For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್! ಸರ್ಕಾರಿ ನೌಕರರಿಗೆ ಎಸ್ಬಿಐನಿಂದ ಬಂಪರ್ ಕೊಡುಗೆ

ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟಿಸಿಕೊಳ್ಳಬೇಕು ಎಂಬ ಕನಸಿರುತ್ತದೆ. ಅಗ್ಗದ ಮನೆ ಕಟ್ಟಲು ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಜನರ ಕನಸನ್ನು ನನಸಾಗಿಸಲು ನೆರವಾಗಲು ಮುಂದಾಗಿದೆ.

|

ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟಿಸಿಕೊಳ್ಳಬೇಕು ಎಂಬ ಕನಸಿರುತ್ತದೆ. ಅಗ್ಗದ ಮನೆ ಕಟ್ಟಲು ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಜನರ ಕನಸನ್ನು ನನಸಾಗಿಸಲು ನೆರವಾಗಲು ಮುಂದಾಗಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಅನೇಕ ರೀತಿಯ ಗೃಹ ಸಾಲಗಳನ್ನುಒದಗಿಸುತ್ತಿದ್ದೆ. ರೆಗ್ಯೂಲರ್ ಹೋಂ ಲೋನ್, ಬ್ಯಾಲೆನ್ಸ್ ಟ್ರಾನ್ಸ್ಫರ್ ಆಫ್ ಹೋಮ್ ಲೋನ್, ಎನ್ಆರ್ಐ ಹೋಂ ಲೋನ್, ಫ್ಲೆಕ್ಸಿಪೆ ಗೃಹ ಸಾಲ ಹೀಗೆ ಅನೇಕ ರೀತಿಯ ಸಾಲಗಳನ್ನು ನೀಡುತ್ತದೆ. ಸರ್ಕಾರಿ ನೌಕರರು ಅತಿ ಕಡಿಮೆ ಇಎಂಐ, ಬಡ್ಡಿದರ, ಪ್ರಕ್ರಿಯಾ ಶುಲ್ಕ ಇರುವ ಗೃಹ ಸಾಲ ಸೌಲಭ್ಯ ಪಡೆಯಲು ಬಯಸುತ್ತಿರುತ್ತಾರೆ.

 

ಎಸ್ಬಿಐ ಪ್ರಿವಿಲೇಜ್ ಗೃಹ ಸಾಲ

ಎಸ್ಬಿಐ ಪ್ರಿವಿಲೇಜ್ ಗೃಹ ಸಾಲ

ಎಸ್ಬಿಐ ಪ್ರಿವಿಲೇಜ್ ಗೃಹ ಸಾಲ ವಿಶೇಷವಾಗಿ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಈ ಪ್ರಿವಿಲೇಜ್ ಗೃಹ ಸಾಲವನ್ನು ಪಡೆಯಬಹುದಾಗಿದೆ. ಸಾಲದ ಮೊತ್ತವು ಅರ್ಜಿದಾರನ ವಯಸ್ಸು, ಸಾಲ ತೀರಿಸುವ ಸಾಮರ್ಥ್ಯ, ಅರ್ಜಿದಾರದ ಆದಾಯ ಹಾಗೂ ಮನೆ ವೆಚ್ಛವನ್ನು ಅವಲಂಬಿಸಿರುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆ

ಅರ್ಜಿ ಸಲ್ಲಿಸಲು ಅರ್ಹತೆ

18 ವರ್ಷ ಮೇಲ್ಪಟ್ಟ ಹಾಗೂ 75 ವರ್ಷದೊಳಗಿನ ನೌಕರರು ಉದ್ಯೋಗಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಎಸ್ಬಿಐ ನೀಡುವ ಶೌರ್ಯ ಗೃಹ ಸಾಲ ದೇಶದ ಯೋಧರು ಹಾಗೂ ರಕ್ಷಣಾ ಕ್ಷೇತ್ರದ ನೌಕರರಿಗೆ ಸಿಗಲಿದೆ.

ಸಾಲದ ವಿಶೇಷತೆ
 

ಸಾಲದ ವಿಶೇಷತೆ

ಕಡಿಮೆ ಬಡ್ಡಿ ದರ
ಕಡಿಮೆ ಇಎಂಐ
ಶೂನ್ಯ ಪ್ರಕ್ರಿಯೆ ಶುಲ್ಕ
ಯಾವುದೇ ಗುಪ್ತ ಶುಲ್ಕಗಳು ಪೂರ್ವಪಾವತಿ ದಂಡ, ಬಡ್ಡಿ ಶುಲ್ಕಗಳು ಇರುವುದಿಲ್ಲ.
30 ವರ್ಷಗಳವರೆಗೆ ಮರುಪಾವತಿ ಅವಕಾಶ
ಮಹಿಳಾ ಸಾಲಗಾರರಿಗೆ ಕಡಿಮೆ ಬಡ್ಡಿ

ಶೌರ್ಯ ಗೃಹ ಸಾಲ

ಶೌರ್ಯ ಗೃಹ ಸಾಲ

ಈ ಯೋಜನೆಯು ರಾಷ್ಟ್ರದ ಸೈನ್ಯ ಮತ್ತು ರಕ್ಷಣಾ ಸಿಬ್ಬಂದಿಗಳಿಗೆ ಸಮರ್ಪಿತವಾಗಿದೆ. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ, ಈ ಗೃಹ ಸಾಲ ಯೋಜನೆಯಡಿ ಅರ್ಜಿದಾರರು ಕಡಿಮೆ ಬಡ್ಡಿದರಗಳನ್ನು ಮತ್ತು ಇತರ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಕಡಿಮೆ ಬಡ್ಡಿದರಗಳ ಹೊರತಾಗಿ, ರಕ್ಷಣಾ ನೌಕರರು ಸುಲಭ ಮರುಪಾವತಿಯ ಆಯ್ಕೆಗಳನ್ನು ಹೊಂದಿರುತ್ತಾರೆ ಮತ್ತು ಸಾಲ ಮರುಪಾವತಿಸಲು ದೀರ್ಘಾವಧಿಯನ್ನು ಪಡೆಯಬಹುದು.

ದಾಖಲಾತಿಗಳು

ದಾಖಲಾತಿಗಳು

ಈ ಸಾಲವನ್ನು ಪಡೆಯುವ ಅಗತ್ಯವಿರುವ ದಾಖಲೆಗಳೆಂದರೆ:
ಉದ್ಯೋಗದಾತರ ಗುರುತಿನ ಚೀಟಿ
೩ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳೊಂದಿಗೆ ತುಂಬಿದ ಅರ್ಜಿ
ಗುರುತಿನ ಪುರಾವೆ (ಪ್ಯಾನ್ / ಪಾಸ್ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ ಕಾರ್ಡ್)
ವಿಳಾಸ ಪುರಾವೆ (ಟೆಲಿಫೋನ್ ಬಿಲ್ ಅಥವಾ ಯುಟಿಲಿಟಿ ಬಿಲ್ ಅಥವಾ ಪಾಸ್ಪೋರ್ಟ್ / ಡ್ರೈವಿಂಗ್ ಪರವಾನಗಿ / ಆಧಾರ್ ಕಾರ್ಡ್)
- ಅಕೌಂಟ್ ಸ್ಟೇಟ್ಮೆಂಟ್ (ಕಳೆದ 6 ತಿಂಗಳು ನಡೆಸಿದ ವ್ಯವಹಾರ) ಇಂದಿನಿಂದ ಈ ಪ್ರಮುಖ ಬದಲಾವಣೆಗಳು ನಿಮಗೆ ಅನ್ವಯವಾಗಲಿವೆ..

English summary

Good News! SBI home loan for government employees

Every individual dream of having a house of his own. State Bank of India (SBI), country's biggest lender, can help them to fulfill their dream.
Story first published: Monday, April 1, 2019, 16:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X