ಎಂಎಸ್‌ಎಂಇ ವಲಯದಲ್ಲಿ ವರ್ಷಕ್ಕೆ 1.49 ಕೋಟಿ ಉದ್ಯೋಗ ಸೃಷ್ಟಿ

ಕಳೆದ 4 ವರ್ಷಗಳಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ವಲಯದಲ್ಲಿ ವರ್ಷಕ್ಕೆ 1.49 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಭಾರತೀಯ ಉದ್ಯಮಗಳ ಒಕ್ಕೂಟದ(ಸಿಐಐ) ಸಮೀಕ್ಷೆಯಲ್ಲಿ ಹೇಳಲಾಗಿದೆ.

ಕಳೆದ 4 ವರ್ಷಗಳಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ವಲಯದಲ್ಲಿ ವರ್ಷಕ್ಕೆ 1.49 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಭಾರತೀಯ ಉದ್ಯಮಗಳ ಒಕ್ಕೂಟದ(ಸಿಐಐ) ಸಮೀಕ್ಷೆಯಲ್ಲಿ ಹೇಳಲಾಗಿದೆ.

ಎಂಎಸ್‌ಎಂಇ ವಲಯದಲ್ಲಿ ವರ್ಷಕ್ಕೆ 1.49 ಕೋಟಿ ಉದ್ಯೋಗ ಸೃಷ್ಟಿ

ಒಂದು ಲಕ್ಷಕ್ಕಿಂತ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸಮೀಕ್ಷೆ ನಡೆಸಲಾಗಿದ್ದು, ಎಂಎಸ್‌ಎಂಇ ವಲಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶೇ.13.9ರಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದು, ವಾರ್ಷಿಕ ಶೇ. 3.3ರ ಬೆಳವಣಿಗೆ ಕಂಡು ಬಂದಿದೆ.

2017-18ರಲ್ಲಿ ಕಾರ್ಮಿಕ ಇಲಾಖೆ ಪ್ರಕಾರ ದೇಶದಲ್ಲಿ ಒಟ್ಟು 45 ಕೋಟಿ ಕೆಲಸಗಾರರಿದ್ದು, ಈ ವಲಯಕ್ಕೆ ವಾರ್ಷಿಕ ಒಂದು ಕೋಟಿಗೂ ಅಧಿಕ ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ ಎಂದು ಸಿಐಐ ಹೇಳಿದೆ.
ದೇಶದ 28 ರಾಜ್ಯಗಳಲ್ಲಿನ 350 ಕೈಗಾರಿಕಾ ಪ್ರದೇಶಗಳಲ್ಲಿನ 1,05 ಲಕ್ಷ ಎಂಎಸ್‌ಎಂಇಗಳನ್ನು ಸಮೀಕ್ಷೆ ನಡೆಸಲಾಗಿದೆ. ಎಂಎಸ್‌ಎಂಇಗಳಲ್ಲಿನ ಉದ್ಯೋಗ ಸೃಷ್ಟಿ ಪ್ರಮಾಣ ಮತ್ತು ಸರ್ಕಾರದ ಉತ್ತೇಜಕಗಳನ್ನು ಸಮೀಕ್ಷೆಯ ಮಾನದಂಡಗಳಾಗಿದ್ದವು. ಕಳೆದ ನಾಲ್ಕು ವರ್ಷಗಳಲ್ಲಿ ಮಹಾರಾಷ್ಟ್ರ, ಗುಜರಾತ್‌ ಮತ್ತು ತೆಲಂಗಾಣ ರಾಜ್ಯಗಳು ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ರಫ್ತಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣಗಳು ಅಗ್ರ ರಾಜ್ಯಗಳಾಗಿ ಗುರುತಿಸಲ್ಪಟ್ಟಿವೆ ಎಂದು ಸಮೀಕ್ಷೆ ಹೇಳಿದೆ.

ಹಾಸ್ಪಿಟಾಲಿಟಿ, ಜವಳಿ-ಉಡುಪು, ಲೋಹದ ಉತ್ಪನ್ನಗಳಿಗೆ ಸಂಬಂಧಿಸಿದ ವಲಯಗಳಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+