For Quick Alerts
ALLOW NOTIFICATIONS  
For Daily Alerts

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಏಣಿ ಏರುತ್ತಿರುವ ಮುಕೇಶ್ ಅಂಬಾನಿ

|

ವಿಶ್ವದ ಶ್ರೀಮಂತರ ಪಟ್ಟಿ ಎಂಬುದನ್ನು ನೀವು ಆಗಾಗ ನೋಡಿರಬಹುದು. ಇದೊಂಥರ ಮರದ ಕಂಬಕ್ಕೆ ಎಣ್ಣೆ ಸವರಿ, ಅದರ ಮೇಲೆ ಜನರು ಏರಿದಂತೆ. ಯಾವಾಗ ಸರಕ್ಕನೆ ಇಳಿಯುತ್ತಾರೋ ಗೊತ್ತಾಗುವುದೇ ಇಲ್ಲ್. ಈಗಿನ ಸುದ್ದಿ ಏನಪ್ಪಾ ಅಂದರೆ, ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ 6 ಸ್ಥಾನ ಮೇಲಕ್ಕೆ ಏರಿ, ಫೋರ್ಬ್ಸ್ ನ ವಿಶ್ವದ ಶತ ಕೋಟ್ಯಧಿಪತಿಗಳ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ.

ಮಂಗಳವಾರದಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮತ್ತೆ ವಿರಾಜಮಾನ ಆಗಿರುವುದು ಜೆಫ್ ಬೆಜೋಸ್. ಇ ಕಾಮರ್ಸ್ ಕಂಪನಿಯ ದೈತ್ಯ ಅಮೆಜಾನ್ ನ ಸ್ಥಾಪಕ, ಐವತ್ತೈದು ವರ್ಷದ ಬೆಜೋಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ನಂತರದ ಸ್ಥಾನದಲ್ಲಿ ಇದ್ದಾರೆ ಬಿಲ್ ಗೇಟ್ಸ್, ವಾರೆನ್ ಬಫೆಟ್ ಇದ್ದಾರೆ.

 

ಒಂದೇ ವರ್ಷದಲ್ಲಿ 19 ಬಿಲಿಯನ್ ಅಮೆರಿಕನ್ ಡಾಲರ್ ಸಂಪತ್ತು ಸೇರ್ಪಡೆ ಆಗುವ ಮೂಲಕ ಜೆಫ್ ಬೆಜೋಸ್ 131 ಬಿಲಿಯನ್ ಅಮೆರಿಕನ್ ಡಾಲರ್ ಬೆಲೆ ಬಾಳುತ್ತಾರೆ. ಇನ್ನು ಮುಕೇಶ್ ಅಂಬಾನಿ ಅವರ ಸಂಪತ್ತು ಮೌಲ್ಯ ಈ ವರ್ಷ ಹತ್ತು ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚಾಗಿದ್ದು, 50 ಬಿಲಿಯನ್ ಡಾಲರ್ ಗೆ ಆಸ್ತಿಯನ್ನು 2019ರಲ್ಲಿ ಹೊಂದಿದ್ದಾರೆ. ಆ ಮೂಲಕ ವಿಶ್ವದ 13ನೇ ಶ್ರೀಮಂತ ಎನಿಸಿದ್ದಾರೆ.

60 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಇರುವ ರಿಲಯನ್ಸ್ ಇಂಡಸ್ಟ್ರಿಗೆ ಮುಕೇಶ್ ಅಂಬಾನಿ ಅಧ್ಯಕ್ಷ. ಇನ್ನು 2016ರಲ್ಲಿ ಭಾರತದಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರಕ್ಕೆ ಕಾರಣವಾದ ಜಿಯೋ ಟೆಲಿಕಾಂ ಕೂಡ ಅವರ ಒಡೆತನದ್ದೇ. 4G ಸೇವೆ ಆರಂಭಿಸಿದ ರಿಲಯನ್ಸ್ ಜಿಯೋ ದೇಶಾದ್ಯಂತ ಪಸರಿಸಿದೆ. ಉಚಿತ ಕರೆಗಳು, ಅಗ್ಗದ ಬೆಲೆಗೆ ಇಂಟರ್ ನೆಟ್ ಸೇವೆ ಹಾಗೂ ಉಚಿತ ಸ್ಮಾರ್ಟ್ ಫೋನ್ ನೀಡುವ ಮೂಲಕ 28 ಕೋಟಿ ಗ್ರಾಹಕರನ್ನು ರಿಲಯನ್ಸ್ ಜಿಯೋ ಹೊಂದಿದೆ.

ಅಂದಹಾಗೆ, ಒಂದು ಬಿಲಿಯನ್ ಅಂದರೆ ನೂರು ಕೋಟಿ. ಇಲ್ಲಿ ಕೊಟ್ಟಿರುವ ಲೆಕ್ಕ ಡಾಲರ್ ಗಳಲ್ಲಿ. ಮುಕೇಶ್ ಅಂಬಾನಿ ಬಳಿ ಐವತ್ತು ಬಿಲಿಯನ್ ಆಸ್ತಿ ಅಂದರೆ, ಐದು ಸಾವಿರ ಕೋಟಿ ಡಾಲರ್. ಅದನ್ನು ಇವತ್ತಿನ ಭಾರತೀಯ ರುಪಾಯಿ ಮೌಲ್ಯದ ಜತೆ ಗುಣಿಸಬೇಕು. ಐದು ಸಾವಿರ ಕೋಟಿ ಗುಣಕ ಎಪ್ಪತ್ತು. ಅಲ್ಲಿಗೆ ಮೂರೂವರೆ ಲಕ್ಷ ಕೋಟಿ ರುಪಾಯಿ!

ಭಾರತದಲ್ಲಿ 106 ಶತಕೋಟ್ಯಧಿಪತಿಗಳು

ಫೋರ್ಬ್ಸ್ ಪಟ್ಟಿಯಲ್ಲಿರುವ ಭಾರತದ 106 ಶತಕೋಟ್ಯಧಿಪತಿಗಳಲ್ಲಿ ಮೊದಲ ಸ್ಥಾನದಲ್ಲಿ ಮುಕೇಶ್ ಅಂಬಾನಿ ಇದ್ದಾರೆ. ಆ ನಂತರದ ಸ್ಥಾನದಲ್ಲಿ 22.6 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಮೂಲಕ ವಿಪ್ರೋದ ಅಧ್ಯಕ್ಷ ಅಜೀಂ ಪ್ರೇಮ್ ಜೀ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದ್ದಾರೆ. ಎಚ್ ಸಿಎಲ್ ಸಹ ಸಂಸ್ಥಾಪಕ ಶಿವ್ ನಾಡಾರ್ 82ನೇ ಸ್ಥಾನದಲ್ಲಿ ಹಾಗೂ ಅರ್ಸೆಲರ್ ಮಿತ್ತಲ್ ನ ಅಧ್ಯಕ್ಷ ಹಾಗೂ ಸಿಇಒ ಲಕ್ಷ್ಮಿ ಮಿತ್ತಲ್ 91ನೇ ಸ್ಥಾನದಲ್ಲಿ ಇದ್ದು, ವಿಶ್ವದ ಟಾಪ್ 100 ಶತ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಇದ್ದಾರೆ. ಭಾರತದ ಶತ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಬಿರ್ಲಾ, ಅದಾನಿ ಸಮೂಹದ ಗೌತಮ್ ಅದಾನಿ, ಭಾರ್ತಿ ಏರ್ ಟೆಲ್ ನ ಸುನೀಲ್ ಮಿತ್ತಲ್, ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ, ಪಿರಾಮಲ್ ಎಂಟರ್ ಪ್ರೈಸ್ ನ ಅಜಯ್ ಪಿರಾಮಲ್, ಬಯೋಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಶಾ, ಇನ್ಫೋಸಿಸ್ ನ ಎನ್.ಆರ್.ನಾರಾಯಣ ಮೂರ್ತಿ ಮತ್ತು ರಿಲಯನ್ಸ್ ಕಮ್ಯುನಿಕೇಷನ್ ನ ಅನಿಲ್ ಅಂಬಾನಿ ಇದ್ದರೆ.

ಕರಗಿತು ಫೇಸ್ ಬುಕ್ ನ ಮಾರ್ಕ್ ಝುಕರ್ ಬರ್ಗ್ ಆಸ್ತಿ
 

ಕರಗಿತು ಫೇಸ್ ಬುಕ್ ನ ಮಾರ್ಕ್ ಝುಕರ್ ಬರ್ಗ್ ಆಸ್ತಿ

ಶತ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಫೇಸ್ ಬುಕ್ ನ ಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಮೂರು ಸ್ಥಾನ ಕೆಳಗಿಳಿದರೆ, ನ್ಯೂಯಾರ್ಕ್ ನ ಮಾಜಿ ಮೇಯರ್ ಮೈಖೇಲ್ ಬ್ಲೂಮ್ ಬಗ್ ಎರಡು ಸ್ಥಾನಗಳನ್ನು ಮೇಲೇರಿದ್ದಾರೆ. ಬಿಲ್ ಗೇಟ್ಸ್ ಆಸ್ತಿ 96.5 ಬಿಲಿಯನ್ ಡಾಲರ್ ಗೆ ಏರಿಕೆ ಆಗಿದೆ. ಕಳೆದ ವರ್ಷ ಅವರ ಆಸ್ತಿ 90 ಬಿಲಿಯನ್ ಇತ್ತು. ಇನ್ನು ವಾರೆನ್ ಬಫೆಟ್ ಅವರ ಆಸ್ತಿ ಮೌಲ್ಯದಲ್ಲಿ 1.5 ಬಿಲಿಯನ್ ಡಾಲರ್ ನಷ್ಟು ಇಳಿಕೆಯಾಗಿ, 82.5 ಬಿಲಿಯನ್ ಡಾಲರ್ ಆಗಿದೆ. ಆದರೂ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನದಲ್ಲಿ ಇದ್ದಾರೆ. ಅಂದ ಹಾಗೆ ಎರಡು ವರ್ಷದ ಹಿಂದೆ ಫೋರ್ಬ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 33ನೇ ಸ್ಥಾನದಲ್ಲಿದ್ದರು. 2018ರಲ್ಲಿ ಭಾರತದ ಅತಿ ಶ್ರೀಮಂತ ಹಾಗೂ ನಿಯತಕಾಲಿಕೆ ಸಿದ್ಧಪಡಿಸಿದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ 32ನೇ ಸ್ಥಾನದಲ್ಲಿದ್ದರು. ಜಾಗತಿಕ ಮಟ್ಟದಲ್ಲಿ ಬದಲಾವಣೆ ತಂದವರ ಪಟ್ಟಿಯಲ್ಲಿ 2017ರಲ್ಲಿ ಮುಕೇಶ್ ಹೆಸರು ಗಿಟ್ಟಿಸಿದರು.

ಪಟ್ಟಿ ಪ್ರಕಟವಾಗುವುದರಲ್ಲಿ ಸ್ಥಾನ ಏರುಪೇರಾಗಿರಬಹುದು

ವಿಶ್ವದ ಶ್ರೀಮಂತರ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಫ್ರೆಂಚ್ ಕಂಪನಿ ಎಲ್ ವಿಎಂಎಚ್ ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಇದ್ದಾರೆ. ಒಂಬತ್ತು ಬಿಲಿಯನ್ ನಷ್ಟು ಆಸ್ತಿ ಮೌಲ್ಯ ಕಳೆದುಕೊಂಡು ಮಾರ್ಕ್ ಝುಕರ್ ಬರ್ಗ್ ಐದರಿಂದ ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ. ಝುಕರ್ ಬರ್ಗ್ ಗೂ ಮುಂದೆ ಕಾರ್ಲೋಸ್ ಸ್ಲಿಮ್, ಇಂಡಿಟೆಕ್ಸ್ ನ ಸ್ಥಾಪಕ ಅಮಾನಿಕೋ ಒರ್ಟೆಗಾ ಹಾಗೂ ಒರಾಕಲ್ ನ ಸಹ ಸಂಸ್ಥಾಪಕ ಲ್ಯಾರಿ ಎಲ್ಲಿಸನ್ ಇದ್ದಾರೆ. ಫೆಬ್ರವರಿ 8, 2019ರಂದು ಆಯಾ ಕಂಪನಿಗಳ ಷೇರು ಮೌಲ್ಯವನ್ನು ಹಾಗೂ ಅಂದಿನ ವಿದೇಶಿ ವಿನಿಮಯ ದರವನ್ನು ಆಧರಿಸಿ ಈ ಪಟ್ಟಿ ತಯಾರಾಗಿದೆ. ಇದು ಪ್ರಕಟ ಆಗುವುದರೊಳಗೇ ಸ್ಥಾನ ಬದಲಾವಣೆ, ಏರಿಳಿತಗಳು ಆಗಿರಬಹುದು ಎಂದು ಹೇಳಲಾಗಿದೆ.

ಶತ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಇಳಿಕೆ

ಈಗ ಸಿದ್ಧಪಡಿಸಿರುವ ಪಟ್ಟಿಯಲ್ಲಿ ತಲೆತಲಾಂತರದಿಂದ ಕುಟುಂಬದ ಆಸ್ತಿ ಇರುವಂಥವರನ್ನು ಲೆಕ್ಕದಲ್ಲಿ ಸೇರಿಸಿಲ್ಲ. ಆದರೆ ಯಾವುದೇ ಕಂಪನಿ ಸ್ಥಾಪಿಸಿದ ವ್ಯಕ್ತಿಯ ಬಾಳ ಸಂಗಾತಿ, ಮಕ್ಕಳ ಆಸ್ತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. 2019ರಲ್ಲಿ ಇರುವ ಒಟ್ಟು ಸತ ಕೋಟ್ಯಧಿಪತಿಗಳ ಸಂಖ್ಯೆ 2,153. 2018ನೇ ಇಸವಿಯಲ್ಲಿ 2,208 ಮಂದಿ ಇದ್ದರು. ಇನ್ನು ಇವರೆಲ್ಲರ ಆಸ್ತಿ ಒಟ್ಟಾರೆಯಾಗಿ 8.7 ಟ್ರಿಲಿಯನ್ ಇದೆ. 2018ರಲ್ಲಿ ಇದು 9.1 ಟ್ರಿಲಿಯನ್ ಇತ್ತು. ಇದರರ್ಥ ಶತ ಕೋಟ್ಯಧಿಪತಿಗಳ ಸಂಖ್ಯೆಯಲ್ಲೂ ಕಡಿಮೆ ಆಗಿದೆ ಹಾಗೂ ಅವರ ಒಟ್ಟು ಆಸ್ತಿ ಮೌಲ್ಯದಲ್ಲೂ ಕುಸಿತ ಆಗಿದೆ. 994 ಮಂದಿಯ ಆಸ್ತಿ ಈಗ ಹೋಲಿಸಿದರೆ ವರ್ಷದ ಹಿಂದೆ ಕಡಿಮೆ ಇತ್ತು. ಕಳೆದ ವರ್ಷ 360 ಮಂದಿಯ ಆಸ್ತಿ ಮಾತ್ರ ಸ್ವಲ್ಪ ಕಡಿಮೆ ಆಗಿದೆ. ಈ ವರ್ಶದ ಶತ ಕೋಟ್ಯಧಿಪತಿಗಳ ಸರಾಸರಿ ಆಸ್ತಿ 4 ಬಿಲಿಯನ್ ಅಮೆರಿಕನ್ ಡಾಲರ್. ಕಳೆದ ವರ್ಷ ಈ ಸರಾಸರಿ 4.1 ಬಿಲಿಯನ್ ಇತ್ತು.

ಅಮೆರಿಕದಲ್ಲೇ ಅತಿ ಹೆಚ್ಚು ಶ್ರೀಮಂತರು

ಈ ದಶಕದಲ್ಲೇ ಇದು ಎರಡನೇ ಬಾರಿಗೆ ಬಿಲಿಯನೇರ್ ಗಳ ಸಂಖ್ಯೆ ಹಾಗೂ ಅವರ ಆಸ್ತಿ ಮೌಲ್ಯದಲ್ಲಿ ಇಳಿಕೆ ಆಗಿದೆ. ಇನ್ನು ಆ ಪೈಕಿ ಏಷ್ಯಾ ಪೆಸಿಫಿಕ್ ಭಾಗದಲ್ಲಿ ಭಾರೀ ಹೊಡೆತ ಬಿದ್ದಿದೆ. ಅದರಲ್ಲೂ ಚೀನಾದಲ್ಲಿ ಆ ಸಂಖ್ಯೆ ಹೆಚ್ಚಿದೆ. ಒಟ್ಟಾರೆ ಏಷ್ಯಾ ಪೆಸಿಫಿಕ್ ನಲ್ಲೇ ಅರವತ್ತು ಮಂದಿ ಶತ ಕೋಟ್ಯಧಿಪತಿಗಳು ಕಡಿಮೆಯಾದರೆ, ಚೀನಾವೊಂದರಲ್ಲೇ ಕಳೆದ ವರ್ಷಕ್ಕಿಂತ ಈ ವರ್ಷ ನಲವತ್ತೊಂಬತ್ತು ಮಂದಿ ಕಡಿಮೆ ಆಗಿದ್ದಾರೆ. ಅದೇ ರೀತಿ ಯುರೋಪ್, ಮಧ್ಯ ಪ್ರಾಚ್ಯ ಹಾಗೂ ಆಫ್ರಿಕಾದಲ್ಲೂ ವ್ಯತ್ಯಾಸ ಆಗಿದೆ. ಅಮೆರಿಕ ಹಾಗೂ ಬ್ರೆಜಿಲ್ ಭಾಗದಲ್ಲಿ ಮಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಾಗಿದೆ. ದಾಖಲೆಯ 609 ಶತಕೋಟ್ಯಧಿಪತಿಗಳು ಅಮೆರಿಕದಲ್ಲೇ ಇದ್ದಾರೆ. ಅದರಲ್ಲಿ ವಿಶ್ವದ 20 ಶ್ರೀಮಂತರ ಪೈಕಿ 14 ಮಂದಿ ಅಲ್ಲೇ ಇದ್ದಾರೆ.

English summary

Mukesh Ambani ranks 13th on Forbes World's Billionaire list

Richest Indian Mukesh Ambani jumped six positions to rank 13th on Forbes World's Billionaire list released Tuesday that was again topped by Jeff Bezos.
Story first published: Wednesday, March 6, 2019, 11:29 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more