For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯಾದಂದು ಷೇರು ಪೇಟೆಯ ಚಿತ್ರಣ ಹೀಗಿದೆ

|

ಬಾಂಬೆ ಷೇರುವಿನಿಮಯ ಕೇಂದ್ರದ ಹೆಗ್ಗುರುತಾದ ಸೆನ್ಸೆಕ್ಸ್ ಸೋಮವಾರದಂದು ಸುಮಾರು 453 ಪಾಯಿಂಟುಗಳಷ್ಟು ಕುಸಿತಕಂಡು ದಿನದ ಅಂತ್ಯದಲ್ಲಿ 362 ಪಾಯಿಂಟುಗಳಷ್ಟು ಇಳಿಕೆಯಲ್ಲಿ ಕೊನೆಗೊಂಡಿದೆ.

ಎಂದಿನಂತೆ ಈ ಭಾರಿ ಕುಸಿತದ ಹಿಂದೆ ಹೆಚ್ಚಿನ ಪ್ರಭಾವ ಬೀರಿರುವ ಕಂಪೆನಿಗಳೆಂದರೆ ಯೆಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್ ಡಿ ಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಎಸ್ ಬಿ ಐ, ಐಸಿಐಸಿಐ ಬ್ಯಾಂಕ್ ಗಳು ಹೆಚ್ಚಿನ ಒತ್ತಡದಿಂದ ಸೆನ್ಸೆಕ್ಸ್ ನ ಈ ಕುಸಿತಕ್ಕೆ ಮುಖ್ಯ ಕಾರಣವಾಗಿವೆ. ಈ ಒಂಬತ್ತು ಸಂಸ್ಥೆಗಳು ವಿತ್ತೀಯ ವಲಯಕ್ಕೆ ಸೇರಿವೆ. ಹಾಗೆಯೇ ಸೆನ್ಸೆಕ್ಸ್ ಏರಿಕೆ ಕಂಡಾಗ ಇದೆ ವಲಯದ ಕಂಪನಿಗಳು ಹೆಚ್ಚಿನ ಕೊಡುಗೆ ನೀಡುವುದು ಸಾಮಾನ್ಯ.

ಅಕ್ಷಯ ತೃತೀಯದಂದು ಈ 'ಆಸ್ತಿ'ಯನ್ನೂ ಖರೀದಿಸಬಹುದು, ಮಾರಾಟವೂ ಸಲೀಸುಅಕ್ಷಯ ತೃತೀಯದಂದು ಈ 'ಆಸ್ತಿ'ಯನ್ನೂ ಖರೀದಿಸಬಹುದು, ಮಾರಾಟವೂ ಸಲೀಸು

ಇಂತಹ ವಾತಾವರಣದಲ್ಲಿ ಮಿಂಚಿದ ಕಂಪನಿ ಎಂದರೆ ದೀಪಕ್ ನೈಟ್ರೇಟ್ ಷೇರಿನ ಬೆಲೆ ರೂ.304 ರವರೆಗೂ ಏರಿಕೆ ಕಂಡು ನಂತರ ರೂ.286ರ ಸಮೀಪ ಕೊನೆಗೊಂಡಿದೆ. ಇಂದು, ಅಂದರೆ ಅಕ್ಷಯ ತೃತೀಯಾದಂದು ಮತ್ತೆ ರೂ.290ರ ಸಮೀಪವಿದೆ.

ಅಕ್ಷಯ ತೃತೀಯಾದಂದು ಷೇರು ಪೇಟೆಯ ಚಿತ್ರಣ ಹೀಗಿದೆ

ಆಕರ್ಷಕ ಫಲಿತಾಂಶದೊಂದಿಗೆ ಪ್ರತಿ ಷೇರಿಗೆ ರೂ.12.50 ಯಂತೆ ಲಾಭಾಂಶ ಪ್ರಕಟಿಸಿರುವ ಟಾಟಾ ಕೆಮಿಕಲ್ಸ್ ಸುಮಾರು ರೂ.49ರಷ್ಟು ಏರಿಕೆ ಕಂಡುಕೊಂಡಿತು. ಇಂದು ಸಹ ಏರಿಕೆ ಮುಂದುವರೆದಿದೆ. ರೇಮಾಂಡ್, ಪಿ ಸಿ ಜ್ಯೂವೆಲ್ಲರ್ಸ್, ಬಿರ್ಲಾ ಕಾರ್ಪೊರೇಷನ್, ಅಲೆಂಬಿಕ್ ಫಾರ್ಮ ಗಳು ಏರಿಕೆ ಕಂಡುಕೊಂಡವು.

ಆದರೆ 1:1ರ ಅನುಪಾತದ ಬೋನಸ್ ಪ್ರಕಟಿಸಿದ ನಂತರ ರೂ.625 ಅನ್ನು ದಾಟಿದ್ದಂತಹ ಬಯೋಕಾನ್ ಷೇರಿನ ಬೆಲೆ ರೂ.539.95ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ರೂ.544.55 ರಲ್ಲಿ ಕೊನೆಗೊಂಡಿದೆ. ಇಂದು ಚುರುಕಾದ ಏರಿಕೆಯತ್ತ ತಿರುಗಿದೆ.

ಆರ್ಥಿಕ ವರ್ಷದ ಮೊದಲ ದಿನ ಷೇರು ಪೇಟೆ ಎಂಬ ಮಾಯೆ ಬಗ್ಗೆಆರ್ಥಿಕ ವರ್ಷದ ಮೊದಲ ದಿನ ಷೇರು ಪೇಟೆ ಎಂಬ ಮಾಯೆ ಬಗ್ಗೆ

ಪ್ರತಿ ಷೇರಿಗೆ ರೂ.9ರ ಲಾಭಾಂಶದೊಂದಿಗೆ ಉತ್ತಮ ಫಲಿತಾಂಶ ಪ್ರಕಟಿರುವ ಸಯಂಟ್ ಲಿಮಿಟೆಡ್ ರೂ.564.90ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ರೂ.568ರಲ್ಲಿ ಕೊನೆಗೊಂಡಿದೆ. ಇಂದು ಮತ್ತಷ್ಟು ಇಳಿಕೆ ಕಂಡಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಕಂಪನಿ 22ರಂದು ಕಂಪನಿಯ ಷೇರಿನ ಮುಖಬೆಲೆಯನ್ನು ರೂ.2 ರಿಂದ ರೂ.1ಕ್ಕೆ ಸೀಳಲು ಪರಿಶೀಲಿಸಲಿದೆ.

ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಇಂದಿನಿಂದ ಪ್ರತಿ ಷೇರಿಗೆ ರೂ.10ರ ಲಾಭಾಂಶ ರಹಿತ ವಹಿವಾಟು ಆರಂಭವಾಗಿದ್ದು ಷೇರಿನ ಬೆಲೆ ರೂ.675 ಸಮೀಪಕ್ಕೆ ಕುಸಿತ ಕಂಡಿದೆ.

ಒಂದು ಗಂಟೆಯಲ್ಲಿ ನೂರು ರುಪಾಯಿ ಏರುಪೇರು, ಷೇರು ಪೇಟೆ ಮಾಯೆ ಗುರೂಒಂದು ಗಂಟೆಯಲ್ಲಿ ನೂರು ರುಪಾಯಿ ಏರುಪೇರು, ಷೇರು ಪೇಟೆ ಮಾಯೆ ಗುರೂ

ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಬುಧವಾರ 8ರಂದು ಫಲಿತಾಂಶ ಮತ್ತು ಲಾಭಾಂಶಗಳನ್ನು ಪ್ರಕಟಿಸಲಿದ್ದು, ಷೇರಿನ ಬೆಲೆ ಕುಸಿತಕಂಡಿರುವುದು ಸೋಜಿಗವಾಗಿದೆ.

ಇದು ಸರಿಯಾಗಬಹುದೇ?

ರೂ. 5ರ ಮುಖಬೆಲೆಯ ಕೋಟಕ್ ಮಹಿಂದ್ರಾ ಬ್ಯಾಂಕ್ ಸುಮಾರು ರೂ.1,400ರ ಸಮೀಪ ವಹಿವಾಟಾಗುತ್ತಿದ್ದು, ಪ್ರತಿ ಷೇರಿಗೆ ರೂ.0.80ರ ಲಾಭಾಂಶ ಪ್ರಕಟಿಸಿದೆ.
ರೂ.10ರ ಮುಖಬೆಲೆಯ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಸುಮಾರು ರೂ.1,370ರ ಸಮೀಪ ವಹಿವಾಟಾಗುತ್ತಿದ್ದು, ಪ್ರತಿ ಷೇರಿಗೆ ರೂ.6.50ರ ಲಾಭಾಂಶ ಪ್ರಕಟಿಸಿದೆ.
ಅಂದರೆ ಕೋಟಕ್ ಬ್ಯಾಂಕ್ ಷೇರನ್ನು ರಿಲಯನ್ಸ್ ಇಂಡಸ್ಟ್ರೀಸ್ ಷೇರಿಗೆ ಪರಿವರ್ತಿಸಿಕೊಂಡಲ್ಲಿ ಹೂಡಿಕೆ ಮೌಲ್ಯವರ್ಧನೆಯಾಗಬಹುದೇ ಪರಿಶೀಲಿಸಿ ನಿರ್ಧರಿಸಿರಿ.

ವಿ.ಸೂ. : ಇದು ಲೇಖಕರ ಅಭಿಪ್ರಾಯ. ಪೇಟೆಯ ಚಲನೆಯು ಸ್ವತಂತ್ರವಾಗಿದ್ದು ಯಾವುದೇ ನಿರ್ದಿಷ್ಟ ರೀತಿಯಲ್ಲಿ ಚಲಿಸುವುದೆಂದು ಪೂರ್ವ ನಿರ್ಧರಿಸಲಾಗದು. ಸಂದರ್ಭವನ್ನರಿತು, ಸ್ವಂತ ನಿರ್ಧಾರದಿಂದ ಚಟುವಟಿಕೆ ನಡೆಸಿರಿ.

English summary

How stock market is doing in Akshaya Tritiya

How the stock market is doing in Akshaya Tritiya? Which company shares and down and which company doing well. Yes Bank, Bajaj Finance, HDFC, Axis Bank, IndusInd, Kotak, SBI, ICICI banks have lost share value. An analysis by KG Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X