For Quick Alerts
ALLOW NOTIFICATIONS  
For Daily Alerts

ಮೋದಿಗೆ ಅಘಾತಕಾರಿ ಸುದ್ದಿ! ಆರ್ಬಿಐ ಸಮ್ಮತಿ ಇಲ್ಲದೇ ನೋಟು ನಿಷೇಧ ಘೋಷಣೆ..

ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು ನಿಜಕ್ಕೂ ಅಘಾತಕಾರಿ ಸುದ್ದಿ! ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿರುವಂತೆಯೇ ಆಘಾತಕಾರಿ ಸುದ್ದಿ ಎದುರಾಗಿದ್ದು, ನೋಟು ರದ್ದತಿ ಸ್ಫೋಟಕ ರಹಸ್ಯ ಬೆಳಕಿಗೆ ಬಂದಿದೆ.

|

ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು ನಿಜಕ್ಕೂ ಅಘಾತಕಾರಿ ಸುದ್ದಿ! ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿರುವಂತೆಯೇ ಆಘಾತಕಾರಿ ಸುದ್ದಿ ಎದುರಾಗಿದ್ದು, ನೋಟು ರದ್ದತಿ ಸ್ಫೋಟಕ ರಹಸ್ಯ ಬೆಳಕಿಗೆ ಬಂದಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ದೇಶಕ ಮಂಡಳಿ ಸಮ್ಮತಿ ಸೂಚಿಸುವ ಮೊದಲೇ ಮೋದಿಯವರು ನೋಟು ನಿಷೇಧದ ಘೋಷಣೆ ಮಾಡಿದ್ದರು ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ 10 ವೈಫಲ್ಯಗಳು ಯಾವುವು ಗೊತ್ತೆ?

ಆರ್‌ಟಿಐ ವರದಿ

ಆರ್‌ಟಿಐ ವರದಿ

ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕ ಮಂಡಳಿಯ ಅನುಮೋದನೆಗೆ ಕಾಯದೆ, 2016ರ ನವೆಂಬರ್ ನಲ್ಲಿ ಪ್ರಧಾನಿ ಮೋದಿ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರು ಎನ್ನುವ ಸಂಗತಿ ಆರ್ಟಿಐ ಅಡಿಯಲ್ಲಿ ತಿಳಿದುಬಂದಿದೆ.

ನೋಟು ನಿಷೇಧ ಘೋಷಣೆ

ನೋಟು ನಿಷೇಧ ಘೋಷಣೆ

ಆರ್ಬಿಐ ನಿರ್ದೇಶಕ ಮಂಡಳಿಯು ನವೆಂಬರ್ 8ರಂದು ನೋಟು ರದ್ದತಿ ಘೋಷಣೆ ಹೊರ ಬೀಳುವ ಎರಡೂವರೆ ಗಂಟೆಗಳ ಮೊದಲು ಸಭೆ ಸೇರಿತ್ತು. ಈ ಸಭೆಯು ಹಣಕಾಸು ಸಚಿವಾಲಯದ ಕರಡು ಪ್ರಸ್ತಾವ ಚರ್ಚೆಗೆ ತೆಗೆದುಕೊಂಡು ಅನುಮೋದನೆ ನೀಡುವ ಮುನ್ನವೇ ಮೋದಿಯವರು ನೋಟು ನಿಷೇಧದ ಬಗ್ಗೆ ಘೋಷಣೆ ಹೊರಡಿಸಿದ್ದರು!

ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ

ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ

ನೋಟು ನಿಷೇಧದ ಪರ ಸರ್ಕಾರ ಮಂಡಿಸಿದ ಬಹುತೇಕ ವಾದಗಳನ್ನು ನಿರ್ದೇಶಕ ಮಂಡಳಿ ಅನುಮೋದನೆ ಮಾಡಿರಲಿಲ್ಲ. ಕಪ್ಪು ಹಣ ಚಲಾವಣೆಯಲ್ಲಿರುವ ನೋಟುಗಳ ಬದಲಿಗೆ, ಬದಲಿಗೆ ರಿಯಲ್ ಎಸ್ಟೇಟ್ ಮತ್ತು ಚಿನ್ನದ ರೂಪದಲ್ಲಿದೆ. ಹೀಗಾಗಿ ನೋಟು ರದ್ದತಿ ಅಂತಹ ಪರಿಣಾಮ ಬೀರುವುದಿಲ್ಲ. ಇದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರ್.ಬಿ.ಐ. ನಿರ್ದೇಶಕರು ಹೇಳಿದ್ದರು.

ಆರ್ಟಿಐ ಕಾರ್ಯಕರ್ತ ವೆಂಕಟೇಶ ನಾಯಕ್

ಆರ್ಟಿಐ ಕಾರ್ಯಕರ್ತ ವೆಂಕಟೇಶ ನಾಯಕ್

ನರೇಂದ್ರ ಮೋದಿ ನೋಟು ರದ್ದತಿ ಘೋಷಣೆ ಮಾಡಿದ್ರುವ ಮಾಹಿತಿ ಪಡೆಯಲುನಿರ್ದೇಶಕ ಮಂಡಳಿಯ ಸಭಾ ನಡಾವಳಿ ವಿವರ ಕೇಳಿ ಆರ್ಬಿಐಗೆ ಮನವಿ ಮಾಡಿದ್ದರು. ಮೊದಲಿಗೆ ಈ ಮಾಹಿತಿಯನ್ನು ನೀಡಲು ನಿರಾಕರಿಸಿದ್ದು, ನಂತರದಲ್ಲಿ ಈ ವಿವರಗಳನ್ನು ಬಹಿರಂಗಪಡಿಸಲಾಗಿದೆ.

Read more about: note ban rbi money narendra modi
English summary

Did PM Modi Not Wait for RBI's Nod on Demonetisation Before Rollout?

Central Board, which was asked to consider Centre’s demonetisation proposal, had met less than two-and-a-half hours before the announcement of note ban on November 8, 2016.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X