For Quick Alerts
ALLOW NOTIFICATIONS  
For Daily Alerts

ಜೆಟ್ ಏರ್ವೆಸ್: ಕಾರ್ಯಾಚರಣೆಯಲ್ಲಿರುವ ವಿಮಾನಗಳ ಸಂಖ್ಯೆ ಕೇವಲ 29, ಆರ್ಥಿಕ ಪರಿಸ್ಥಿತಿ ಗಂಭೀರ

ಜೆಟ್ ಏರ್ವೆಸ್ ವಿಮಾನಯಾನ ಸಂಸ್ಥೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ತನ್ನ ಸಾವಿರಾರು ನೌಕರರಿಗೆ ಸಕಾಲದಲ್ಲಿ ಸಂಬಳ ಪಾವತಿಸಿಲ್ಲ.

|

ಜೆಟ್ ಏರ್ವೆಸ್ ವಿಮಾನಯಾನ ಸಂಸ್ಥೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ತನ್ನ ಸಾವಿರಾರು ನೌಕರರಿಗೆ ಸಕಾಲದಲ್ಲಿ ಸಂಬಳ ಪಾವತಿಸಿಲ್ಲ. ಬಾಡಿಗೆ ಪಾವತಿಸದೇ ಇರುವುದರಿಂದ ಜೆಟ್ ಏರ್ವೆಸ್ ಇಂಡಿಯಾ ಲಿಮಿಟೆಡ್ ವಿಮಾನಗಳು ಕಾರ್ಯಸ್ಥಗಿತಗೊಳಿಸಿವೆ.

ಜೆಟ್ ಏರ್ವೆಸ್: ಕಾರ್ಯಾಚರಣೆಯಲ್ಲಿರುವ ವಿಮಾನಗಳ ಸಂಖ್ಯೆ ಕೇವಲ 29

ಜೆಟ್ ಏರ್ವೆಸ್, ತನ್ನ ಪ್ರಸ್ತುತ ವಿಮಾನಗಳ ಗಾತ್ರವನ್ನು ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಬಹಿರಂಗಪಡಿಸಿಲ್ಲ. ಹೆಸರು ಹೇಳಲು ಇಚ್ಚಿಸದ ಇಬ್ಬರು ಕಾರ್ಯನಿರ್ವಾಹಕರು ಸಂಸ್ಥೆಯು ಪ್ರಸ್ತುತ 29 ವಿಮಾನಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಎರಡು ವಾರಗಳ ಹಿಂದೆ 119 ವಿಮಾನಗಳ ಪೈಕಿ ಕೇವಲ 41 ವಿಮಾನಗಳು ಮಾತ್ರ ಸಂಚಾರ ನಡೆಸುತ್ತಿದ್ದವು.

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಸಂಸ್ಥೆಯ ಸ್ಥಿತಿಯನ್ನು ಸುಧಾರಿಸಲು ಹಾಗು ನವೀಕರಣ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಏರ್ ಕ್ರಾಪ್ಟ್ ಲೆಸರ್ಸ್, ಕಂಪನಿಯ ಪ್ರಯತ್ನಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಜೆಟ್ ಏರ್ವೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜೆಟ್ ಏರ್ವೆಸ್ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಲು ಹೆಣಗಾಡುತ್ತಿದೆ. ಕಳೆದ ಮೂರು ತಿಂಗಳುಗಳಿಂದ ಸಿಬ್ಬಂದಗಳ, ಪೈಲಟ್, ಎಂಜಿನಿಯರ್ ಮತ್ತು ಸಾಮಾನ್ಯ ವ್ಯವಸ್ಥಾಪಕರು ಸಂಬಳವನ್ನು ಪಾವತಿಸಿಲ್ಲ. ಏರುತ್ತಿರುವ ವೆಚ್ಚಗಳನ್ನು ನಿಭಾಯಿಸಲು ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಸಿಬ್ಬಂದಿಗಳ ಸಂಬಳ ಪಾವತಿ ಮತ್ತು ವಿಮಾನಗಳ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ.

ಪ್ರಧಾನಿ ನರೇಂದ್ರ ಮೋದಿ ಹಾಗು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರಿಗೆ
ಜೆಟ್ ಏರ್ವೇಸ್ ಪೈಲಟ್ ಗಳು, ನೌಕರರು ವೇತನ ಕೊಡಿಸಲು ಮಧ್ಯ ಪ್ರವೇಶಿಸುವಂತೆ ಕೋರಿ ಪತ್ರ ಬರೆದಿದ್ದರು. ಆರ್ಥಿಕ ಬಿಕ್ಕಟ್ಟಿನಿಂದ ಜೆಟ್ ಏರ್ವೇಸ್ ವಿಮಾನಗಳ ಹಾರಾಟ ಸಂಖ್ಯೆ ಕುಸಿದಿದ್ದು ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ.

ಎಸ್‌ಬಿಐ ಮತ್ತು ಇತರೆ ಸಂಸ್ಥೆಗಳ ನೆರವು ಕೊರಿಕೆ
ಈಗಾಗಲೇ ಜೆಟ್‌ ಏರ್‌ವೇಸ್‌ಗೆ ಸೂಕ್ತ ಹೊಸ ಮಾಲೀಕರು ಸಿಗುವವರೆಗೂ ಅಗತ್ಯ ಹಣಕಾಸಿನ ನೆರವು ನೀಡುವಂತೆ ಎಸ್‌ಬಿಐ ನೇತೃತ್ವದ ಸರ್ಕಾರಿ ವಲಯದ ಕೆಲವು ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಬ್ಯಾಂಕುಗಳು ತಕ್ಷಣಕ್ಕೆ ಜೆಟ್‌ಗೆ ಹಣಕಾಸಿನ ನೆರವು ನೀಡಿದರೆ ವಿಮಾನಯಾನ ಕಂಪನಿ ಉಳಿಯಲಿದೆ. ಒಂದು ವೇಳೆ ನೆರವು ಸಿಗದಿದ್ದಲ್ಲಿ ಕಿಂಗ್‌ಫಿಶರ್ ಹಾದಿ ಹಿಡಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜೆಟ್‌ ಏರ್‌ವೇಸ್ ಸುಮಾರು ರೂ. 8200 ಕೋಟಿ ಸಾಲದಲ್ಲಿ ಸಿಲುಕಿದ್ದು, ಎಸ್ಬಿಐ ನೇತೃತ್ವದ ಬ್ಯಾಂಕುಗಳಿಗೆ ಜೆಟ್‌ ಏರ್‌ವೇಸ್ ಷೇರು ಖರೀದಿಸಲು ಸೂಚಿಸಿದೆ ಎನ್ನಲಾಗಿದೆ.

Read more about: jet airways airlines money
English summary

Jet Airways has less than 30 planes in operations now

Lessors to Jet Airways (India) Ltd have grounded 15 more planes due to non-payment of rentals.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X