಿಕ್ಷಣ ಸಾಲ
 

3. ಶಿಕ್ಷಣ ಸಾಲ

ಸ್ಟೂಡೆಂಟ್ ಲೋನ್, ಸ್ಕಾಲರ್ ಲೋನ್ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಸಾಲ ಹೀಗೆ ವಿವಿಧ ರೀತಿಯ ಸಾಲಗಳನ್ನು ಒದಗಿಸುತ್ತದೆ. ಸ್ಟೂಡೆಟಂಟ್ ಲೋನ್ ಅಡಿಯಲ್ಲಿ, ಭಾರತದಲ್ಲಿ ಅಥವಾ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಲವನ್ನು ನೀಡಲಾಗುತ್ತದೆ. ಇದು ಭಾರತದಲ್ಲಿ ಅಧ್ಯಯನ ಮಾಡಲು ರೂ. 10 ಲಕ್ಷ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ರೂ. 20 ಲಕ್ಷ ಒದಗಿಸುತ್ತದೆ. ರೂ. 7.5 ಲಕ್ಷದವರೆಗೆ ಶೇ. 10.55 ರಷ್ಟು ಬಡ್ಡಿದರ ಮತ್ತು ರೂ. 7.5 ಮೇಲ್ಪಟ್ಟ ಸಾಲಕ್ಕೆ ಶೇ. 10.80 ಬಡ್ಡಿದರ ವಿಧಿಸುತ್ತದೆ.

4. ಹೊಸ ಕಾರು ಸಾಲ

4. ಹೊಸ ಕಾರು ಸಾಲ

ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಎಸ್ಬಿಐ ಸಾಲವನ್ನು ನೀಡುತ್ತದೆ. ಹೊಸ ಕಾರು ಸಾಲವನ್ನು ಎಲ್ಲಾ ರೀತಿಯ ಪ್ರಯಾಣಿಕ ಕಾರುಗಳು, ಬಹು ಯುಟಿಲಿಟಿ ವಾಹನಗಳು ಮತ್ತು ಎಸ್ ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಖರೀದಿಗೆ ಬಳಸಬಹುದು. ಎಸ್ಬಿಐನ ಹೊಸ ಕಾರು ಸಾಲವನ್ನು ಪಡೆದುಕೊಳ್ಳಲು ಯಾವುದೇ ಮುಂಗಡ-ಪಾವತಿ ಪೆನಾಲ್ಟಿ ಮತ್ತು ಮುಂಗಡ ಇಎಂಐ ಅಗತ್ಯವಿಲ್ಲ. ಎಸ್ಬಿಐ ಶೇ. 9.30 ರಿಂದ ಶೇ. 9.80 ರಷ್ಟು ಬಡ್ಡಿದರವನ್ನು ವಿಧಿಸುತ್ತದೆ.

English summary

SBI Personal, Home, Car Loan: Interest Rates, Amount And Other Details

The different loan products of SBI are home loan, car loan, personal loan and education loan.
Story first published: Tuesday, February 26, 2019, 13:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X