For Quick Alerts
ALLOW NOTIFICATIONS  
For Daily Alerts

ನೆಟ್ಫ್ಲಿಕ್ಸ್ (Netflix) ಮೊಬೈಲ್ ಬಳಕೆದಾರರಿಗೆ ರೂ. 65ಕ್ಕೆ ಸಸ್ತಾ ಪ್ಲಾನ್ ಘೋಷಣೆ, ಇಲ್ಲಿದೆ ಮಾಹಿತಿ..

ದೇಶದ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಆನ್ಲೈನ್ ಎಂಟರ್ಟೆನ್ಮೆಂಟ್ ಕಂಟೆಂಟ್ ಸೇವೆ ಪೂರೈಕೆದಾರ ಸಂಸ್ಥೆ ನೆಟ್ಫ್ಲಿಕ್ಸ್ ಅಗ್ಗದ ಯೋಜನೆಗಳನ್ನು ಪರಿಚಯಿಸುತ್ತಿದೆ. ಭಾರತದಲ್ಲಿ ನೆಟ್ಫ್ಲಿಕ್ಸ್ ಇಲ್ಲಿಯವರೆಗೆ ಅತಿ ಅಗ

|

ದೇಶದ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಆನ್ಲೈನ್ ಎಂಟರ್ಟೆನ್ಮೆಂಟ್ ಕಂಟೆಂಟ್ ಸೇವೆ ಪೂರೈಕೆದಾರ ಸಂಸ್ಥೆ ನೆಟ್ಫ್ಲಿಕ್ಸ್ ಅಗ್ಗದ ಯೋಜನೆಗಳನ್ನು ಪರಿಚಯಿಸುತ್ತಿದೆ. ಭಾರತದಲ್ಲಿ ನೆಟ್ಫ್ಲಿಕ್ಸ್ ಇಲ್ಲಿಯವರೆಗೆ ಅತಿ ಅಗ್ಗದ ಪ್ಲಾನ್ ಅನ್ನು ಪರಿಚಯಿಸಿದೆ. ಮಾದ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ, ಮೊಬೈಲ್ ಓನ್ಲಿ ಪ್ಲಾನ್ ಗ್ರಾಹಕರಿಗೆ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ ಗಳಲ್ಲಿ ಕಂಟೆಂಟ್ ವಿಕ್ಷಿಸುವ ಅವಕಾಶ ಒದಗಿಸುತ್ತದೆ.

ಮೊಬೈಲ್ ಓನ್ಲಿ ಪ್ಲಾನ್ಸ್

ಮೊಬೈಲ್ ಓನ್ಲಿ ಪ್ಲಾನ್ಸ್

ನೆಟ್ಫ್ಲಿಕ್ಸ್ ಕಂಪನಿಯು ಮೊಬೈಲ್ ಗಾಗಿ ವಾರಕ್ಕೆ ರೂ. 65 ಮೊತ್ತದ ಪ್ಲಾನ್ ಅನ್ನು ಪರೀಕ್ಷಿಸುತ್ತಿದೆ. ಇದು ಮೊಬೈಲ್ ಓನ್ಲಿ ಪ್ಲಾನ್ ಆಗಿದ್ದು, ಅವು ಪರೀಕ್ಷಿಸಲ್ಪಡುತ್ತಿದ್ದರಿಂದ ಮೊಬೈಲ್ ಓನ್ಲಿ ಪ್ಲಾನ್ಸ್ ಎಲ್ಲಾ ಚಂದಾದಾರರಿಗೆ ಲಭ್ಯವಿಲ್ಲ. ಪ್ರಸ್ತುತ ಇವುಗಳು ಬೀಟಾ ಆವೃತ್ತಿಯಲ್ಲಿದ್ದು, ಈ ಯೋಜನೆಗಳು ರೂ. 500 ಕಡಿಮೆ ಇರುವ ಯೋಜನೆಗಳಾಗಿವೆ.

ನೆಟ್ಫ್ಲಿಕ್ಸ್ ಆಯ್ಕೆ

ನೆಟ್ಫ್ಲಿಕ್ಸ್ ಆಯ್ಕೆ

ನಾವು ಯಾವಾಗಲೂ ನೆಟ್ಫ್ಲಿಕ್ಸ್ ಅನ್ನು ಹೆಚ್ಚು ಆಹ್ಲಾದಿಸಬಹುದಾದ ಮತ್ತು ಸುಲಭವಾಗಿ ಸಿಗುವ ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಆಯ್ದ ರಾಷ್ಟ್ರಗಳಲ್ಲಿ ನಾವು ವಿವಿಧ ಆಯ್ಕೆಗಳನ್ನು ಪರೀಕ್ಷಿಸುತ್ತೇವೆ. ಉದಾಹರಣೆಗೆ ತಮ್ಮ ಮೊಬೈಲ್ ನಲ್ಲಿ ನೆಟ್ಫ್ಲಿಕ್ಸ್ ಅನ್ನು ಕಡಿಮೆ ಬೆಲೆಗೆ ವೀಕ್ಷಿಸಬಹುದು. ಪ್ರತಿಯೊಬ್ಬರೂ ಈ ಆಯ್ಕೆಗಳನ್ನು ನೋಡಲಾಗುವುದಿಲ್ಲ. ಪರೀಕ್ಷಿಸುವ ಮುನ್ನ ಈ ನಿರ್ದಿಷ್ಟ ಯೋಜನೆಯನ್ನು ಪರಿಚಯಿಸುವುದಿಲ್ಲ ಎಂದು ನೆಟ್ಫ್ಲಿಕ್ಸ್ ವಕ್ತಾರರು ಹೇಳಿದ್ದಾರೆ.

ಪ್ರಸ್ತುತ ಅನ್ವಯಿಸುವ ಪ್ಲಾನ್

ಪ್ರಸ್ತುತ ಅನ್ವಯಿಸುವ ಪ್ಲಾನ್

ಮೊಬೈಲ್ ಓನ್ಲಿ ಪ್ಲಾನ್ ಒಂದು ಪರೀಕ್ಷೆ ಮಾತ್ರ. ಪ್ರಸ್ತುತ ಅನ್ವಯವಾಗುವ ನೆಟ್ಫ್ಲಿಕ್ಸ್ ಯೋಜನೆಗಳು ಇಲ್ಲಿವೆ.
1. ಬೇಸಿಕ್ (ರೂ. 500) - ಎಸ್ಡಿ (ಸ್ಟ್ಯಾಂಡರ್ಡ್ ಡೆಫಿನಿಷನ್), ನೀವು 1 ಡಿವೈಸ್ ನಲ್ಲಿ ಏಕಕಾಲದಲ್ಲಿ ಸ್ಟ್ರೀಮ್ ಮಾಡಬಹುದು.
2. ಸ್ಟ್ಯಾಂಡರ್ಡ್ (ರೂ. 650) ಎಚ್ಡಿ (ಹೈ ಡೆಫಿನಿಷನ್) ಮತ್ತು ನೀವು 2 ಡಿವೈಸ್ಗಳಲ್ಲಿ ಏಕಕಾಲದಲ್ಲಿ ಸ್ಟ್ರೀಮ್ ಮಾಡಬಹುದು.
3. ಪ್ರೀಮಿಯಂ (ರೂ. 800) ಅಲ್ಟ್ರಾ ಎಚ್ಡಿ (ಹೈ ಡೆಫಿನಿಷನ್) ನೀವು ನಾಲ್ಕು ಡಿವೈಸ್ ಗಳಲ್ಲಿ ಏಕಕಾಲದಲ್ಲಿ ಸ್ಟ್ರೀಮ್ ಮಾಡಬಹುದು.

Read more about: money internet business
English summary

Netflix tests Rs 65 weekly, Rs 250 monthly plans in India

Online entertainment content service provider Netflix is testing cheaper plans in the country.
Story first published: Tuesday, April 9, 2019, 14:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X