For Quick Alerts
ALLOW NOTIFICATIONS  
For Daily Alerts

ಇಂಡಿಗೋ ಪ್ರವರ್ತಕರ ಕಿತ್ತಾಟ, ಸಂಸ್ಥೆ ಷೇರು ಇಳಿಮುಖ

|

ಇಂಡಿಗೋ ವಿಮಾನಯಾನ ನಿಯಂತ್ರಿಸುವ ಇಂಟರ್ ಗ್ಲೋಬಲ್ ಏವಿಯೇಷನ್ ಲಿಮಿಟೆಡ್ ಷೇರುಗಳು ಗುರುವಾರದಂದು ಶೇ7ರಷ್ಟು ಕುಸಿತ ಕಂಡಿವೆ. ಸಂಸ್ಥೆಯ ಪ್ರವರ್ತಕರಾದ ರಾಹುಲ್ ಭಾಟಿಯಾ ಹಾಗೂ ರಾಕೇಶ್ ಗಾಂಗ್ವಾಲ್ ನಡುವಿನ ಕಿತ್ತಾಟ ಈಗ ಕಾನೂನು ಸಮರಕ್ಕೆ ನಾಂದಿ ಹಾಡಿದೆ.

ರಾಕೇಶ್ ಅವರು ತಮ್ಮ ಕಡೆಯವರನ್ನು ನೇಮಿಸಿಕೊಂಡು ಸಂಸ್ಥೆಯ ಮೇಲೆ ಪೂರ್ಣ ನಿಯಂತ್ರಣ ಹೊಂದಲು ಯತ್ನಿಸುತ್ತಿದ್ದರು ಎಂದು ಭಾಟಿಯಾ ಆರೋಪಿಸಿದ್ದಾರೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಸಂಸ್ಥೆ ವಿಸ್ತರಣೆಗೆ ಅಡ್ಡಿಯುಂಟಾಗಿದೆ.

ಇಂಡಿಗೋ ಪ್ರವರ್ತಕರ ಕಿತ್ತಾಟ, ಸಂಸ್ಥೆ ಷೇರು ಇಳಿಮುಖ

ಭಾರತದ ವಿಮಾನಯಾನ ಮಾರುಕಟ್ಟೆಯಲ್ಲಿ ಸದ್ಯ ಮೋಡ ಕವಿದ ವಾತಾವರಣವಿದೆ. ಜೆಟ್ ಏರ್ ವೇಸ್ ನೆಲಕಚ್ಚುತ್ತಿದೆ. ಈ ಸಂದರ್ಭದ ಲಾಭ ಪಡೆಯಬೇಕಿದ್ದ ಇಂಡಿಗೋ ತನ್ನ ಆಂತರಿಕ ಸಮಸ್ಯೆಯಿಂದ ಹೊರಬರುತ್ತಿಲ್ಲ.

ಇಂಡಿಗೋ ಹಾಲಿಡೇ ಆಫರ್: 999ರುನಿಂದ ಟಿಕೆಟ್ ದರ ಶುರುಇಂಡಿಗೋ ಹಾಲಿಡೇ ಆಫರ್: 999ರುನಿಂದ ಟಿಕೆಟ್ ದರ ಶುರು

ಇಂಡಿಗೋ ಸಂಸ್ಥೆಯಲ್ಲಿ ರಾಹುಲ್ ಭಾಟಿಯಾ ಶೇ38.26ರಷ್ಟು ಪಾಲು ಹಾಗೂ ರಾಕೇಶ್ ಗಂಗ್ವಾಲ್ ಹಾಗೂ ಕುಟುಂಬಸ್ಥರು ಶೇ 36.99ರಷ್ಟು ಪಾಲು ಹೊಂದಿದ್ದಾರೆ. ಕಡಿಮೆ ದರ ಪ್ರಯಾಣವನ್ನು ಒದಗಿಸುವ ಇಂಡಿಗೋ ಸುಮಾರು 61,883 ಕೋಟಿ ರು ಮಾರುಕಟ್ಟೆ ಮೌಲ್ಯ ಹೊಂದಿದೆ.

225 ಏರ್ ಕ್ರಾಫ್ಟ್ ಹೊಂದಿರುವ ಇಂಡಿಗೀ ಪ್ರತಿ ದಿನ 1,400 ವಿಮಾನ ಹಾರಾಟ ಕಾಣುತ್ತಿದೆ. 54 ದೇಶಿ ಹಾಗೂ 17 ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳಲ್ಲಿ ಸಂಚರಿಸುತ್ತಿವೆ.

ದಿನದ ಅಂತ್ಯಕ್ಕೆ ಬಿಎಸ್ಇಯಲ್ಲಿ ಇಂಡಿಗೋ ಷೇರುಗಳು 1466ರುನಂತೆ 141.95 ರು ಕಳೆದುಕೊಂಡು 8.82% ನಂತೆ ವಹಿವಾಟು ನಡೆಸಿತ್ತು. ಎನ್ಎಸ್ ಇಯಲ್ಲಿ 1464.90 ರುನಂತೆ 145.45 ರು ಕಳೆದುಕೊಂಡು 9.03% ನಂತೆ ಇಳಿಮುಖವಾಗಿದೆ.

English summary

IndiGo Shares Drop Over 7% on Reports of Rift Between Promoters

Shares of Interglobe Aviation Ltd, which runs India’s most profitable airline IndiGo, slumped over 7% on Thursday on reports that differences have cropped up between the two promoters over managerial control of the company.
Story first published: Thursday, May 16, 2019, 16:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X