For Quick Alerts
ALLOW NOTIFICATIONS  
For Daily Alerts

ಲೋಕಸಭೆ ಚುನಾವಣೆ ಎಫೆಕ್ಟ್! ಸೆನ್ಸೆಕ್ಸ್ 900 ಅಂಕ ಜಿಗಿತ, ರೂಪಾಯಿ 86 ಪೈಸೆ ಏರಿಕೆ

ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಮುಗಿದಿದ್ದು, ಮತಗಟ್ಟೆ ಸಮೀಕ್ಷೆಗಳು ನರೇಂದ್ರ ಮೋದಿ ನೇತೃತ್ವದ ಎನ್ಡಿಎಗೆ ಬಹುಮತ ಸಿಗಲಿದೆ ಎಂದು ಅಂದಾಜಿಸಿವೆ.

|

ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಮುಗಿದಿದ್ದು, ಮತಗಟ್ಟೆ ಸಮೀಕ್ಷೆಗಳು ನರೇಂದ್ರ ಮೋದಿ ನೇತೃತ್ವದ ಎನ್ಡಿಎಗೆ ಬಹುಮತ ಸಿಗಲಿದೆ ಎಂದು ಅಂದಾಜಿಸಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಅತಂತ್ರ ಸರಕಾರದ ಸಾಧ್ಯತೆ ಇಲ್ಲವೆಂದು ಹೇಳಿರುವುದು ಷೇರು ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.
ಗುರುವಾರ ಹೊರಬೀಳಲಿರುವ ಲೋಕಸಭಾ ಫಲಿತಾಂಶ ಮತ್ತು ಎಕ್ಸಿಟ್‌ ಪೋಲ್‌ ಸೆನ್ಸೆಕ್ಸ್ ಏರಿಳಿತಕ್ಕೆ ಕಾರಣವಾಗಲಿದ್ದು, ಜೊತೆಗೆ ವಿದೇಶಿ ಷೇರುಪೇಟೆ ಪ್ರಭಾವ ಕೂಡ ಇರಲಿದೆ.

 

940 ಅಂಕ ಜಿಗಿತ

940 ಅಂಕ ಜಿಗಿತ

ಕಳೆದ ವಾರ ತೀವ್ರ ಕುಸಿದಿದ್ದ ಕಂಡಿದ್ದ ಸೆನ್ಸೆಕ್ಸ್ ಸೂಚ್ಯಂಕ, ಅಂತಿಮ ಹಂತದ ಮತದಾನ ಪೂರ್ಣಗೊಂಡ ನಂತರ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 900 ಅಂಕ ಜಿಗಿತ ಕಂಡು ಮುನ್ನಡೆದಿದೆ.
ಬೆಳಿಗ್ಗೆ 10.50ರ ಸುಮಾರು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 940 ಪಾಯಿಂಟ್ ಏರಿಕೆ ಕಂಡು 38,870ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ ಸೂಚ್ಯಂಕವೂ 284 ಅಂಕಗಳ ಏರಿಕೆ ಕಂಡಿದೆ.
ಆದರೆ ಲೋಕಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಇದೇಲ್ಲವೂ ತಾತ್ಕಾಲೀನ ಬದಲಾವಣೆಗಳು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ರೂಪಾಯಿ ಮೌಲ್ಯ

ರೂಪಾಯಿ ಮೌಲ್ಯ

ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 86 ಪೈಸೆ ಏರಿಕೆಯಾಗಿ 69.44 ರೂಪಾಯಿಗಳಿಗೆ ತಲುಪಿದೆ. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ರೂಪಾಯಿ 70.22ಕ್ಕೆ ಕೊನೆಗೊಂಡಿತ್ತು.
ಭಾರತೀಯ ಷೇರು ಮಾರುಕಟ್ಟೆ ಮೂಲಕ ವಿದೇಶಿ ಹೂಡಿಕೆದಾರರು ಮೇ ತಿಂಗಳಲ್ಲಿ ರೂ. 6,399 ಕೋಟಿ ಹಣವನ್ನು ಹಿಂಪಡೆದಿದ್ದಾರೆ. ಲೋಕಸಭಾ ಚುನಾವಣೆಯ ಅನಿಶ್ಚಿತತೆ ಮತ್ತು ಅಮೆರಿಕ-ಚೀನಾ ವಾಣಿಜ್ಯ ಸಮರ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮೇಲೆ ಪ್ರಭಾವ ಬೀರಿವೆ.

ಕಳೆದ ವಾರದ ವಿಶೇಷತೆ?
 

ಕಳೆದ ವಾರದ ವಿಶೇಷತೆ?

ಕಳೆದ ವಾರ ಅಗ್ರ 10 ಕಂಪನಿಗಳ ಪೈಕಿ 9 ಕಂಪನಿಗಳಿಗೆ ಮಾರುಕಟ್ಟೆ ಬಂಡವಾಳವು ರೂ. 82,379.79 ಕೋಟಿ ಸೇರಿಕೊಂಡಿದೆ.
ಅಗ್ರ 10 ಕಂಪನಿಗಳ ಪೈಕಿ ಟಿಸಿಎಸ್ ಮಾರುಕಟ್ಟೆ ಮೌಲ್ಯ ಮಾತ್ರ ಕಡಿಮೆಯಾಗಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್‌ ಹೆಚ್ಚಿನ ಗಳಿಕೆ ಮಾಡಿದ್ದು, ಮಾರುಕಟ್ಟೆ ಬಂಡವಾಳ ರೂ. 17,685.54 ಕೋಟಿ ರೂ. 6,43,560 ಕೋಟಿಗಳಿಗೆ ಏರಿಕೆಯಾಗಿದೆ. ಕೋಟಕ್‌ ಮಹೀಂದ್ರ ಮೌಲ್ಯವು ರೂ. 12,531 ಕೋಟಿ ರೂ. 2,78,823 ಕೋಟಿಗೆ ಏರಿದೆ.

ಲಾಭದಾಯಕ ಸಂಸ್ಥೆಗಳು

ಲಾಭದಾಯಕ ಸಂಸ್ಥೆಗಳು

ಸೋಮವಾರದ ಬೆಳಗ್ಗಿನ ಅಗ್ರ ಲಾಭದಾಯಕಗಳಾದ ಮಾರುತಿ, ಲಾರ್ಸನ್‌, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಆರ್‌ಐಎಲ್‌, ಮಹೀಂದ್ರ, ಇಂಡಸ್ ಲ್ಯಾಂಡ್ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಮತ್ತು ವೇದಾಂತ ಷೇರುಗಳು ಶೇ. 4ರ ಭರ್ಜರಿ ಏರಿಕೆ ಕಂಡವು.
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 300ಕ್ಕೂ ಹೆಚ್ಚು ಸೀಟುಗಳನ್ನು ಗಳಿಸಿ ಸರ್ಕಾರ ರಚಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿರುವುದು ಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಕಾರಣವಾಗಿದೆ. ಮೇ 23 ಗುರುವಾರದಂದು ಮತ ಎಣಿಕೆ ನಡೆದು ಚುನಾವಣಾ ಫ‌ಲಿತಾಂಶ ಹೊರಬೀಳಲಿದೆ.

ಲೋಕಸಭಾ ಫಲಿತಾಂಶ ಪ್ರಭಾವ

ಲೋಕಸಭಾ ಫಲಿತಾಂಶ ಪ್ರಭಾವ

ಅಂತಿಮ ಹಂತದ ಮತದಾನ ಮುಗಿದ ನಂತರ ಷೇರುಪೇಟೆಯಲ್ಲಿ ಭಾರೀ ಬದಲಾವಣೆ ಕಂಡು, ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಏರಿಕೆಯಾದರೂ ಇದು ಶಾಶ್ವತ ಪರಿಣಾಮ ಬೀರಲ್ಲ. ಚೀನಾ-ಅಮೆರಿಕಾ ವಾಣಿಜ್ಯ ಸಮರ ಕೂಡ ಷೇರುಪೇಟೆ ಮೇಲೆ ಪ್ರರಿಣಾಮ ಬೀರಲಿದೆ. ಸೆನ್ಸೆಕ್ಸ್‌ ಏರಿದಾಗ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಿ ಲಾಭದ ಗಳಿಕೆ ಮಾಡಿಕೊಳ್ಳಬೇಕು. ಸೂಚ್ಯಂಕ ಕುಸಿದಾಗ ಲಾಭದಾಯಕ ಷೇರುಗಳನ್ನು ಖರೀದಿಸಲು ಮುಂದಾಗಬೇಕು.

English summary

Loka sabha election effect! Sensex rises over 900 points

The Indian rupee is off day's high but trading higher by by 86 paise at 69.44 per dollar
Story first published: Monday, May 20, 2019, 11:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X