For Quick Alerts
ALLOW NOTIFICATIONS  
For Daily Alerts

ಗೂಳಿ ಅಬ್ಬರ! 10 ವರ್ಷಗಳಲ್ಲಿ ಸೆನ್ಸೆಕ್ಸ್ 1,421 ಪಾಯಿಂಟ್ ಏರಿಕೆ

ಮತಗಟ್ಟೆ ಸಮೀಕ್ಷೆಗಳು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಬಹುಮತ ದಾಖಲಿಸಲಿದೆ ಎಮದು ಭವಿಷ್ಯ ನುಡಿದಿದ್ದವು. ಇದು ಷೇರು ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರಿ ಸೆನ್ಸೆಕ್ಸ್ ಸೂಚ್ಯಂಕ ದಾಖಲೆ ಏರಿಕೆಯೊಂದಿಗೆ ಕೊನೆಗೊಂಡಿದೆ.

|

ಮತಗಟ್ಟೆ ಸಮೀಕ್ಷೆಗಳು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಬಹುಮತ ದಾಖಲಿಸಲಿದೆ ಎಮದು ಭವಿಷ್ಯ ನುಡಿದಿದ್ದವು. ಇದು ಷೇರು ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರಿ ಸೆನ್ಸೆಕ್ಸ್ ಸೂಚ್ಯಂಕ ದಾಖಲೆ ಏರಿಕೆಯೊಂದಿಗೆ ಕೊನೆಗೊಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳೆರಡೂ 2009 ರಿಂದ ಒಂದು ದಿನದಲ್ಲಿ ದಾಖಲೆಯ ಏರಿಕೆ ಸಾಧಿಸಿವೆ.

 
ಗೂಳಿ ಅಬ್ಬರ! 10 ವರ್ಷಗಳಲ್ಲಿ ಸೆನ್ಸೆಕ್ಸ್ 1,421 ಪಾಯಿಂಟ್ ಏರಿಕೆ

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 1,421.90 ಪಾಯಿಂಟ್ ಶೇ. 3.75) 39352.67 ಏರಿಕೆಯೊಂದಿಗೆ, ನಿಫ್ಟಿ ಸೂಚ್ಯಂಕ 421.10 ಅಂಕಗಳೊಂದಿಗೆ (ಶೇ. 3.69) 11,828.30 ಅಂಶ ಏರಿಕೆ ಸಾಧಿಸಿವೆ.

 

ಇಂಡಿಯಾಬುಲ್ಸ್ ಹೌಸಿಂಗ್, ಇಂಡಸ್ ಲ್ಯಾಂಡ್ ಬ್ಯಾಂಕ್, ಅದಾನಿ ಪೋರ್ಟ್, ಎಸ್ಬಿಐ ಮತ್ತು ಟಾಟಾ ಮೋಟಾರ್ಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿವೆ. ಆದರೆ ಡಾ. ರೆಡ್ಡೀಸ್ ಲ್ಯಾಬ್ಸ್, ಝೀ ಎಂಟರ್ಟೈನ್ಮೆಂಟ್, ಬಜಾಜ್ ಆಟೋ, ಟೆಕ್ ಮಹೀಂದ್ರಾ ಮತ್ತು ಇನ್ಫೋಸಿಸ್ ನಷ್ಟ ಅನುಭವಿಸಿವೆ.

ಪಿಎಸ್ಯು ಬ್ಯಾಂಕುಗಳು, ಇನ್ಫ್ರಾ, ಆಟೋ, ಎನರ್ಜಿ, ಎಫ್ಎಂಸಿಜಿ, ಮೆಟಲ್ ಮತ್ತು ಫಾರ್ಮಾ ಹೀಗೆ ಎಲ್ಲಾ ವಲಯದ ಸೂಚ್ಯಂಕಗಳು ಧನಾತ್ಮಕ ಫಲಿತಾಂಶದೊಂದಿಗೆ ಕೊನೆಗೊಂಡವು.
ಸೋಮವಾರದ ಆರಂಭಿಕ ವಹಿವಾಟಿನಲ್ಲಿ 900 ಅಂಕ ಜಿಗಿತದ ಮುನ್ನಡೆಯೊಂದಿಗೆ, ಬೆಳಿಗ್ಗೆ 10.50ರ ಸುಮಾರು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 940 ಪಾಯಿಂಟ್ ಏರಿಕೆ ಕಂಡು 38,870ಕ್ಕೆ ಹಾಗು ಎನ್ಎಸ್ಇ ನಿಫ್ಟಿ ಸೂಚ್ಯಂಕವೂ 284 ಅಂಕ ತಲುಪಿತ್ತು.

ಗುರುವಾರ ಹೊರಬೀಳಲಿರುವ ಲೋಕಸಭಾ ಫಲಿತಾಂಶ ಮತ್ತು ಎಕ್ಸಿಟ್‌ ಪೋಲ್‌ ಸೆನ್ಸೆಕ್ಸ್ ಏರಿಳಿತಕ್ಕೆ ಕಾರಣವಾಗಲಿದ್ದು, ಜೊತೆಗೆ ವಿದೇಶಿ ಷೇರುಪೇಟೆ ಪ್ರಭಾವ ಕೂಡ ಇರಲಿದೆ. ಲೋಕಸಭೆ ಚುನಾವಣೆ ಎಫೆಕ್ಟ್! ಸೆನ್ಸೆಕ್ಸ್ 900 ಅಂಕ ಜಿಗಿತ, ರೂಪಾಯಿ 86 ಪೈಸೆ ಏರಿಕೆ

English summary

Sensex vaults 1,422 pts, most in 10 years

BSE Sensex ended the day 3.75 per cent, or 1,422 points, higher at 39,352 levels.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X